ನಟ ಡಾಲಿ ಧನಂಜಯ್ ಅಭಿನಯದ 'ಗುರುದೇವ್ ಹೊಯ್ಸಳ' ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪುವಲ್ಲಿ ಯಶಸ್ವಿಯಾಗಿದೆ. ಧನಂಜಯ್ ಅವರ 25ನೇ ಸಿನಿಮಾ ಇದಾಗಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಡಾಲಿ ಗಮನ ಸೆಳೆದಿದ್ದಾರೆ. ಚಿತ್ರ ಸಕ್ಸಸ್ಫುಲ್ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಡಾಲಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಚಿತ್ರದ ನಿರ್ಮಾಪಕರಾದ ಯೋಗಿ ರಾಜ್ ಮತ್ತು ಕಾರ್ತಿಕ್ ಗೌಡ ಅವರು ದುಬಾರಿ ಮೌಲ್ಯದ ಕಾರನ್ನು ಡಾಲಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ.
ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ನಟನೆಯ ಹೊಯ್ಸಳ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಜನರ ಉತ್ತಮ ಪ್ರತಿಕ್ರಿಯೆಯನ್ನು ಕಂಡು ಚಿತ್ರತಂಡ ಖುಷಿಯಾಗಿದ್ದಾರೆದೆ. ಹೀಗಾಗಿಯೇ ಗುರುದೇವ್ ಹೊಯ್ಸಳ ನಿರ್ಮಾಪಕರು ಡಾಲಿಗೆ 1 ಕೋಟಿ ರೂಪಾಯಿ ಬೆಲೆ ಬಾಳುವ Toyota Vellfire ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
"25ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ. ಲವ್ ಯೂ, ನಾವು ಒಟ್ಟಿಗೆ ಮಾಡಲಿರುವ ಹೆಚ್ಚು ಹೆಚ್ಚು ಕೆಲಸಗಳಿಗಾಗಿ ಚೀರ್ಸ್. ಇಂತಹ ಒಳ್ಳೆಯ ನೆನಪುಗಳಿಗಾಗಿ ಧನ್ಯವಾದಗಳು. ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ" ಎಂದು ಡಾಲಿ ಸಂತಸದ ಟ್ವೀಟ್ ಮಾಡಿದ್ದಾರೆ. ಅವರು ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಧನಂಜಯ್, ಕಾರ್ತಿಕ್ ಮತ್ತು ಯೋಗಿ ರಾಜ್ ಹೊಸ ಕಾರಿನ ಬಳಿ ನಿಂತಿರುವುದನ್ನು ಕಾಣಬಹುದು.
ಇದನ್ನೂ ಓದಿ:ನಾಳೆ ತೆರೆ ಮೇಲೆ ಅಬ್ಬರಿಸಲಿರುವ 'ಗುರುದೇವ್ ಹೊಯ್ಸಳ'; ರಾಣಿ ಜೊತೆ ಲೈವ್ ಬಂದ ಧನಂಜಯ್