ಚಂಡೀಗಢ: ಪಂಜಾಬಿ ಚಿತ್ರ 'ಜೋಡಿ ತೇರಿ ಮೇರಿ' ಚಿತ್ರಕ್ಕೆ ಪಂಜಾಬಿನ ಲೂಧಿಯಾನ ಕೋರ್ಟ್ ತಡೆಯಾಜ್ಞೆ ನೀಡಿದೆ. ದಿಲ್ಜಿತ್ ದೊಸಾಂಜೆ ನಟಿಸಿರುವ ಈ ಚಿತ್ರ ಪಂಜಾಬಿ ಗಾಯಕ ಅಮರ್ ಸಿಂಗ್ ಚಮ್ಕಿಲಾ ಮತ್ತು ಆತನ ಎರಡನೇ ಹೆಂಡತಿ ಅಮರ್ಜೋತ್ ಕೌರ್ ಜೀವನವನ್ನು ಒಳಗೊಂಡಿದೆ. ಈ ಚಿತ್ರವನ್ನು ಅಂಬರ್ದೀಪ್ ನಿರ್ಮಿಸಿದ್ದು, ಮೇ 5ರಂದು ಚಿತ್ರ ತೆರೆ ಕಾಣಲು ಸಜ್ಜಾಗಿತ್ತು.
ಇದೀಗ ಚಿತ್ರ ಬಿಡುಗಡೆಗೆ ತಡೆ ನೀಡಿರುವ ಸಿವಿಲ್ ನ್ಯಾಯಾಧೀಶರಾದ ಕರಣ್ದೀಪ್ ಕೌರ್, ಈ ಸಂಬಂಧ ದೊಸಾಂಜ್, ನಟ ನಿಮ್ರಾತ್ ಕೌರ್, ಚಮ್ಕಿಲಿ ಅವರ ಹಂಡತಿ, ಕರಾಂಜ್ ಗಿಲ್ ಆಫ್ ರಿಥಮ್ ಬಾಯ್ಸ್ ಎಂಟರ್ಟೈನಮೆಂಟ್ ಪ್ರವೈಟ್ ಲಿಮಿಟೆಡ್ ಸಮನ್ಸ್ ಜಾರಿ ಮಾಡಿದ್ದಾರೆ. ಮುಂದಿನ ವಿಚಾರಣೆಯನ್ನು ಮೇ 8ಕ್ಕೆ ನಿಗದಿ ಪಡಿಸಲಾಗಿದೆ.
ಇದಕ್ಕೆ ಮುಂಚೆ ಇದೇ ಗಾಯಕನ ಜೀವನಾಧಾರಿತ ಮತ್ತೊಂದು ಚಿತ್ರ 'ಚಮ್ಕಿಲಾ' ಸಿನಿಮಾ ಪ್ರದರ್ಶನ, ಬಿಡುಗಡೆ ಮತ್ತು ಪ್ರಸಾರಕ್ಕೆ ಲೂಧಿಯಾನದ ಮತ್ತೊಂದು ಸ್ಥಳೀಯ ಕೋರ್ಟ್ ತಡೆ ನೀಡಿತ್ತು. ಇದೀಗ 'ಜೋಡಿ ತೇರಿ ಮೇರಿ'ಗೂ ತಡೆ ನೀಡಲಾಗಿದೆ. ಇಮ್ತಿಯಾಜ್ ಆಲಿ ಅವರ 'ಚಮ್ಕಿಲಾ' ಚಿತ್ರದಲ್ಲಿ ದೊಸಾಂಜಾ ಮತ್ತು ನಟಿ ಪ್ರಣೀತಾ ಚೋಪ್ರಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಪಂಜಾಬ್ನಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಯಲ್ಲಿ 'ಚಮ್ಕಿಲಾ' ಮತ್ತು ಅಮರ್ಜೋತ್ ಕೌರ್ ಅವರನ್ನು 1988ರಲ್ಲಿ ಮಾರ್ಚ್ 8ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.