ಬಾಲಿವುಡ್ನ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ನಟಿ ಭೂಮಿ ಪೆಡ್ನೇಕರ್ ಇತ್ತೀಚೆಗೆ ಬಾಲಿವುಡ್ ಜೋಡಿಯ ಮದುವೆ ಆರತಕ್ಷತೆಯಲ್ಲಿ ಅಪರಿಚಿತ ವ್ಯಕ್ತಿಗೆ ಕಿಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದರು. ಇದೀಗ ಮತ್ತೊಮ್ಮೆ ಬಿಸಿ ಬಿಸಿ ಸುದ್ದಿಯಲ್ಲಿದ್ದಾರೆ ಬಾಲಿವುಡ್ ಬ್ಯೂಟಿ ಭೂಮಿ ಪೆಡ್ನೇಕರ್. ಕಿಸ್ ಸುದ್ದಿ ವೈರಲ್ ಆದ ಸ್ವಲ್ಪ ದಿನದಲ್ಲೇ ಇದೀಗ ಭೂಮಿ ಪಡ್ನೇಕರ್ ಬಾಯ್ಫ್ರೆಂಡ್ ಎಂದು ಹೇಳಲಾಗುತ್ತಿರುವ ಅಪರಿಚಿತ ವ್ಯಕ್ತಿ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಹಸೆಮಣೆ ಏರಿದ ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಮದುವೆ ಆರತಕ್ಷತೆಯಲ್ಲಿ ಭೂಮಿ ಪೆಡ್ನೇಕರ್ ಎರಡು ವಿಷಯಗಳಿಗೆ ಹೆಚ್ಚು ಸುದ್ದಿಯಾಗಿದ್ದರು. ಒಂದು ಅವರ ಬೋಲ್ಡ್ ಸ್ಟೈಲ್ ಸ್ಟೇಟ್ಮೆಂಟ್ಗೆ ಹಾಗೂ ಇನ್ನೊಂದು ಒಬ್ಬ ಅಪರಿಚಿತ ವ್ಯಕ್ತಿ ಜೊತೆಗಿನ ಕಿಸ್ ವಿಷಯ ವೈರಲ್ ಆಗಿತ್ತು.
ಭಾನುವಾರ ರಾತ್ರಿ ಭೂಮಿ ತಮ್ಮ ತಂಗಿ ಸಮೀಕ್ಷಾ ಪೆಡ್ನೇಕರ್ ಅವರ ಬರ್ತ್ಡೇಯನ್ನು ಮುಂಬೈನಲ್ಲಿ ತಮ್ಮ ಆಪ್ತ ಸ್ನೇಹಿತರೊಂದಿಗೆ ಆಚರಿಸಿದ್ದಾರೆ. ಪಾರ್ಟಿಯಲ್ಲಿ ಬೀಜ್ ಕಾರ್ಸೆಟ್ ಟಾಪ್ ಹಾಗೂ ಅದಕ್ಕೆ ಮ್ಯಾಚ್ ಆಗುವ ಲೆದರ್ ಪ್ಯಾಂಟ್ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಮೀಕ್ಷಾ ಪೆಡ್ನೇಕರ್ ಬರ್ತ್ಡೇ ಪಾರ್ಟಿಯಲ್ಲಿ ನೈಸಾ ದೇವಗನ್, ಓರ್ಹಾನ್ ಅವತ್ರಮನಿ ಅಲಿಯಾಸ್ ಆರ್ರಿ ಹಾಗೂ ಭೂಮಿ ಪಡ್ನೇಕರ್ ಅವರ ಬಾಯ್ಫ್ರೆಂಡ್ ಎಂದು ಹೇಳಲಾಗುತ್ತಿರುವ ಬಿಲ್ಡರ್ ಯಶ್ ಕಟಾರಿಯಾ ಕೂಡ ಪಾಲ್ಗೊಂಡಿದ್ದರು.
ಸಮೀಕ್ಷಾ ಪೆಡ್ನೇಕರ್ ಬರ್ತ್ಡೇ ಪಾರ್ಟಿಯ ಕೆಲವೊಂದು ಫೋಟೋಗಳನ್ನು ಆರ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆರ್ರಿ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ಭೂಮಿ ಪೆಡ್ನೇಕರ್ ಹಾಗೂ ಯಶ್ ಕಟಾರಿಯಾ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಲವ್ಬರ್ಡ್ಸ್ ಎಂದು ಹೇಳಲಾಗುತ್ತಿರುವ ಇಬ್ಬರೂ ಕೂಡ ಆರ್ರಿ ಜೊತೆಗೆ ಬೇರೆ ಬೇರೆ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಕಟಾರಿಯಾ ಮುಂಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಬಿಲ್ಡರ್ ಆಗಿದ್ದಾರೆ.
ಈ ಹಿಂದೆಯೂ ನಟಿ ಭೂಮಿ ಪೆಡ್ನೇಕರ್ ಯಶ್ ಕಟಾರಿಯಾ ಹಾಗೂ ತನ್ನ ಸಹೋದರಿ, ಕೆಲವು ಸ್ನೇಹಿತರ ಜೊತೆಗೆ ಹಾಲಿಡೇ ಟ್ರಿಪ್ ಕೂಡ ಹೋಗಿದ್ದರು. ಅದಲ್ಲದೆ ಈ ಲವ್ಬರ್ಡ್ಸ್ ಎಂದು ಹೇಳಲಾಗುತ್ತಿರುವ ಜೋಡಿ 2023 ಹೊಸ ವರ್ಷವನ್ನು ಮೆಕ್ಸಿಕೋದ ತುಲುಮ್ನಲ್ಲಿ ಜೊತೆಯಾಗಿ ಸ್ವಾಗತಿಸಿದ್ದಾರೆ. ಆಗ ಭೂಮಿ ಪಡ್ನೇಕರ್ ಕೆಲವು ಫೋಟೋಗಳು ಹಾಗೂ ವೀಡಿಯೋಗಳನ್ನು ಹಂಚಿಕೊಂಡಿದ್ದರು. ಆದರೆ ಅವುಗಳಲ್ಲಿ ಯಶ್ ಹಾಗೂ ಭೂಮಿ ಪೆಡ್ನೇಕರ್ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎನ್ನುವುದಕ್ಕೆ ಯಾವುದೇ ಹಿಂಟ್ಗಳಿರಲಿಲ್ಲ.
ಸಿನಿಮಾ ವಿಷಯಕ್ಕೆ ಬಂದರೆ ಭೂಮಿ ಪೆಡ್ನೇಕರ್ ಅವರ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಈ ವರ್ಷ ಮತ್ತು ಮುಂದಿನ ವರ್ಷ ಇವರು ಅಭಿನಯದ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. 2023 ಒಬ್ಬ ಕಲಾವಿದೆಯಾಗಿ ನನಗೆ ಉತ್ತಮ ವರ್ಷವಾಗಿರಲಿದೆ ಎಂದು ಈ ಹಿಂದೆ ನಟಿ ಹೇಳಿಕೊಂಡಿದ್ದರು. ಅನುಭವ್ ಸಿನ್ಹಾ ಅವರ ಭೀದ್, ಅಜಯ್ ಬಹ್ಲ್ ಅವರ 'ದ ಲೇಡಿ ಕಿಲ್ಲರ್', ಸುಧೀರ್ ಮಿಶ್ರಾ ಅವರ ಅಫ್ವಾ, ಭಕ್ಷಕ್ ಅವರ ಪುಲ್ಕಿಟ್ ಹಾಗೂ ಮುದಸ್ಸರ್ ನಿರ್ದೇಶನದ 'ಮೇರೆ ಹಸ್ಬೆಂಡ್ ಕಿ ಬೀವಿ' ಸಿನಿಮಾಗಳು ಸದ್ಯ ಭೂಮಿ ಪಡ್ನೇಕರ್ ಅವರ ಬತ್ತಳಿಕೆಯಲ್ಲಿವೆ.
ಇದನ್ನೂ ಓದಿ:'ಸ್ನೇಹಿತರು ಫೋಟೋಗೆ ಫೋಸ್ ಕೇಳಿದ್ರೆ ನಾನು ಹೀಗೆ..': ಶಕ್ತಿಮಾನ್ ಲುಕ್ನಲ್ಲಿ ರಶ್ಮಿಕಾ ಮಂದಣ್ಣ