ಕರ್ನಾಟಕ

karnataka

ETV Bharat / entertainment

29 ವರ್ಷಗಳ ಬಳಿಕ ಮತ್ತೊಮ್ಮೆ ಆಮೀರ್​ - ಸಲ್ಮಾನ್​ ಜೋಡಿ; ಸ್ಪಾನಿಷ್​ ರಿಮೇಕ್​ ಚಿತ್ರದಲ್ಲಿ ಸೂಪರ್​ ಸ್ಟಾರ್​ಗಳು - ನಟ ಆಮೀರ್​ ತಮ್ಮ ಗೆಳೆಯ

1994ರಲ್ಲಿ ಅಂದಾಜ್​ ಅಪ್ನಾ ಅಪ್ನಾ ಚಿತ್ರದಲ್ಲಿ ನಟಿಸಿದ್ದ ಈ ಜೋಡಿ ಇದೀಗ ಮೂರು ದಶಕಗಳ ಬಳಿಕ ಒಟ್ಟಿಗೆ ಕಾರ್ಯ ನಿರ್ವಹಿಸಲು ಮುಂದಾಗಿದ್ದಾರೆ. ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ

29 ವರ್ಷಗಳ ಬಳಿಕ ಮತ್ತೊಮ್ಮೆ ಆಮೀರ್​- ಸಲ್ಮಾನ್​ ಜೋಡಿ; ಸ್ಪಾನಿಷ್​ ರಿಮೇಕ್​ ಚಿತ್ರದಲ್ಲಿ ಸೂಪರ್​ ಸ್ಟಾರ್​ಗಳು
After 29 years Aamir-Salman pair again; Super stars in the Spanish remake

By

Published : Feb 21, 2023, 12:13 PM IST

ಮುಂಬೈ:ಬಾಲಿವುಡ್​ ಪರ್ಫೆಕ್ಷನಿಸ್ಟ್​ ಆಮೀರ್​ ಖಾನ್​ ಅವರ 'ಲಾಲ್​ ಸಿಂಗ್​ ಚಡ್ಡಾ' ಹೇಳಿಕೊಳ್ಳುವಂತಹ ಯಶಸ್ಸು ತಂದು ಕೊಡಲಿಲ್ಲ. ಈ ಸಿನಿಮಾದ ಬಳಿಕ ಚಿತ್ರಗಳಿಂದ ಅಂತರ ಕಾಯ್ದುಕೊಂಡಿದ್ದ ನಟ ಆಮೀರ್​ ಖಾನ್​ ನಿವೃತ್ತಿ ಬಗ್ಗೆ ಕೂಡ ಮಾತನಾಡಿದ್ದರು. ಈ ಎಲ್ಲದರ ನಡುವೆ ಅವರು ಸದ್ದಿಲ್ಲದ್ದೇ ತಮ್ಮ ಮುಂದಿನ ಸಿನಿಮಾದಲ್ಲಿ ಕೆಲಸ ಮಾಡಲು ಸಿದ್ದರಾಗಿದ್ದಾರೆ. ಈ ಬಾರಿ ನಟ ಆಮೀರ್​ ತಮ್ಮ ಗೆಳೆಯ, ಅಂದಾಜ್​ ಅಪ್ನಾ ಅಪ್ನಾ ಸಹ ನಟನಾಗಿರುವ ಸಲ್ಮಾನ್​ ಜೊತೆ ಕಾರ್ಯ ನಿರ್ವಹಿಸಲಿದ್ದಾರೆ. ಈ ಇಬ್ಬರು ನಟರು ಮೂರು ದಶಕಗಳ ಬಳಿಕ ಇದೀಗ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.

ವರದಿ ಅನುಸಾರ, ಸದ್ಯ ಅಮೀರ್ ಖಾನ್​ ಸ್ಪಾನಿಷ್​ ಚಿತ್ರ​​ 'ಕ್ಯಾಂಪಿಯೋನ್ಸ್' ಹಿಂದಿ ರಿಮೇಕ್​ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಸಲ್ಮಾನ್​ ಜೊತೆ ಮಾತುಕತೆ ನಡೆಸಿದ್ದಾರೆ. ಈ ಸಿನಿಮಾಗಾಗಿ ಬಹು ಕಾಲದ ನಂತರ ಇಬ್ಬರು ಸ್ನೇಹಿತರು ಒಟ್ಟಾಗಿ ಕಾರ್ಯ ನಿರ್ವಹಿಸಲು ಸಮ್ಮತಿ ಸೂಚಿಸಿದ್ದಾರೆ. ಸದ್ಯ ಕ್ಯಾಂಪಿಯೋನ್ಸ್​​ ಚಿತ್ರದ ಪ್ರಿ ಪ್ರೊಡಕ್ಷನ್​ ಭರದಿಂದ ಸಾಗುತ್ತಿದ್ದು, ಇಬ್ಬರೂ ಸೂಪರ್​ ಸ್ಟಾರ್​ ನಟರು, ಸ್ಥಳ, ಶೂಟಿಂಗ್​ ಸಮಯ ಸೇರಿದಂತೆ ಇನ್ನಿತರ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ಸಾಗಿದರೆ, 'ಕ್ಯಾಂಪಿಯೋನ್ಸ್​' ಸಿನಿಮಾ ತಂಡ ಇದೆ 2023ರ ಜೂನ್​ನಿಂದ ಶೂಟಿಂಗ್​​ ಆರಂಭಿಸಲಿದೆ. ಸದ್ಯ ಈ ಬಗ್ಗೆ ಯಾವುದೇ ವಿಷಯ ಬಹಿರಂಗಗೊಳಿಸಿಲ್ಲ. ಈ ಚಿತ್ರಕ್ಕೆ ಸಲ್ಮಾನ್​ ಖಾನ್​ ಇನ್ನು ಸಹಿ ಮಾಡಿಲ್ಲ ಎನ್ನಲಾಗಿದೆ. 'ಕ್ಯಾಂಪಿಯೋನ್ಸ್'​ ಚಿತ್ರದ ಕುರಿತು ಅಂತಿಮ ಕಥೆಯನ್ನು ಕೇಳಿದ ಬಳಿಕ ಅವರು ಇದಕ್ಕೆ ಸಮ್ಮತಿ ಸೂಚಿಸಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂತಿಮವಾದರೆ, ಈ ಕುರಿತು ಅಪ್​ಡೇಟ್​ ಅನ್ನು ಸಲ್ಮಾನ್​ ಮಾರ್ಚ್​ನಲ್ಲಿ ನಡೆಯಲಿರುವ ಹುಟ್ಟುಹಬ್ಬದಂದು ಹೊರಬೀಳಲಿದೆ.

1994ರಲ್ಲಿ ಆಮೀರ್​ ಮತ್ತು ಸಲ್ಮಾನ್​ ಒಟ್ಟಿಗೆ ಅಂದಾಜ್​ ಅಪ್ನಾ ಅಪ್ನಾ ಚಿತ್ರದಲ್ಲಿ ನಟಿಸಿದ್ದರು. ಇದೀಗ, ಚಾಂಪಿಯನ್​ ಮೂಲಕ ಒಂದಾಗಿ ನಟಿಸಲಿದ್ದಾರೆ. ಈ ಚಿತ್ರವನ್ನು ಆಮೀರ್​ ನಿರ್ಮಾಣ ಮಾಡುತ್ತಿದ್ದಾರೆ. ಜೂನ್​ನಲ್ಲಿ ಈ ಚಿತ್ರ ಆರಂಭವಾದರೆ, ಈ ಚಿತ್ರ ಈ ವರ್ಷಾಂತ್ಯಕ್ಕೆ ಸಿನಿಮಾ ಚಿತ್ರೀಕರಣ ಮುಗಿಸಲಿದೆ.

ಇನ್ನು ಈ ಚಿತ್ರದ ಕುರಿತು ಮಾತನಾಡಿರುವ ಆಮೀರ್​ ಖಾನ್​, ಕ್ಯಾಂಪಿಯೋನ್ಸ್​ ಅನ್ನು ಹಿಂದಿ ಅವತರಣಿಕೆಯಲ್ಲಿ ಮಾಡುವ ಉದ್ದೇಶ ಹೊಂದಿರುವ ಬಗ್ಗೆ ತಿಳಿಸಿದ್ದರು. 'ಕ್ಯಾಂಪಿಯೋನ್ಸ್' ಚಿತ್ರವನ್ನು ಹೃದಯ ಸ್ಪರ್ಶಿಯಾಗಿ ಬರೆದಿದ್ದು, ಇದು ಉತ್ತಮ ಚಿತ್ರವಾಗಲಿದೆ ಎಂಬ ನಂಬಿಕೆ ಇದೆ ಎಂಬ ಕುರಿತು ದೆಹಲಿಯಲ್ಲಿ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಈ ಚಿತ್ರವನ್ನು ಸೋನಿ ಪಿಕ್ಚರ್ಸ್​ ಇಂಟರ್​ನ್ಯಾಷನಲ್​ ಪ್ರೊಡಕ್ಷನ್​ ಮತ್ತು 200ನಾಟ್​ ಔಟ್​ ನಿರ್ಮಾಣ ಮಾಡುತ್ತಿದೆ.

2018 ರಲ್ಲಿ ಬಿಡುಗಡೆಯಾದ 'ಕ್ಯಾಂಪಿಯೋನ್ಸ್' ಚಿತ್ರವನ್ನು ಜೇವಿಯರ್ ಫ್ರೆಸ್ಸರ್ ನಿರ್ದೇಶಿಸಿದ್ದರು. 2018 ರಲ್ಲಿ ಅತಿ ಹೆಚ್ಚು ಗಳಿಸಿದ ಸ್ಪ್ಯಾನಿಷ್ ಭಾಷೆಯ ಚಲನಚಿತ್ರವಾಯಿತು. ಪುಟ್ಬಾಲ್​ ಆಟಗಾರರ ಕಥೆಯನ್ನು ಹೊಂದಿರುವ ಈ ಹಾಸ್ಯ ಭರಿತ ಚಿತ್ರ ಸ್ಪೇನ್​ನಲ್ಲಿ ಭಾರೀ ಸದ್ದು ಮಾಡಿತು.

ಇದನ್ನೂ ಓದಿ: ಶಾರುಖ್​ ಖಾನ್​ ಮೇಲೆ ಎಫ್​ಐಆರ್​ ದಾಖಲಿಸುವುದಾಗಿ ಹೇಳಿದ ಅಭಿಮಾನಿ.. ಕಾರಣ ಏನು?

ABOUT THE AUTHOR

...view details