ಬಾಲಿವುಡ್ ನಟರನ್ನು ಕಂಡಾಕ್ಷಣ ಅವರ ಅಭಿಮಾನಿಗಳು ಅತಿರೇಕದ ವರ್ತನೆ ತೋರುವುದುಂಟು. ಇತ್ತೀಚೆಗಷ್ಟೇ ಗಾಯಕ ಸೋನು ನಿಗಂ ಸೆಲ್ಫಿಗೆ ಪೋಸ್ ನೀಡಲಿಲ್ಲ ಎಂದು ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿತ್ತು. ಇಂತಹ ಹುಚ್ಚು ಅಭಿಮಾನಿಗಳಿಂದ ಬಾಲಿವುಡ್ ಮಂದಿ ಮುಜುಗರ ಮತ್ತು ಸಂಕಷ್ಟಕ್ಕೂ ಒಳಗಾಗುತ್ತಾರೆ. ಇಂಥದ್ದೇ ಘಟನೆಯನ್ನು ನಟ ಆದಿತ್ಯ ರಾಯ್ ಕಪೂರ್ ಕೂಡಾ ಎದುರಿಸಿದ್ದಾರೆ.
ಬಾಲಿವುಡ್ನ ಹ್ಯಾಂಡ್‌ಸಮ್ ನಟರಲ್ಲೊಬ್ಬರು ಆದಿತ್ಯ ರಾಯ್ ಕಪೂರ್. ತನ್ನ ಹೊಳೆಯುವ ಕಣ್ಣು, ನಗುವಿನ ಮೂಲಕವೇ ಮನಸೆಳೆಯುವ ನಟನಿಗೆ ಮಹಿಳಾಭಿಮಾನಿಗಳ ಸಂಖ್ಯೆ ಕಡಿಮೆ ಇಲ್ಲ. ಇದೀಗ ಇಂತಹ ಮಹಿಳಾ ಅಭಿಮಾನಿಯೊಬ್ಬರಿಂದ ಸಾರ್ವಜನಿಕವಾಗಿ ಮುಜುಗರಗೊಂಡಿದ್ದಾರೆ. ಅಭಿಮಾನಿಯೊಬ್ಬರು ಅವರನ್ನು ತನ್ನತ್ತ ಎಳೆದು ಮುತ್ತಿಕ್ಕಲು ಮುಂದಾಗಿದ್ದಾರೆ. ಈ ವೇಳೆ ಕಪೂರ್ ಅರೆಕ್ಷಣ ತಬ್ಬಿಬ್ಬುಕೊಂಡಿದ್ದಾರೆ.