ಬಾಲಿವುಡ್ ನಟರಾದ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. 2022 ರಲ್ಲಿ ಆದಿಪುರುಷ್ ನಟಿ ಕೃತಿ ಸನೋನ್ ಅವರು ಅಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಆದಿತ್ಯ ಮತ್ತು ಅನನ್ಯಾ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಅಂದಿನಿಂದ ಡೇಟಿಂಗ್ ವದಂತಿಗಳು ಪ್ರಾರಂಭವಾಗಿವೆ.
ಆದಿತ್ಯ ಅನನ್ಯಾ ಡೇಟಿಂಗ್ ವದಂತಿ: ದಿವಾಲಿ ಪಾರ್ಟಿ ಅಲ್ಲದೇ ಅವರು ವಿವಿಧ ಸಂದರ್ಭಗಳಲ್ಲಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಪ್ರೇಮ ಪಕ್ಷಿಗಳಂತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ವದಂತಿಗಳಿಗೆ ಎಣ್ಣೆ ತುಪ್ಪ ಸುರಿದಂತಿದೆ. ಈ ರೂಮರ್ ಲವ್ ಬರ್ಡ್ಸ್ ಇತ್ತೀಚೆಗೆ ಸ್ಪೇನ್‌ನಲ್ಲಿ ನಡೆದ ಈವೆಂಟ್ ಒಂದರಲ್ಲಿ ಭಾಗವಹಿಸಿ ಮತ್ತೆ ಸುದ್ದಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳು ವೈರಲ್ ಆಗಿವೆ.
ಸ್ಪೇನ್ ಈವೆಂಟ್ ಎಂಜಾಯ್ ಮಾಡಿದ ಪ್ರೇಮ ಪಕ್ಷಿಗಳು:ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಮ್ಯೂಸಿಕಲ್ ಈವೆಂಟ್ನ (Arctic Monkeys concert) ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸ್ಪೇನ್‌ನಲ್ಲಿ ಸಂಗೀತ ಸಮಾರಂಭವನ್ನು ಆನಂದಿಸುತ್ತಿರುವ ವಿಡಿಯೋವನ್ನು ಅನನ್ಯಾ ಪಾಂಡೆ ತಮ್ಮ ಇನ್ಸ್ಟಾ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ. ಹಾರ್ಟ್ ಎಮೋಜಿಯೊಂದಿಗೆ ನನ್ನ ಮೆಚ್ಚಿನ ಹಾಡು ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಆದಿತ್ಯ ಅವರು ಈವೆಂಟ್ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೋಲ್ಡ್ ಬ್ಲ್ಯೂ ಫೇಸ್ ಎಮೋಜಿ ಮತ್ತು ಮಂಕಿ ಎಮೋಜಿಯನ್ನು ಹಾಕಿಕೊಂಡಿದ್ದಾರೆ.