ಬಾಲಿವುಡ್ ರೂಮರ್ ಲವ್ ಬರ್ಡ್ಸ್ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಮುಂಬೈನಲ್ಲಿ ನಡೆದ 'ಖೋ ಗಯೇ ಹಮ್ ಕಹಾನ್' ಸ್ಕ್ರೀನಿಂಗ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದು ಅನನ್ಯಾ ಪಾಂಡೆ ನಟನೆಯ ಚಿತ್ರವಾಗಿದ್ದು, ಗೆಳತಿಗೆ ಸಾಥ್ ನೀಡಲು ಗೆಳೆಯ ಆಗಮಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವದಂತಿಯ ಪ್ರೇಮಪಕ್ಷಿಗಳು ಪ್ರತ್ಯೇಕವಾಗಿ ಆಗಮಿಸಿದ್ದರೂ, ಪಾಪರಾಜಿಗಳ ಕ್ಯಾಮರಾಗಳಿಗೆ ಒಟ್ಟಿಗೆ ಪೋಸ್ ನೀಡಿದರು. ಈ ಮೂಲಕ ಕಳೆದೊಂದು ವರ್ಷದಿಂದ ಹರಡುತ್ತಿರುವ ಪ್ರೇಮ ವದಂತಿಗಳಿಗೆ ತುಪ್ಪ ಸುರಿದಿದ್ದಾರೆ. ಜೋಡಿ ತಾವು ಪ್ರೀತಿಯಲ್ಲಿರುವುದಾಗಿ ಈವರೆಗೆ ಹೇಳಿಕೊಂಡಿಲ್ಲ. ಆದ್ರೆ ಆಗಾಗ್ಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇವರ ವಿಡಿಯೋಗಳನ್ನು ನೋಡಿದವರ ಪೈಕಿ ಹಲವರು ಅನನ್ಯಾ ಆದಿತ್ಯಾ ಪ್ರೀತಿಯಲ್ಲಿರೋದು ಪಕ್ಕಾ ಎಂದು ತಿಳಿಸಿದ್ದಾರೆ.
ನಿನ್ನೆ ನಡೆದ ಅನನ್ಯಾ ಪಾಂಡೆ ಅವರ 'ಖೋ ಗಯೇ ಹಮ್ ಕಹಾನ್' ಸ್ಕ್ರೀನಿಂಗ್ನಲ್ಲಿ ಆದಿತ್ಯ ರಾಯ್ ಕಪೂರ್ ಉಪಸ್ಥಿತರಿದ್ದರು. ನಂತರ, ಈ ಜೋಡಿ ಒಟ್ಟಿಗೆ ಕಾರಿನಲ್ಲಿ ತೆರಳಿದರು. ಖೋ ಗಯೇ ಹಮ್ ಕಹಾನ್ ಸ್ಕ್ರೀನಿಂಗ್‌ಗಾಗಿ, ಆದಿತ್ಯ ಚೆಕ್ಸ್ ಶರ್ಟ್, ಬೂದು ಬಣ್ಣದ ಜೀನ್ಸ್, ಕ್ಯಾಪ್ ಧರಿಸಿದ್ದರು. ಅನನ್ಯಾ ಬಿಳಿ ಕ್ರಾಪ್ ಟಾಪ್, ಬ್ಲ್ಯಾಕ್ ಶಾರ್ಟ್ ಸ್ಕರ್ಟ್, ಓವರ್ ಸೈಜ್ ಕೋಟ್ನಲ್ಲಿ ಕ್ಯೂಟ್ ಆ್ಯಂಡ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. ಪಾಪರಾಜಿಗಳು ಫೋಟೋ, ವಿಡಿಯೋ ಸೆರೆಹಿಡಿಯುತ್ತಿದ್ದ ಸಂದರ್ಭ ಅನನ್ಯಾ ಮುಗುಳ್ನಕ್ಕರು ಜೊತೆಗೆ ನಾಚಿಕೆ ಭಾವವೂ ನಟಿಯ ಮೊಗದಲ್ಲಿತ್ತು. ಈ ವಿಡಿಯೋ ಅಭಿಮಾನಿಗಳಿಂದ ಮೆಚ್ಚುಗೆ, ಪ್ರೀತಿ ಗಳಿಸುತ್ತಿದೆ.