ಕರ್ನಾಟಕ

karnataka

ETV Bharat / entertainment

ಸಚಿನ್ ಧನ್​ಪಾಲ್​-ಅದಿತಿ ಪ್ರಭುದೇವ ಅಭಿನಯದ ಚಾಂಪಿಯನ್​ ಟ್ರೈಲರ್ ಬಿಡುಗಡೆ - Champion movie cast

ಕ್ರೀಡಾ ಕಥಾಹಂದರವುಳ್ಳ ಚಾಂಪಿಯನ್​ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ.

Aditi Prabhudeva starrer Champion movie trailer released
ಚಾಂಪಿಯನ್​ ಸಿನಿಮಾ ಟ್ರೈಲರ್ ಬಿಡುಗಡೆ

By

Published : Sep 13, 2022, 12:23 PM IST

ನಟಿ ಅದಿತಿ ಪ್ರಭುದೇವ, ನಟ ಸಚಿನ್ ಧನ್​ಪಾಲ್​ ಅಭಿನಯದ ಕ್ರೀಡಾ ಕಥಾಹಂದರವುಳ್ಳ ಚಾಂಪಿಯನ್​ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸೋಮವಾರ ಟ್ರೈಲರ್ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

ಟ್ರೈಲರ್, ಸಿನಿಮಾದಲ್ಲಿ ಓರ್ವ ಹಳ್ಳಿ ಯುವಕ ಪ್ರಸಿದ್ಧ ಕ್ರೀಡಾ ಪಟುವಾದ ಕಥೆಯನ್ನು ಚಿತ್ರಿಸಲಾಗಿದೆ. ಯುವ ಮನಸ್ಸುಗಳಿಗೆ ಸಿನಿಮಾ ಸ್ಫೂರ್ತಿಯಾಗಲಿದೆ ಎಂದು ನಂಬಲಾಗಿದೆ. ಇದೊಂದು ಕಂಪ್ಲೀಟ್​ ಎಂಟರ್​ಟೈನ್​ಮೆಂಟ್​ ಚಿತ್ರವಾಗಿದ್ದು, ಸಿನಿಮಾದಲ್ಲಿನ ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್​, ಲವ್​ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎಂದು ಚಿತ್ರತಂಡ ತಿಳಿಸಿದೆ.

ಶಾಹುರಾಜ್‌ ಶಿಂಧೆ ನಿರ್ದೇಶನದ ಚಿತ್ರಕ್ಕೆ ಶಿವಾನಂದ ಎಸ್‌ ನೀಲಣ್ಣನವರ್‌ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್‌ ಲೋಕನಾಥ್‌ ಸಂಗೀತ, ನಾಗಾರ್ಜುನ್‌ ಶರ್ಮಾ, ಶಿವು ಬೆರಗಿ, ಪ್ರೇಮ ಅಭಿಮಾನ್‌ ಸಾಹಿತ್ಯ, ವೆಂಕಟೇಶ್‌ ಸಂಕಲನ ಸಿನಿಮಾಕ್ಕಿದೆ. ದೇವರಾಜ್‌, ರಂಗಾಯಣ ರಘು, ಚಿಕ್ಕಣ್ಣ, ಗಿರೀಶ್‌, ಆದಿ ಲೊಕೇಶ್‌, ಶೋಭ್‌ ರಾಜ್‌, ಅವಿನಾಶ್‌, ಪ್ರದೀಪ್‌ ರಾವತ್‌ ತಾರಾ ಬಳಗ ಚಿತ್ರದಲ್ಲಿದೆ. ಜಯರಾಮ್‌ ಧನು ಮುರಳಿ, ಇಮ್ರಾನ್‌ ಮಾಸ್ಟರ್‌ ನೃತ್ಯ ಸಂಯೋಜನೆ ಇದೆ. ಚಾಂಪಿಯನ್​ ಚಿತ್ರೀಕರಣ ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಒಂದು ಹಾಡಿನ ಚಿತ್ರೀಕರಣ ದುಬೈನಲ್ಲಿ ನಡೆದಿದೆ. ಚಿತ್ರದ ಸ್ಪೆಷಲ್‌ ಸಾಂಗ್‌ ಒಂದರಲ್ಲಿ ಬಾಲಿವುಡ್‌ ಬೆಡಗಿ ಸನ್ನಿ ಲಿಯೋನ್‌ ಸೊಂಟ ಬಳುಕಿಸಿದ್ದಾರೆ.

ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಸೌಂದರ್ಯ ರಜನಿಕಾಂತ್

ABOUT THE AUTHOR

...view details