ಕರ್ನಾಟಕ

karnataka

ETV Bharat / entertainment

'ರಾಮ ರಾಜ್ಯ'ದಿಂದ 'ಆದಿಪುರುಷ್​'ವರೆಗೆ: ರಾಮಾಯಣ ಕಥಾಧಾರಿತ ಸೂಪರ್‌ಹಿಟ್​ ಸಿನಿಮಾಗಳಿವು.. - ಈಟಿವಿ ಭಾರತ ಕನ್ನಡ

ಇಂದು ಬಿಡುಗಡೆಯಾಗಿರುವ 'ಆದಿಪುರುಷ್​' ಸೇರಿದಂತೆ ಅನೇಕ ರಾಮಾಯಣ ಕಥಾಧಾರಿತ ಸಿನಿಮಾಗಳು ತೆರೆ ಮೇಲೆ ಬಂದಿವೆ. ಅವುಗಳ ಕಂಪ್ಲೀಟ್​ ಡೀಟೈಲ್ಸ್​ ಇಲ್ಲಿದೆ..

Adipurush
'ಆದಿಪುರುಷ್​'

By

Published : Jun 16, 2023, 7:46 PM IST

ಸನಾತನ ಹಿಂದೂ ಧರ್ಮದಲ್ಲಿ ಪೌರಾಣಿಕ ಕಥೆಗಳಿಗೆ ಹೆಚ್ಚಿನ ಮೌಲ್ಯ ನೀಡಲಾಗುತ್ತದೆ. ದೇವರು, ದೇವರ ಮಹಿಮೆಗಳು, ಸೃಷ್ಟಿ.. ಹೀಗೆ ಅನೇಕ ಆಸಕ್ತಿದಾಯಿಕ ಸಂಗತಿಗಳು ನಮ್ಮ ಇತಿಹಾಸದಲ್ಲಿ ಅಡಗಿವೆ. ಅವೆಲ್ಲವನ್ನೂ ನಾವು ಕಣ್ಣಾರೆ ಕಾಣದಿದ್ದರೂ ಕವಿಗಳು, ವಿದ್ವಾಂಸರು ಬರೆದ ಪುಸ್ತಕಗಳ ಮೂಲಕ ಓದಿ ತಿಳಿದುಕೊಳ್ಳುತ್ತೇವೆ. ಅದರಲ್ಲಿ ವಾಲ್ಮೀಕಿ ಬರೆದ ಮೂಲ 'ರಾಮಾಯಣ' ವಿಶೇಷವಾಗಿದೆ.

ಶ್ರೀರಾಮನ ಈ ಕಥೆಯನ್ನು ನಾವು ಪುಸ್ತಕಗಳಲ್ಲಿ ಓದುವ ಮೂಲಕ ಅಥವಾ ಹಿರಿಯರಿಂದ ಕೇಳುವ ಮೂಲಕ ತಿಳಿದುಕೊಂಡಿದ್ದೇವೆ. ಆದರೆ ಇದೇ ರಾಮಾಯಣವನ್ನು ಕಥಾವಸ್ತುವನ್ನಾಗಿರಿಸಿ ಅನೇಕ ಚಿತ್ರಗಳು ಬೆಳ್ಳಿತೆರೆಯಲ್ಲಿ ಮೂಡಿಬಂದಿವೆ. ಈ ಮಹಾಕಾವ್ಯವನ್ನು ದೃಶ್ಯ ಕಾವ್ಯದ ರೂಪದಲ್ಲಿ ಪ್ರದರ್ಶಿಸಿ ಜನರಿಗೆ ತೋರಿಸುವುದು ನಿರ್ದೇಶಕ ಮತ್ತು ನಿರ್ಮಾಪಕರಿಗೆ ನಿಜಕ್ಕೂ ಸಾಹಸವೇ ಸರಿ.

ಆದರೂ ಅನೇಕ ನಿರ್ದೇಶಕರು ಈ ಕಥೆಯನ್ನು ಅದ್ಭುತವಾಗಿ ರಚಿಸಿದ್ದಾರೆ ಮತ್ತು ಅಗಾಧ ಯಶಸ್ಸನ್ನು ಪಡೆದಿದ್ದಾರೆ. 'ರಾಮಾಯಣ'ವನ್ನು ತೆರೆಗೆ ತಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಅಂತಹ ಮಹಾನ್​ ಕಾವ್ಯದ ಹಿರಿಮೆಯನ್ನು ಇಂದಿನ ಯುವಜನತೆಗೆ ತಿಳಿಸಲು ಬಾಲಿವುಡ್​ ನಿರ್ದೇಶಕ ಓಂ ರಾವುತ್​ 'ಆದಿಪುರುಷ್​' ಸಿನಿಮಾ ಮಾಡಿದ್ದಾರೆ. ಅದು ಇಂದು ತೆರೆ ಕಂಡಿದೆ. ಇದಕ್ಕೂ ಮೊದಲು ಅನೇಕ ರಾಮಾಯಣ ಕಥಾಧಾರಿತ ಸಿನಿಮಾ, ಧಾರಾವಾಹಿಗಳು ಬಂದಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ..

'ರಾಮ ರಾಜ್ಯ' (1943):ನಿರ್ದೇಶಕ ವಿಜಯ್​ ಭಟ್​ ಅವರ 'ರಾಮ ರಾಜ್ಯ' ಚಲನಚಿತ್ರವು ರಾಮಾಯಣವನ್ನು ಅಳವಡಿಸಿಕೊಳ್ಳುವ ಆರಂಭಿಕ ಪ್ರಯತ್ನಗಳಲ್ಲಿ ಒಂದಾಗಿದೆ. ಈ ಚಿತ್ರವು ಯಶಸ್ವಿಯಾಗಿತ್ತು. ಪ್ರೇಮ್ ಆದಿಬ್ ರಾಮನಾಗಿ ಮತ್ತು ಶೋಭನಾ ಸಮರ್ಥ್ ಸೀತೆಯಾಗಿ ಕಾಣಿಸಿಕೊಂಡರು. ಇಂಡಿಯನ್ ಸಿನಿಮಾ ಹೆರಿಟೇಜ್ ಫೌಂಡೇಶನ್ ಪ್ರಕಾರ, ಮಹಾತ್ಮ ಗಾಂಧಿ ವೀಕ್ಷಿಸಿದ ಕೆಲವೇ ಸಿನಿಮಾಗಳಲ್ಲಿ 'ರಾಮ ರಾಜ್ಯ' ಕೂಡ ಒಂದಾಗಿದೆ.

'ಸಂಪೂರ್ಣ ರಾಮಾಯಣ' (1961):ಬಾಬುಭಾಯಿ ಮಿಸ್ತ್ರಿ ನಿರ್ದೇಶನದ ನಿರ್ದೇಶನದ ಸಂಪೂರ್ಣ ರಾಮಾಯಣ 1961 ರಲ್ಲಿ ತೆರೆ ಕಂಡಿತು. ಈ ಚಿತ್ರದಲ್ಲಿ ಮಹಿಪಾಲ್ ಮತ್ತು ಅನಿತಾ ಗುಹಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬಸಂತ್ ಪಿಕ್ಚರ್ಸ್ ನಿರ್ಮಿಸಿದ ಈ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿತ್ತು.

'ರಾಮಾಯಣ' (1987ರ ಧಾರಾವಾಹಿ):ರಮಾನಂದ್​ ಸಾಗರ್​ ಬರೆದು, ನಿರ್ದೇಶಿಸಿದ ರಾಮಾಯಣ ಧಾರಾವಾಹಿ 1987 ಮತ್ತು 1988 ರ ನಡುವೆ ಡಿಡಿ ನ್ಯಾಷನಲ್​ನಲ್ಲಿ ಪ್ರಸಾರವಾಗಿತ್ತು. ಈಗಲೂ ಜನರಿಗೆ ನಟ ಅರುಣ್​ ಗೋವಿಲ್​ ರಾಮನಾಗಿ ಮತ್ತು ದೀಪಿಕಾ ಚಿಖ್ಲಿಯಾ ಸೀತೆಯಾಗಿಯೇ ಕಾಣಿಸುತ್ತಾರೆ. ಕೊರೊನಾ ಸಮಯದಲ್ಲಿ ರಾಷ್ಟ್ರವ್ಯಾಪಿ ಲಾಕ್​ಡೌನ್​ ಆದ ಸಮಯದಲ್ಲಿ ಈ ಧಾರಾವಾಹಿಯೂ ಡಿಡಿ ನ್ಯಾಷನಲ್‌ನಲ್ಲಿ ಮರುಪ್ರಸಾರವಾಗಿತ್ತು. ಏಪ್ರಿಲ್ 16, 2020 ರಂದು 7.7 ಕೋಟಿ ವೀಕ್ಷಕರನ್ನು ದಾಖಲಿಸುವ ಮೂಲಕ ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮವಾಗುವ ಮೂಲಕ ಇದು ವಿಶ್ವ ದಾಖಲೆಯನ್ನು ನಿರ್ಮಿಸಿದೆ.

'ರಾಮಾಯಣ: ದಿ ಲೆಜೆಂಡ್ ಆಫ್​ ಪ್ರಿನ್ಸ್​ ರಾಮ' (1992):ಜಪಾನ್ ಮತ್ತು ಭಾರತದ ಸಹ-ನಿರ್ಮಾಣದಲ್ಲಿ ಈ ಅನಿಮೇಶನ್​ ಮೂವಿಯನ್ನು ಯುಗೋ ಸಾಕೋ ನಿರ್ದೇಶಿಸಿದ್ದರು. ಇದರಿಂದಾಗಿ ದಿವಂಗತ ಭಾರತೀಯ ಆನಿಮೇಟರ್ ರಾಮ್ ಮೋಹನ್ ಸಹ-ನಿರ್ದೇಶಕರಾಗಿ ಮನ್ನಣೆ ಪಡೆದರು. ಚಿತ್ರವು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಯಿತು. ನಂತರ ಹಿಂದಿಗೆ ಡಬ್ ಮಾಡಲಾಯಿತು. ಹಿರಿಯ ನಟ ಶತ್ರುಘ್ನ ಸಿನ್ಹಾ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. 1990ರ ಪೀಳಿಗೆಯ ಮಕ್ಕಳಿಗೆ ಇದು ನೆಚ್ಚಿನ ಕಾರ್ಯಕ್ರಮ ಆಯಿತು.

'ಲವ ಕುಶ' (1997): ರಾಮ ಮತ್ತು ಸೀತೆಯ ಮಕ್ಕಳ ಕಥೆಯನ್ನು ತೆರೆ ಮೇಲೆ ತರಲಾಯಿತು. ಇದರಲ್ಲಿ ಹಿರಿಯ ನಟ ಜೀತೇಂದ್ರ ರಾಮನಾಗಿ, ಜಯಪ್ರದಾ ಸೀತೆಯಾಗಿ ಕಾಣಿಸಿಕೊಂಡರೆ ದಾರಾ ಸಿಂಗ್ ಹನುಮಾನ್ ಪಾತ್ರವನ್ನು ನಿರ್ವಹಿಸಿದ್ದರು.

'ರಾಮಾಯಣ' (2008 ಧಾರಾವಾಹಿ):ರಮಾನಂದ್​ ಸಾಗರ್​ ಅವರ 'ರಾಮಾಯಣ' ಮತ್ತೊಮ್ಮೆ 2008ರಲ್ಲಿ ಬಂತು. 300 ಎಪಿಸೋಡ್​ಗಳನ್ನು ಪೂರೈಸಿತು. ಇದು ಅತ್ಯಧಿಕ ವೀಕ್ಷಕರನ್ನು ಆಕರ್ಷಿಸಿತು. ಆದರೆ ಮೊದಲಿನ ರಾಮಯಣದಷ್ಟು ಯಶಸ್ವಿಯಾಗಲಿಲ್ಲ. ಇದರ ಪ್ರಮುಖ ಪಾತ್ರ ನಿರ್ವಹಿಸಿದ್ದ ಗುರ್ಮೀತ್ ಚೌಧರಿ ರಾಮನಾಗಿ ಮತ್ತು ಸೀತೆಯ ಪಾತ್ರದಲ್ಲಿ ದೇಬಿನಾ ಬೊನ್ನರ್ಜಿ ಇಂದಿಗೂ ಮನೆಮಾತಾಗಿದ್ದಾರೆ.

ಇದನ್ನೂ ಓದಿ:Adipurushಗೆ ಮಿಶ್ರ ಪ್ರತಿಕ್ರಿಯೆ: ರಾಮಾಯಣ ಆಧಾರಿತ ಸಿನಿಮಾ ಟೀಕಿಸಿದ ವ್ಯಕ್ತಿಗೆ ಹೈದರಾಬಾದ್‌ನಲ್ಲಿ ಥಳಿತ!

ABOUT THE AUTHOR

...view details