'ಆದಿಪುರುಷ್'.....ಈ ವರ್ಷ ತೆರೆಕಾಣಲಿರುವ ಬಹುನಿರೀಕ್ಷಿತ ಚಿತ್ರ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಪೋಸ್ಟರ್, ಟ್ರೇಲರ್, ಟೀಸರ್, ಸಾಂಗ್ಸ್ ಸಿನಿರಸಿಕರ ಕುತೂಹಲ ಹೆಚ್ಚಿಸಿದೆ. ಇದೀಗ ಸಿನಿಮಾ ಟಿಕೆಟ್ ವಿಚಾರವಾಗಿ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. 10,000 ಜನರಿಗೆ ಸಿಗಲಿದೆ 'ಆದಿಪುರುಷ್' ಉಚಿತ ಟಿಕೆಟ್.
ತೆಲಂಗಾಣದ 10,000 ಜನರಿಗೆ ಉಚಿತ ಟಿಕೆಟ್ : ಆದಿಪುರುಷ್ ಚಿತ್ರದ ಬಿಡುಗಡೆ ಕುರಿತು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಮಂದಿಗೆ ಆದಿಪುರುಷ್ ಸಿನಿಮಾದ ಉಚಿತ ಟಿಕೆಟ್ ನೀಡಲು ಮುಂದಾಗಿದ್ದಾರೆ. ತೆಲಂಗಾಣದಾದ್ಯಂತ 10 ಸಾವಿರಕ್ಕೂ ಹೆಚ್ಚು ಉಚಿತ ಟಿಕೆಟ್‌ಗಳನ್ನು ನೀಡುವುದಾಗಿ ಅಭಿಷೇಕ್ ಬಹಿರಂಗಪಡಿಸಿದ್ದಾರೆ.
ಯಾರಿಗೆಲ್ಲ ಉಚಿತ ಟಿಕೆಟ್ ಲಭ್ಯ?: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಸೇರಿದವರಿಗೆ ಮಾತ್ರ ಈ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುವವರು https://bit.ly/CelebratingAdipurush ಗೂಗಲ್ ಫಾರ್ಮ್ ಅನ್ನು ಪೂರ್ಣಗೊಳಿಸಲು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕೇಳಿಕೊಂಡಿದ್ದಾರೆ.
ಸೂಕ್ತ ವಿವರಗಳನ್ನು ನಮೂದಿಸಿದರೆ ಟಿಕೆಟ್ ಕಳುಹಿಸುತ್ತೇವೆ ಎಂದು ಅಭಿಷೇಕ್ ಹೇಳಿದ್ದಾರೆ. ಈ ಸಂಬಂಧ ಪ್ರಶ್ನೆಗಳಿಗೆ ನೀವು 9505034567 ಗೆ ಕರೆ ಮಾಡಬಹುದು. 'ಈ ಜೂನ್ನಲ್ಲಿ ಮಹಾನ್ ವ್ಯಕ್ತಿ ಮರ್ಯಾದಾ ಪುರುಷೋತ್ತಮ್ ಅವರನ್ನು ಸ್ಮರಿಸೋಣ. ಆದಿಪುರುಷನನ್ನು ಆಚರಿಸೋಣ. ಶ್ರೀರಾಮನ ಪ್ರತಿಯೊಂದು ಅಧ್ಯಾಯವೂ ಮಾನವೀಯತೆಯ ಪಾಠವಾಗಿದೆ. ಅವರ ಬಗ್ಗೆ ತಿಳಿದುಕೊಳ್ಳಬೇಕಿದೆ ಮತ್ತು ಅವರ ದೈವಿಕ ಹೆಜ್ಜೆಗಳನ್ನು ಅನುಸರಿಸಬೇಕಿದೆ' ಎಂದು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಮನವಿ ಮಾಡಿದರು.
ಅಪಪ್ರಚಾರ ನಿಲ್ಲಿಸಿ, ಆದಿಪುರುಷನಿಗೆ ಸಹಾಯ ಮಾಡಿ:'ಆದಿಪುರುಷ್' ಚಿತ್ರವನ್ನು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಚಿತ್ರತಂಡ ಆರೋಪಿಸಿದೆ. ಥಿಯೇಟರ್‌ಗಳಲ್ಲಿ ಎಸ್‌ಸಿಗಳಿಗೆ ಅವಕಾಶವಿಲ್ಲ ಎಂಬ ಅಪಪ್ರಚಾರದ ಹೇಳಿಕೆಯುನ್ನು ಚಿತ್ರತಂಡ ಖಂಡಿಸಿದೆ. ಆದಿಪುರುಷ್ ಚಿತ್ರತಂಡ ಸಮಾನತೆಗಾಗಿ ಶ್ರಮಿಸಿದೆ. ಈ ಚಿತ್ರ ಪ್ರತಿಯೊಬ್ಬ ಭಾರತೀಯನದ್ದು. ಈ ಕೆಟ್ಟ ಪ್ರಚಾರವನ್ನು ನಿಲ್ಲಿಸಿ ಆದಿಪುರುಷನಿಗೆ ಸಹಕರಿಸುವಂತೆ ಚಿತ್ರತಂಡ ಚಿತ್ರ ಅಭಿಮಾನಿಗಳಲ್ಲಿ ವಿನಂತಿಸಿದೆ.
ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ಆದಿಪುರುಷ್ ಪ್ರೀ ರಿಲೀಸ್ ಈವೆಂಟ್.. ಫೋಟೋಗಳಲ್ಲಿ ನೋಡಿ
ಜೂನ್ 16 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿರುವ ಆದಿಪುರುಷ್ ರಾಮಾಯಣ ಆಧಾರಿತ 3ಡಿ ಚಿತ್ರವಾಗಿದ್ದು, ಓಂ ರಾವುತ್ ಅವರು ನಿರ್ದೇಶಿಸಿದ್ದಾರೆ. ರಾಘವ್ ಪಾತ್ರದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಜಾನಕಿ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೋನ್, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಲಕ್ಷಣ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಭೂಷಣ್ ಕುಮಾರ್, ಕೃಷ್ಣ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್, ರಾಜೇಶ್ ನಾಯರ್, ವಂಶಿ, ಪ್ರಮೋದ್ ನಿರ್ಮಿಸಿದ್ದಾರೆ. ಮಂಗಳವಾರ ಸಂಜೆ ತಿರುಪತಿಯಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಇದಕ್ಕೂ ಮುನ್ನ ಈ ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್ನಲ್ಲಿ ಒಂದು ಸೀಟು ಮಾರಾಟ ಮಾಡುವ ಬದಲು ಹನುಮಂತನಿಗೆ ಮೀಸಲಿಡುವುದಾಗಿ ಚಿತ್ರತಂಡ ಪ್ರಕಟಿಸಿದೆ. ಕಾರ್ತಿಕೇಯ 2, ದಿ ಕಾಶ್ಮೀರ್ ಫೈಲ್ಸ್ ಸೇರಿ ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದ ಅಭಿಷೇಕ್ ಆದಿಪುರುಷ್ ಚಿತ್ರದ ಭಾಗವಾಗಿದ್ದಾರೆ.
ಇದನ್ನೂ ಓದಿ:'ಕಾಂತಾರ' ಕಾಡುಬೆಟ್ಟು ಶಿವನ ಚೆಲುವೆ ಲೀಲಾಗೆ ಹುಟ್ಟುಹಬ್ಬದ ಸಂಭ್ರಮ..ಯುವ 'ಸಿರಿ' ಪೋಸ್ಟರ್ ರಿಲೀಸ್