ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಬಹುಬೇಡಿಕೆಯ ನಟಿ ಕೃತಿ ಸನೋನ್ ಅಭಿನಯದ ಪೌರಾಣಿಕ ಚಿತ್ರ 'ಆದಿಪುರುಷ್' ಜೂನ್ 16 ರಂದು (ನಿನ್ನೆ) ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಅದರ ಜೊತೆಗೆ ಸಿನಿಮಾವು ಗ್ರಾಫಿಕ್ಸ್ ಮತ್ತು ಪಾತ್ರಗಳ ಸಂಭಾಷಣೆಯ ವಿಚಾರವಾಗಿ ಟ್ರೋಲ್ ಆಗುತ್ತಿದೆ.
'ಆದಿಪುರುಷ್' ಚಿತ್ರದಲ್ಲಿ ಹನುಮಂತ ಪಾತ್ರದ ಡೈಲಾಗ್‌ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೊಳಗಾಗಿವೆ. ಈ ಬಗ್ಗೆ ಚಿತ್ರದ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ. ಹನುಮಂತನ ಸಂಭಾಷಣೆಯನ್ನು ಬಹಳ ಕಾಳಜಿಯಿಂದ ಬರೆದಿದ್ದೇನೆ ಎಂದು ಹೇಳಿದ್ದಾರೆ.
"ಹನುಮಂತನ ಸಂಭಾಷಣೆಗಳನ್ನು ನಾನು ತಪ್ಪಾಗಿ ಬರೆದಿಲ್ಲ. ತುಂಬಾ ಯೋಚಿಸಿ ಡೈಲಾಗ್ ಬರೆದೆ. ಚಿತ್ರದಲ್ಲಿ ಅನೇಕ ಪಾತ್ರಗಳಿವೆ, ಎಲ್ಲರೂ ಒಂದೇ ರೀತಿ ಮಾತನಾಡುವುದಿಲ್ಲ. ಹಾಗಾಗಿಯೇ ಪಾತ್ರಗಳ ನಡುವಿನ ವ್ಯತ್ಯಾಸವನ್ನು ತೋರಿಸಲು ಈ ರೀತಿ ಸಂಭಾಷಣೆಗಳನ್ನು ಸರಳೀಕರಿಸಿದ್ದೇನೆ. ಆದರೆ, ಇಂತಹ ಸಂಭಾಷಣೆ ಬರೆದ ಮೊದಲ ವ್ಯಕ್ತಿ ನಾನಲ್ಲ. ಜಾನಪದ ಕಲಾವಿದರು ರಾಮಾಯಣವನ್ನು ಹೇಳುವಾಗ ಭಗವಾನ್ ಹನುಮಂತನ ಸಂಭಾಷಣೆಗಳನ್ನು ಹೇಳಿದ್ದು ಹೀಗೆ. ಅವುಗಳನ್ನು ಪರಿಗಣಿಸಿ ಸಂಭಾಷಣೆಗಳನ್ನು ಬರೆದಿದ್ದೇನೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
Adipurush ಮೊದಲ ದಿನದ ಕಲೆಕ್ಷನ್:ಆದಿಪುರುಷ್ 2023ರ ಸೂಪರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ. ಬಿಡುಗಡೆಯಾದ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದೆ. ಒಂದೇ ದಿನದಲ್ಲಿ ಸುಮಾರು 140 ಕೋಟಿ ರೂಪಾಯಿ ಗಳಿಸಿದೆ. ಆದಿಪುರುಷ್ ಮೊದಲ ದಿನ ಕೇವಲ ಹಿಂದಿ ಆವೃತ್ತಿಯೊಂದರಲ್ಲೇ ಸಂಗ್ರಹಿಸಿದ ಹಣ ಸುಮಾರು 36-38 ಕೋಟಿ ರೂ.ಗಳು. ಇತರ ಭಾಷೆಗಳು ಸೇರಿದಂತೆ ಭಾರತದಲ್ಲಿ ಸುಮಾರು 90 ಕೋಟಿ ರೂ. ಕಲೆಕ್ಷನ್ ಮಾಡಿದೆ.