ಕರ್ನಾಟಕ

karnataka

ETV Bharat / entertainment

Adipurush: 'ಆದಿಪುರುಷ'ನಿಗೆ ಭಾರಿ ಆಕ್ಷೇಪ; ವಿವಾದಿತ ಸಂಭಾಷಣೆ​ ಬದಲಿಸಲು ಚಿತ್ರತಂಡ ನಿರ್ಧಾರ

ತೀವ್ರ ವಿರೋಧಕ್ಕೆ ಕಾರಣವಾದ ಡೈಲಾಗ್ಸ್ ಸರಿಪಡಿಸುತ್ತೇವೆ ಎಂದು ಆದಿಪುರುಷ್​ ಚಿತ್ರತಂಡ ಹೇಳಿದೆ.

Adipurush dialogue will be changed
ಆದಿಪುರುಷ್​ ಸಂಭಾಷಣೆ ಬದಲಾಗಲಿದೆ

By

Published : Jun 18, 2023, 2:13 PM IST

ಬಿಗ್​​ ಬಜೆಟ್​​ ಚಿತ್ರ 'ಆದಿಪುರುಷ್​​' ಬಿಡುಗಡೆಯಾಗಿ ಕೇವಲ 2 ದಿನಗಳಾಗಿದ್ದು ಹಲವು ವಿರೋಧಗಳನ್ನು ಎದುರಿಸುತ್ತಿದೆ. ಗ್ರಾಫಿಕ್ಸ್​​ ಮಾತ್ರವಲ್ಲದೇ ಚಿತ್ರದ ಡೈಲಾಗ್ಸ್‌ಗೂ ಆಕ್ಷೇಪ ವ್ಯಕ್ತವಾಗಿದೆ. ಇದರ ಮಧ್ಯೆ ಚಿತ್ರದ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರ ಟ್ವೀಟ್ ಮುನ್ನೆಲೆಗೆ ಬಂದಿದೆ. ಆಕ್ಷೇಪ ವ್ಯಕ್ತವಾಗುತ್ತಿರುವ ಚಿತ್ರದ ಡೈಲಾಗ್​​ಗಳನ್ನು ಬದಲಾಯಿಸುವ ಕುರಿತು ತಿಳಿಸಿದ್ದಾರೆ. ಅಲ್ಲದೇ ಈ ವಾರ ಚಿತ್ರವು ಪರಿಷ್ಕೃತ ಸಂಭಾಷಣೆಗಳೊಂದಿಗೆ ಬಿಡುಗಡೆ ಆಗಲಿದೆಯಂತೆ.

ಆದಿಪುರುಷ್​ ಸಿನಿಮಾ ಜೂನ್ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಮೊದಲ ದಿನವೇ ಚಿತ್ರದ ಕೆಲವು ಡೈಲಾಗ್‌ಗಳಿಗೆ ಪ್ರೇಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಾಫಿಕ್​ ವಿಚಾರವಾಗಿಯೂ ಟೀಕೆ ವ್ಯಕ್ತವಾಗಿತ್ತು. ಇದಾದ ನಂತರ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. 'ನಾವು ರಾಮಾಯಣ ಮಾಡಿಲ್ಲ, ರಾಮಾಯಣದಿಂದ ಸ್ಫೂರ್ತಿ ಪಡೆದಿದ್ದೇವೆ' ಎಂದಿದ್ದರು. ಎರಡನೇ ದಿನವೂ ಆದಿಪುರುಷ್​ ಚಿತ್ರಕ್ಕೆ ಸಂಬಂಧಿಸಿದ ವಿವಾದ ಹೆಚ್ಚಾಯಿತು.

ಈ ಬೆನ್ನಲ್ಲೇ ಇಂದು ಮನೋಜ್ ಮುಂತಶಿರ್ ಶುಕ್ಲಾ ಟ್ವೀಟ್​ ಮಾಡಿದ್ದಾರೆ. 'ನಾನು ಇಡೀ ಚಿತ್ರಕ್ಕೆ 4,000ಕ್ಕೂ ಹೆಚ್ಚು ಸಂಭಾಷಣೆಗಳನ್ನು ಬರೆದಿದ್ದೇನೆ, ಆದರೆ ಕೆಲ ಆಯ್ದ ಸಂಭಾಷಣೆಗಳಿಗೆ ಮಾತ್ರ ವಿರೋಧ ವ್ಯಕ್ತವಾಗುತ್ತಿದೆ. 3 ಗಂಟೆಗಳ ಚಲನಚಿತ್ರದಲ್ಲಿ, ನಾನು ನಿಮ್ಮ ಕಲ್ಪನೆಯ ಕೆಲ 3 ನಿಮಿಷಗಳನ್ನು ಪ್ರತ್ಯೇಕಿಸಿರಬಹುದು. ಡೈಲಾಗ್ಸ್​ ನಿಮಗೆ ಹಿಡಿಸದೇ ಇರಬಹುದು. ಅದಕ್ಕಾಗಿ ನೀವು ನನ್ನತ್ತ ಬೆರಳು ತೋರಿಸಲು ಪ್ರಾರಂಭಿಸಿದ್ದೀರಿ. ನನ್ನವರೇ ನನ್ನ ವಿರುದ್ಧ ಟೀಕೆ ಮಾಡಿದ್ದಾರೆ. ಆದಿಪುರುಷ್​ ಚಿತ್ರದ ಹಾಡುಗಳನ್ನೂ ನಾನೇ ಬರೆದಿದ್ದೇನೆ. ಆದರೆ ಯಾರೂ ಅದನ್ನು ಗಮನಿಸಲಿಲ್ಲ' ಎಂದು ಹೇಳಿದ್ದಾರೆ.

'ಇಷ್ಟೆಲ್ಲ ಆದರೂ ನನ್ನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವುದೇ ಕೆಟ್ಟ ಭಾವನೆ ಇಲ್ಲ. ನಿಮ್ಮ ಭಾವನೆಗಳು ನನಗೆ ಮುಖ್ಯ. ಹೀಗಾಗಿ ಎಲ್ಲರ ಭಾವನೆಗಳಿಗೆ ನೋವುಂಟು ಮಾಡಿರುವ ಆ ಡೈಲಾಗ್‌ಗಳನ್ನು ಚಿತ್ರದಲ್ಲಿ ಪರಿಷ್ಕರಿಸಲು ನಾನು ಮತ್ತು ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದೇವೆ. ಈ ವಾರ ಸರಿಪಡಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:Adipurush Collection: ವಿವಾದಗಳ ಹೊರತಾಗಿಯೂ 2 ದಿನದಲ್ಲಿ ₹200 ಕೋಟಿ ಬಾಚಿದ ಆದಿಪುರುಷ್​

ಇದಕ್ಕೂ ಮುನ್ನ ಸ್ಪಷ್ಟನೆ ನೀಡಿದ್ದ ಮನೋಜ್ ಮುಂತಶಿರ್ ಶುಕ್ಲಾ, "ಹನುಮಂತನಿಗೆ ಸಂಬಂಧಿಸಿದ ಸಂಭಾಷಣೆಗಳನ್ನು ತಪ್ಪಾಗಿ ಬರೆದಿಲ್ಲ. ಬಹಳ ಕಾಳಜಿ ವಹಿಸಿಯೇ ಡೈಲಾಗ್​ಗಳನ್ನು ಬರೆದೆ. ಒಂದು ಸಿನಿಮಾ ಅಂದ್ಮೇಲೆ ಹಲವು ಪಾತ್ರಗಳಿರುತ್ತವೆ, ಸಂಭಾಷಣಾ ಶೈಲಿ ವಿಭಿನ್ನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವ್ಯತ್ಯಾಸವನ್ನು ತೋರಿಸಲು ಡೈಲಾಗ್ಸ್​ಗಳನ್ನು ಸರಳ ಮಾಡಿದ್ದೇನೆ'' ಎಂದು ಹೇಳಿದ್ದರು.

ಇದನ್ನೂ ಓದಿ:'ಆದಿಪುರುಷ್​' ಹನುಮಂತನ ಡೈಲಾಗ್ಸ್​ ಟ್ರೋಲ್​.. ಸಂಭಾಷಣೆ ಬರಹಗಾರರು ಹೇಳಿದ್ದೇನು?

ಆದಿಪುರುಷ್ ಕಲೆಕ್ಷನ್​:ಶುಕ್ರವಾರ ತೆರೆಕಂಡಿರುವಆದಿಪುರುಷ್ ಜಗತ್ತಿನಾದ್ಯಂತ ಮೊದಲ ದಿನ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನದ ದೇಶೀಯ ಬಾಕ್ಸ್​​ ಆಫೀಸ್​​ ಕಲೆಕ್ಷನ್​ ಸಂಖ್ಯೆ 86 ಕೋಟಿ ರೂ. ಇದ್ದರೆ ಎರಡನೇ ದಿನದ ಚಿತ್ರದ ಗಳಿಕೆ 65 ಕೋಟಿ ರೂ. ಆಗಿದೆ.

ABOUT THE AUTHOR

...view details