ಕರ್ನಾಟಕ

karnataka

ETV Bharat / entertainment

Adipurush ಬಿಡುಗಡೆಗೆ ಎರಡೇ ದಿನ ಬಾಕಿ: ಮೊದಲ ದಿನದ ಕಲೆಕ್ಷನ್​ ಬಗ್ಗೆ ಈಗ್ಲೇ ಲೆಕ್ಕಾಚಾರ ಶುರು!

2023ರ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾ ಕಲೆಕ್ಷನ್​​ ಬಗ್ಗೆ ಸಿನಿಪಂಡಿತರು, ಅಭಿಮಾನಿಗಳು, ಚಿತ್ರರಂಗದವರು ಅಂದಾಜಿಸಲು ಶುರು ಮಾಡಿದ್ದಾರೆ.

Adipurush
ಆದಿಪುರುಷ್

By

Published : Jun 13, 2023, 3:33 PM IST

ದಕ್ಷಿಣ ಭಾರತ ಚಿತ್ರರಂಗದ ಸೂಪರ್​ ಸ್ಟಾರ್ ಪ್ರಭಾಸ್ ಮತ್ತು ಹಿಂದಿ ಚಿತ್ರರಂಗದ ಬಹುಬೇಡಿಕೆ ನಟಿ ಕೃತಿ ಸನೋನ್ ಅಭಿನಯದ 'ಆದಿಪುರುಷ್​' ಸಿನಿಮಾ ಕ್ರೇಜ್​​​ ಚಿತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2023ರ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಬಗ್ಗೆ ಚರ್ಚೆ ಜೋರಾಗುತ್ತಿದೆ.

ಕಳೆದ ವರ್ಷ ಅಕ್ಟೋಬರ್ 2ರಂದು ಈ ಪೌರಾಣಿಕ ಚಿತ್ರದ ಟೀಸರ್​ ಅನ್ನು ಅನಾವರಣಗೊಳಿಸಲಾಗಿತ್ತು. ಗ್ರಾಫಿಕ್ಸ್​ ಸೇರಿದಂತೆ ಕೆಲ ವಿಚಾರವಾಗಿ ಟೀಸರ್ ಭಾರೀ ಟ್ರೋಲ್​ಗೊಳಗಾಗಿತ್ತು. ಆದ್ರೆ ಆ ಬಳಿಕ ಬಿಡುಗಡೆ ಅದ ಸಿನಿಮಾ ಪೋಸ್ಟರ್​, ಟ್ರೇಲರ್​​ ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ. ಅಲ್ಲದೇ ಚಿತ್ರತಂಡ ಕೈಗೊಳ್ಳುತ್ತಿರುವ ಪ್ರಚಾರ, ತಿರುಪತಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆದಿದೆ.

ಓಂ ರಾವುತ್ ನಿರ್ದೇಶನ ಈ ಸಿನಿಮಾ ಮಹಾಕಾವ್ಯ ರಾಮಾಯಣ ಆಧರಿಸಿರುವ ಹಿನ್ನೆಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚೇ ಅಲ್ವಾ?. ಹೀಗೆ ಸಾಕಷ್ಟು ವಿಚಾರಗಳಿಂದ ಸದ್ದು ಮಾಡುತ್ತಿರುವ 'ಆದಿಪುರುಷ್​' ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್ 10 ಭಾರತೀಯ ಸಿನಿಮಾ ಪಟ್ಟಿಗೆ 'ಆದಿಪುರುಷ್​' ಪ್ರವೇಶಿಸುವ ಸಾಧ್ಯತೆಯಿದೆ.

ಬಾಹುಬಲಿ ಸರಣಿ ಚಿತ್ರಗಳ ನಂತರ 'ಆದಿಪುರುಷ್​' ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಬಾಕ್ಸ್​ ಆಫೀಸ್ ಕಿಂಗ್ ಆಗಿ ಮರಳುತ್ತಾರೆ ಎಂಬ ಕುತೂಹಲ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿದೆ. ಬಾಕ್ಸ್​ ಆಫೀಸ್​ ಕಲೆಕ್ಷನ್ ವಿಚಾರದಲ್ಲಿ ಟಾಪ್ 10 ಪಟ್ಟಿಯಿಂದ ನಟ ವಿಜಯ್ ಅವರ Beast ಸಿನಿಮಾವನ್ನು ಹಿಂದಿಕ್ಕುವ ಸಾಧ್ಯತೆಯಿದೆ.

ಆದಿಪುರುಷ್​​ ಮುಂಗಡ ಟಿಕೆಟ್​ ಬುಕಿಂಗ್ ಟ್ರೆಂಡ್‌ಗಳು ಮತ್ತು ಅಭಿಷೇಕ್ ಅಗರ್ವಾಲ್, ರಣ್​​​ಬೀರ್ ಕಪೂರ್, ರಾಮ್ ಚರಣ್ ಮತ್ತು ಅನನ್ಯಾ ಬಿರ್ಲಾ ಅವರಿಂದ ಉಚಿತ ಟಿಕೆಟ್​ ವಿತರಣೆ ಆಗಿರುವ ಪ್ರಕ್ರಿಯೆ ಗಮನಿಸಿದರೆ, ಚಿತ್ರವು ಉತ್ತಮ ಆರಂಭಿಕ ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಅಂದರೆ, 2022ರಲ್ಲಿ 49.30 ಕೋಟಿ ರೂಪಾಯಿಗಳೊಂದಿಗೆ ಬಾಕ್ಸ್​ ಆಫೀಸ್​ ಸಂಖ್ಯೆ ಆರಂಭಿಸಿದ್ದ ವಿಜಯ್ ಅವರ ಬೀಸ್ಟ್ ಈ ಟಾಪ್ 10 ಪಟ್ಟಿಯಿಂದ ಹೊರಗುಳಿಯಲಿದೆ ಎಂದು ಮಾತುಗಳು ಕೇಳಿಬರುತ್ತಿವೆ.

ಬಾಕ್ಸ್​ ಆಫೀಸ್​ ಕಲೆಕ್ಷನ್ - ಟಾಪ್ 10 ಪಟ್ಟಿ:ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಭಾರತೀಯ ಚಿತ್ರಗಳು ಮಾಹಿತಿ.

  • ಆರ್​ಆರ್​ಆರ್​​: 134 ಕೋಟಿ ರೂ.
  • ಬಾಹುಬಲಿ 2: 121 ಕೋಟಿ ರೂ.
  • ಕೆಜಿಎಫ್ 2: 116 ಕೋಟಿ ರೂ.
  • ಸಾಹೋ: 88 ಕೋಟಿ ರೂ.
  • 2.0: 63 ಕೋಟಿ ರೂ.
  • ಪಠಾಣ್: 57 ಕೋಟಿ ರೂ.
  • ವಾರ್​: 53.35 ಕೋಟಿ ರೂ.
  • ಸೈ ರಾ ನರಸಿಂಹ ರೆಡ್ಡಿ: 52.50 ಕೋಟಿ ರೂ.
  • ಥಗ್ಸ್ ಆಫ್ ಹಿಂದೂಸ್ತಾನ್: 52.25 ಕೋಟಿ ರೂ.
  • ಬೀಸ್ಟ್: 49.30 ಕೋಟಿ ರೂ.

ಇದನ್ನೂ ಓದಿ:'ನನ್ನ ದೇಹದ ಪ್ರತೀ ಜೀವಕೋಶವೂ ಇಂದಿರಾ ಗಾಂಧಿಯಾಗಿತ್ತು, ಮುಂದಿನ ಚಿತ್ರಕ್ಕೆ ತಯಾರಿ ಆರಂಭ': ಕಂಗನಾ

ಜೂನ್ 11 ರಂದು ಆದಿಪುರುಷ್​​ ಮುಂಗಡ ಟಿಕೆಟ್​​ ಬುಕಿಂಗ್ ಆರಂಭವಾಗಿದ್ದು, ಚಿತ್ರತಂಡದ ವಿಶ್ವಾಸ ಹೆಚ್ಚಿಸಿದೆ. ಮುಂಗಡ ಟಿಕೆಟ್​ ಬುಕಿಂಗ್ ಆರಂಭವಾಗಿ, 24 ಗಂಟೆಯೊಳಗೆ 36 ಸಾವಿರ ಟಿಕೆಟ್​ಗಳು ಮಾರಾಟವಾಗಿ ದಾಖಲೆ ಬರೆದಿದೆ. ಹಿಂದಿ ಭಾಷೆಯಲ್ಲಿ ಸಿನಿಮಾ ನೋಡಲು ಹೆಚ್ಚಿನ ಪ್ರೇಕ್ಷಕರು ಒಲವು ತೋರುತ್ತಿದ್ದಾರೆ. ಜೂನ್ 16ರಂದು ಜಗತ್ತಿನಾದ್ಯಂತ 3Dನಲ್ಲಿ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ:Prabhu Deva ಮನೆಗೆ ಲಕ್ಷ್ಮಿ: 50ರ ಹರೆಯಲ್ಲಿ ತಂದೆಯಾದ 'ಇಂಡಿಯನ್​​ ಮೈಕಲ್​​ ಜಾಕ್ಸನ್​'

ABOUT THE AUTHOR

...view details