ಓಂ ರಾವುತ್ ನಿರ್ದೇಶನದ ಆದಿಪುರುಷ್ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಕುಸಿತ ಮುಂದುವರಿದಿದೆ. ಮೊದಲ ಮೂರು ದಿನಗಳಲ್ಲಿ 300 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದ ಸಿನಿಮಾ ನೆಗೆಟಿವ್ ರಿವ್ಯೂವ್ ಹಿನ್ನೆಲೆಯಲ್ಲಿ ನಾಲ್ಕನೇ ದಿನದಿಂದ ಕುಸಿತ ಕಾಣಲು ಪ್ರಾರಂಭಿಸಿದೆ. ಎರಡನೇ ವಾರಾಂತ್ಯದ ಮೇಲೆ ಚಿತ್ರತಂಡ ವಿಶ್ವಾಸ ಇರಿಸಿತ್ತು. ಆದ್ರೆ ಸಿನಿಮಾ ಶನಿವಾರದಂದೂ ಸಹ ಸೋತಿದೆ. ಒಂಭತ್ತನೇ ದಿನದ ಆದಿಪುರುಷ್ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ತೀರಾ ಕಡಿಮೆ ಇದೆ.
Sacnilk.com ಪ್ರಕಾರ, ಆದಿಪುರುಷ್ ಶನಿವಾರ ಎಲ್ಲ ಭಾಷೆಗಳೂ ಸೇರಿ 5.63 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಭಾರತದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ 268.55 ಕೋಟಿ ರೂಪಾಯಿ. ಶುಕ್ರವಾರದಂದು ಬಹುತಾರಾಗಣದ ಸಿನಿಮಾ 3.25 ಕೋಟಿ ರೂ. ಗಳಿಸಿತ್ತು. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದ ಕಲೆಕ್ಷನ್ನಲ್ಲಿ ಕೊಂಚ ಏರಿಕೆ ಕಾಣಬಹುದು. ಆದ್ರೆ 500 ಕೋಟಿ ರೂ.ನ ಬಿಗ್ ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ ಕಲೆಕ್ಷನ್ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಚಿತ್ರತಂಡದ, ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ.
ಓಂ ರಾವುತ್ ಆ್ಯಕ್ಷನ್ ಕಟ್ ಹೇಳಿರುವ 'ಆದಿಪುರುಷ್' ಜೂನ್ 16ರಂದು ದೇಶ ಮಾತ್ರವಲ್ಲದೇ ವಿಶ್ವದೆಲ್ಲೆಡೆ 10,000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ತೆರೆಕಂಡಿತ್ತು. ವಿಶ್ವಾದ್ಯಂತ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 386.54 ಕೋಟಿ ರೂ. ಸದ್ಯದ ಪರಿಸ್ಥಿತಿ ಗಮನಿಸಿದರೆ ಹಾಕಿದ ಬಂಡವಾಳ ವಾಪಸ್ ಬರೋದು ಸಂದೇಹ. ಅಂದರೆ 500 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಮಾಡುವ ಸಾಧ್ಯತೆ ಕಡಿಮೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.