ಬಿಗ್ ಬಜೆಟ್‌ನಲ್ಲಿ ನಿರ್ಮಾಣಗೊಂಡ ಆದಿಪುರುಷ್ ಸಿನಿಮಾ ಗಳಿಕೆ ಎಲ್ಲರ ಹುಬ್ಬೇರಿಸಿದೆ. ಮೂರೇ ದಿನಗಳಲ್ಲಿ 300 ಕೋಟಿ ರೂ. ಸಂಗ್ರಹ ಮಾಡುವ ಮೂಲಕ ದಾಖಲೆ ಬರೆದಿದೆ. ಇದೀಗ ಸಿನಿಮಾ ಗಳಿಕೆ ಇಳಿಕೆ ದಾರಿ ಹಿಡಿದಿದೆ. ಬಿಡುಗಡೆ ಕಂಡ ಬಳಿಕ ಮೊದಲ ಸೋಮವಾರದಂದು ಆದಿಪುರುಷ್ ಕಲೆಕ್ಷನ್ನಲ್ಲಿ ತೀವ್ರ ಕುಸಿತ ಕಂಡಿದೆ. ಬಾಕ್ಸ್ ಆಫೀಸ್ ಸಂಗ್ರಹ ಸಂಖ್ಯೆ ರಷ್ಟಿ 75 ರಷ್ಟು ಕುಸಿದಿದೆ.
ಮೊದಲ ವಾರಾಂತ್ಯದ ಯಶಸ್ಸಿನ ನಂತರ ಚಿತ್ರವು ಓಟ ನಿಲ್ಲಿಸುವ ಸೂಚನೆ ನೀಡಿದೆ. ನಾಲ್ಕನೇ ದಿನ ಗಮನಾರ್ಹ ಕುಸಿತವನ್ನು ಕಂಡಿದೆ. ವರದಿಗಳ ಪ್ರಕಾರ, ಹಿಂದಿ ಆವೃತ್ತಿಯಲ್ಲಿ ಚಿತ್ರದ ನಾಲ್ಕು ದಿನಗಳ ಒಟ್ಟು ಮೊತ್ತ ಸರಿಸುಮಾರು 113 ಕೋಟಿ ರೂ. ಆಗಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ (Sacnilk) ಪ್ರಕಾರ, ಸೋಮವಾರದಂದು ಭಾರತದಲ್ಲಿ ಚಿತ್ರದ (ನೆಟ್) ಕಲೆಕ್ಷನ್ ಕೇವಲ 20 ಕೋಟಿ ರೂ. ಮೊದಲ ವಾರಾಂತ್ಯದಲ್ಲಿ, ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಂಪಾದಿಸಿದ್ದು, ಒಟ್ಟು 340 ಕೋಟಿ ರೂ.
ಆದಿಪುರುಷ್ ವಾರಾಂತ್ಯದ ಅಂಕಿ ಅಂಶಗಳು ಪಠಾಣ್‌ನ ದಾಖಲೆಯನ್ನು (ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ 313 ಕೋಟಿ ರೂ. ಕಲೆಕ್ಷನ್) ಮುರಿದಿದ್ದರೂ ಕೂಡ ಇದು 1,000 ಕೋಟಿ ರೂ.ನ ಕ್ಲಬ್ ಸೇರುವುದಿಲ್ಲ. ಈ ವರ್ಷದ ಆರಂಭದಲ್ಲಿ ಶಾರುಖ್ ಖಾನ್ ಅವರ ಪಠಾಣ್ 1,000 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ಆದರೆ ಆದಿಪುರುಷ್ನ ಸದ್ಯದ ಬೆಳವಣಿಗೆ ಗಮನಿಸಿದರೆ 1,000 ಕೋಟಿ ರೂ. ಕಲೆಕ್ಷನ್ ಮಾಡೋದು ಡೌಟ್ ಅಂತಾರೆ ಸಿನಿ ಪಂಡಿತರು.
ಸಿನಿ ವ್ಯವಹಾರ ತಜ್ಞ ತರಣ್ ಆದರ್ಶ್ ಅವರ ಪ್ರಕಾರ, ಚಿತ್ರ ಸ್ವೀಕರಿಸಿದ ನೆಗೆಟಿವ್ ಪ್ರತಿಕ್ರಿಯೆಯೆ ಪರಿಣಾಮವಾಗಿ 'ಆದಿಪುರುಷ್' ನರಳಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ತೆರೆಕಂಡ ಈ ಸಿನಿಮಾ ಗ್ರಾಫಿಕ್ಸ್ ವಿಚಾರವಾಗಿ ಟ್ರೋಲ್ ಆಯಿತು. ನಂತರ ಡೈಲಾಗ್ ವಿಚಾರವಾಗಿ ವಿವಾದಕ್ಕೆ ಒಳಗಾಯಿತು.
ಇದನ್ನೂ ಓದಿ:'adipurush' Row: 'ಆದಿಪುರುಷ್' ವಿವಾದಗಳ ಮಧ್ಯೆ ಕೇವಲ ಮೆಚ್ಚುಗೆಗೆ ಗಮನ ನೀಡಿದ ನಟಿ ಕೃತಿ ಸನೋನ್
ತರಣ್ ಆದರ್ಶ್ ಟ್ವೀಟ್: ''ಪ್ರೇಕ್ಷಕರ ಋಣಾತ್ಮಕ ಮಾತುಗಳು ಚಿತ್ರದ ಮೇಲೆ ಪರಿಣಾಮ ಬೀರಿದೆ. ಮೊದಲ ವಾರಾಂತ್ಯದಲ್ಲಿ ಯಶಸ್ವಿ ಕಂಡ ಆದಿಪುರುಷ್ ಸೋಮವಾರ ಕುಸಿತ ಕಂಡಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಮಹಾಕಾವ್ಯವನ್ನು ತಿರುಚಿದ ಮತ್ತು ಅಗೌರವ ತೋರಿರುವುದಾಗಿ ಟೀಕೆಗಳನ್ನು ಸ್ವೀಕರಿಸಿದ ನಂತರ ಆದಿಪುರುಷ್ ತಂಡ ಚಿತ್ರದ ಕೆಲ ಸಂಭಾಷಣೆಗಳನ್ನು ಬದಲಾಯಿಸಲು ನಿರ್ಧರಿಸಿದೆ.
ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಜನಪ್ರಿಯ ಕಾರ್ಯಕ್ರಮದ ನಿರ್ಮಾಪಕ ಅಸಿತ್ ಮೋದಿ ವಿರುದ್ಧ ದೂರು!
ಓಂ ರಾವುತ್ ಆ್ಯಕ್ಷನ್ ಕಟ್ ಹೇಳಿರುವ ಆದಿಪುರುಷ್ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್, ಸೀತಾಮಾತೆ ಪಾತ್ರದಲ್ಲಿ ಕೃತಿ ಸನೋನ್, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ಅಭಿನಯಿಸಿದ್ದಾರೆ. ಟಿ ಸೀರಿಸ್ 500 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರ ನಿರ್ಮಿಸಿದ್ದು, ಹಾಕಿದ ಬಂಡವಾಳವೂ ವಾಪಸ್ ಬರೋದು ಡೌಟ್ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.