ಕರ್ನಾಟಕ

karnataka

ETV Bharat / entertainment

ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ: ನಟಿಯ ತಂದೆ ರವಿಕುಮಾರ್ ಹೇಳಿದ್ದೇನು? - vaishnavi gowda insta post

ನಟಿ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ನಿಶ್ಚಿತಾರ್ಥ ವದಂತಿ ವಿಚಾರವಾಗಿ ವೈಷ್ಣವಿ ತಂದೆ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

actress vaishnavi gowda father reacts on Engagement rumors
ನಿಶ್ಚಿತಾರ್ಥ ವದಂತಿ ಬಗ್ಗೆ ವೈಷ್ಣವಿ ಗೌಡ ತಂದೆ ರವಿಕುಮಾರ್ ಪ್ರತಿಕ್ರಿಯೆ

By

Published : Nov 25, 2022, 5:35 PM IST

Updated : Nov 25, 2022, 5:53 PM IST

ಕನ್ನಡ ಕಿರುತೆರೆ ಲೋಕದಲ್ಲಿ ಮಿಂಚಿದ ನಟಿ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಹರಡಿದೆ.​ ನಿಶ್ಚಿತಾರ್ಥ ವಿಚಾರ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ಕೂಡ ವೈರಲ್​ ಆದ ಬೆನ್ನಲ್ಲೇ ವೈಷ್ಣವಿ ಗೌಡ ನಿಶ್ಚಿತಾರ್ಥ ಮುರಿದುಕೊಂಡಿರುವುದಾಗಿ ಇನ್​ಸ್ಟಾಗ್ರಾಂ ಸ್ಟೋರಿ ಮೂಲಕ ಖಚಿತಪಡಿಸಿದ್ದಾರೆ.

ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವ ವಿರಾಜ್​ ಸಿನಿಮಾ ನಟ ವಿದ್ಯಾಭರಣ್​ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ - ಪ್ರತ್ಯಾರೋಪ ಚರ್ಚೆಯಾಗುತ್ತಿದೆ. ಇದರಿಂದ ಮನನೊಂದಿರುವ ವೈಷ್ಣವಿ ಗೌಡ ಇನ್​ಸ್ಟಾಗ್ರಾಂ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಾವು ಇದನ್ನು ಇಲ್ಲಿಗೆ ಕೈಬಿಡುತ್ತಿದ್ದೇವೆ. ಈ ವಿಷಯವನ್ನು ಮತ್ತೆ ಎಳೆಯಬೇಡಿ, ಇಲ್ಲಿಗೆ ಬಿಡಿ ಎಂದು ಎಲ್ಲರ ಬಳಿ ಮನವಿ ಮಾಡಿದ್ದಾರೆ. ಜೊತೆಗೆ ಎಲ್ಲರ ಶುಭಹಾರೈಕೆಗೆ ಧನ್ಯವಾದಗಳು ಎಂದು ಪೋಸ್ಟ್ ಹಾಕಿದ್ದರು.

ನಿಶ್ಚಿತಾರ್ಥ ವದಂತಿಗೆ ತೆರೆ ಎಳೆದ ನಟಿ ವೈಷ್ಣವಿ ಗೌಡ

ನಟಿ ವೈಷ್ಣವಿ ಗೌಡ ತಂದೆ ರವಿಕುಮಾರ್ ನಿಶ್ಚಿತಾರ್ಥ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಎಂಗೇಜ್​ಮೆಂಟ್ ಅಲ್ಲ. ಬೊಟ್ಟು ಇಡೋ ಶಾಸ್ತ್ರ ಮಾಡಿದ್ದೇವೆ ಅಷ್ಟೇ. ಜನವರಿ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಲು ಪ್ಲ್ಯಾನ್ ಮಾಡಿದ್ದೆವು. ಎಲ್ಲ ಅಂದಕೊಂಡಂತೆ ನಡೆದಿದ್ದರೆ ಮಾರ್ಚ್​​​ನಲ್ಲಿ ಮದುವೆ ಇತ್ತು. ಈ ರೀತಿ ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದರು.

ಇದನ್ನೂ ಓದಿ:ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ: ಮೌನ ಮುರಿದ ಸನ್ನಿಧಿ ಖ್ಯಾತಿಯ ನಟಿ

ಚಾಕೊಲೇಟ್ ಬಾಯ್ ಸಿನಿಮಾದಿಂದ ವಿದ್ಯಾಭರಣ್ ಪರಿಚಯ ಆಗಿದೆ. ಆ ಚಿತ್ರಕ್ಕೆ ವಿದ್ಯಾಭರಣ್ ಹೀರೋ, ನಮ್ಮ ಮಗಳು ವೈಷ್ಣವಿ ಹೀರೋಯಿನ್ ಆಗಿದ್ದರು. ಆದರೆ, ಸಿನಿಮಾ ಸ್ಟಾಪ್ ಆಯ್ತು. ಅಲ್ಲಿಂದ ಅವರ ಕಾಂಟ್ಯಾಕ್ಟ್ ಮಿಸ್ ಆಗಿತ್ತು. ಬಳಿಕ ನಮ್ಮ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ನಟ ವಿದ್ಯಾಭರಣ್ ಕುಟುಂಬಸ್ಥರು ಬಂದಿದ್ದರು.

ನಟಿ ವೈಷ್ಣವಿ ಗೌಡ ತಂದೆ ರವಿಕುಮಾರ್ ಪ್ರತಿಕ್ರಿಯೆ

ಅಲ್ಲಿಂದ ಎರಡು ಕುಟುಂಬದಲ್ಲಿ ಮತ್ತೆ ಸ್ನೇಹ ಸಂಬಂಧ ಶುರುವಾಯಿತು. ಎರಡು ಕುಟುಂಬಸ್ಥರು ಒಪ್ಪಿಕೊಂಡ ಮೇಲೆ ನಿಶ್ಚಿತಾರ್ಥ ಮಾಡೋಣ ಎಂದು ನಿರ್ಧರಿಸಿದ್ದೆವು. ಅಷ್ಟರಲ್ಲಿ ಈ ಘಟನೆ ನಡೆದಿದೆ ಅಂತಾ ವೈಷ್ಣವಿ ಗೌಡ ತಂದೆ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

Last Updated : Nov 25, 2022, 5:53 PM IST

ABOUT THE AUTHOR

...view details