ಸೆಲೆಬ್ರಿಟಿಗಳೆಂದ್ರೇನೆ ಹಾಗೆ. ಅವರ ದಿನನಿತ್ಯದ ಖರ್ಚು ವೆಚ್ಚ ಲಕ್ಷದಿಂದ ಹಿಡಿದು ಕೋಟಿವರೆಗೂ ಇರುತ್ತದೆ. ಸಿನಿಮಾ ಪ್ರಚಾರ, ಸಭೆ ಸಮಾರಂಭ ಹೆಸರಿನಲ್ಲಿ ಲಕ್ಷಾನುಗಟ್ಟಲೆ ಮೌಲ್ಯದ ಉಡುಗೆ ತೊಟ್ಟು ಕ್ಯಾಮರಾಗೆ ಪೋಸ್ ಕೊಡ್ತಾರೆ. ಇದೀಗ ಈ ವಿಚಾರದಲ್ಲಿ ನಟಿ ಊರ್ವಶಿ ರೌಟೇಲಾ ಹೆಸರು ಭಾರಿ ಸದ್ದು ಮಾಡ್ತಿದೆ. ನಟಿಯ ಮೈಮೇಲೆ 1 ಕೋಟಿ 20 ಲಕ್ಷ ರೂ ಮೌಲ್ಯದ ಸ್ವತ್ತುಗಳಿತ್ತು ಅಂದ್ರೆ ಯಾರಿಗೆ ತಾನೇ ಅಚ್ಚರಿಯಾಗಲ್ಲ ಹೇಳಿ?.
ಬಾಲಿವುಡ್‌ನ ರೂಪಸಿಯರಲ್ಲಿ ಒಬ್ಬರಾದ ಊರ್ವಶಿ ರೌಟೇಲಾ ಅವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಸೌಂದರ್ಯ ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಂದಲೇ ಹೆಚ್ಚು ಜನಪ್ರಿಯರು. ಇದೀಗ ಅವರು ಉತ್ತರಾಖಂಡದಲ್ಲಿ ತಮ್ಮ ಸೋದರ ಸಂಬಂಧಿಯ ಮದುವೆ ಸಮಾರಂಭದಲ್ಲಿ ಬ್ಯುಸಿಯಾಗಿದ್ದಾರೆ.