ಕರ್ನಾಟಕ

karnataka

ETV Bharat / entertainment

'ರಿಷಬ್​ಗಾಗಿ ಪ್ರಾರ್ಥಿಸುತ್ತಿರುವೆ': ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ - ರಿಷಬ್ ಪಂತ್ ಲೇಟೆಸ್ಟ್ ನ್ಯೂಸ್

ರಿಷಬ್ ಬಗ್ಗೆ ಮಾತನಾಡಿ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಮತ್ತೆ ಸುದ್ದಿಯಾಗಿದ್ದಾರೆ.

actress Urvashi Rautela
ಬಾಲಿವುಡ್​ ನಟಿ ಊರ್ವಶಿ ರೌಟೇಲಾ

By

Published : Feb 17, 2023, 6:12 PM IST

ಸಿನಿಮಾಗಿಂತ ಹೆಚ್ಚಾಗಿ ಸೋಶಿಯಲ್​ ಮೀಡಿಯಾ, ರಹಸ್ಯಕರ ಪೋಸ್ಟ್ ಮೂಲಕವೇ ಸದಾ ಸುದ್ದಿಯಲ್ಲಿರುವ ಬಾಲಿವುಡ್​ ಸುಂದರಿ ಊರ್ವಶಿ ರೌಟೇಲಾ ಇದೀಗ ಮತ್ತೆ ಸದ್ದು ಮಾಡಿದ್ದಾರೆ. ಅವರ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್​ ಮಾಡುತ್ತಿದ್ದಾರೆ.

ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಜೊತೆಗೆ ಬಾಲಿವುಡ್‌ನ ಬ್ಯೂಟಿಫುಲ್ ಆ್ಯಂಡ್​​ ಬೋಲ್ಡ್ ನಟಿ ಊರ್ವಶಿ ರೌಟೇಲಾ ಹೆಸರು ಹೆಚ್ಚಾಗಿ ಕೇಳಿ ಬರುತ್ತಿರುತ್ತದೆ. ಚೆಲುವೆ ಊರ್ವಶಿ ಕೂಡ ಕಮ್ಮಿ ಇಲ್ಲ, ರಹಸ್ಯಕರ ಪೋಸ್ಟ್ ಮೂಲಕವೇ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಇವರು ಸೀಕ್ರೆಟ್​ ಪೋಸ್ಟ್ ಮೂಲಕ ತಮ್ಮ ಹೆಸರನ್ನು ರಿಷಬ್ ಜೊತೆಗೆ ಕನೆಕ್ಟ್​ ಮಾಡುತ್ತಿರುತ್ತಾರೆ. ಆದ್ರೆ ಈವರೆಗೂ ಯಾವುದೇ ಸ್ಪಷ್ಟ, ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಹೀಗಿರುವಾಗ ಅವರ ಇತ್ತೀಚಿನ ವಿಡಿಯೋ ಅಭಿಮಾನಿಗಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವಂತಿದೆ. ಜೊತೆಗೆ ಟ್ರೋಲಿಗರಿಗೆ ಆಹ್ವಾನ ನೀಡಿದಂತಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಊರ್ವಶಿ ಅವರು ರಿಷಬ್ ಪಂತ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವೆ ಎಂದಿದ್ದಾರೆ.

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರಿಷಬ್ ಪಂತ್ ಅವರ ಇತ್ತೀಚಿನ ಫೋಟೋವನ್ನು ನೀವು ನೋಡಿದ್ದೀರಾ ಎಂದು ಪಾಪರಾಜಿಗಳು ಊರ್ವಶಿಯವರಲ್ಲಿ ಕೇಳಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಊರ್ವಶಿ, ಹೌದು ಎಂದು ಹೇಳಿದ್ದಾರೆ. ರಿಷಬ್ ಪಂತ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಇಡೀ ದೇಶ ಅವರಿಗಾಗಿ ಪ್ರಾರ್ಥಿಸುತ್ತಿದೆ ಎಂದು ಮತ್ತೋರ್ವರು ಹೇಳಿದ್ದು, ''ಹೌದು ನಮ್ಮ ಪ್ರಾರ್ಥನೆಯೂ ಅವರೊಂದಿಗಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ.

2018ರಲ್ಲಿ ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್​​ ಮುಂಬೈನಲ್ಲಿ ಅನೇಕ ಜನಪ್ರಿಯ ರೆಸ್ಟೋರೆಂಟ್‌ಗಳು, ಪಾರ್ಟಿಗಳು ಮತ್ತು ಈವೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಡೇಟಿಂಗ್ ವದಂತಿಗಳು ಪ್ರಾರಂಭಗೊಂಡವು. ನಂತರ 2019ರಲ್ಲಿ, ರಿಷಬ್ ಈ ವದಂತಿಗಳನ್ನು ತಳ್ಳಿಹಾಕಿದರು. ಗೆಳತಿ ಇಶಾ ನೇಗಿ ಅವರೊಂದಿಗಿನ ತಮ್ಮ ಸಂಬಂಧವನ್ನು ಘೋಷಿಸಿದರು. ಆದ್ರೆ ಇಂದಿಗೂ ಇವರಿಬ್ಬರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತವೆ.

ರಿಷಬ್ ಕಾರು ಅಪಘಾತ: ಹೊಸ ವರ್ಷಾಚರಣೆ ವೇಳೆ ಕಾರು ಅಪಘಾತದಲ್ಲಿ ಕ್ರಿಕೆಟಿಗ ರಿಷಬ್​​​ ಪಂತ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಅಂದು ಆ್ಯಕ್ಸಿಡೆಂಟ್​ ಸುದ್ದಿ ಹೊರಬಂದ ಕೂಡಲೇ ಊರ್ವಶಿ ರೌಟೇಲಾ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿ ಟ್ರೋಲ್​​ಗೊಳಗಾಗಿದ್ದರು. ತಮ್ಮ ಸುಂದರ ಫೋಟೋ ಹಂಚಿಕೊಂಡು ಪ್ರಾರ್ಥನೆ ಎಂದು ಬರೆದುಕೊಂಡಿದ್ದರು. ಬಿಳಿ ಹೃದಯದ ಇಮೋಜಿ, ಬಿಳಿ ಪಾರಿವಾಳ ಇಮೋಜಿ ಮತ್ತು 8 ನಕ್ಷತ್ರಗಳ ಸಿಂಬಲ್​ ಹಾಕಿಕೊಂಡಿದ್ದರು. ಇದಾದ ನಂತರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಿ ರಿಷಬ್​ ಅವರಿಗೆ ಚಿಕಿತ್ಸೆ ಕೊಡುತ್ತಿದ್ದ ವೇಳೆಯೂ ಆ ಆಸ್ಪತ್ರೆ ಫೋಟೋ ಹಂಚಿಕೊಂಡು ಸುದ್ದಿಯಾಗಿದ್ದರು.

ಇದನ್ನೂ ಓದಿ:ಕಾಂತಾರ ಸ್ಟಾರ್ ಜೊತೆ ಊರ್ವಶಿ ರೌಟೇಲಾ: ಮತ್ತೆ ಟ್ರೋಲ್​ಗೊಳಗಾದ ಬಾಲಿವುಡ್​ ಬ್ಯೂಟಿ

ಇತ್ತೀಚೆಗಷ್ಟೇ ಕನ್ನಡದ ಸ್ಟಾರ್​ ನಟ ರಿಷಬ್​ ಶೆಟ್ಟಿ ಅವರೊಂದಿಗೆ ಫೋಟೋ ಹಂಚಿಕೊಂಡು, ಕಾಂತಾರ 2 ಲೋಡಿಂಗ್​​ ಎಂದು ಬರೆದು ಸುದ್ದಿಯಾಗಿದ್ದರು. ಆದ್ರೆ ನಟಿ ಊರ್ವಶಿ ಅವರು ಕಾಂತಾರ 2ನಲ್ಲಿ ಭಾಗಿಯಾಗುತ್ತಿಲ್ಲ ಎಂದು ಚಿತ್ರತಂಡದ ಆಪ್ತಮೂಲಗಳು ತಿಳಿಸಿವೆ.

ABOUT THE AUTHOR

...view details