ಕರ್ನಾಟಕ

karnataka

ETV Bharat / entertainment

ಫ್ರಾನ್ಸ್‌ ವೈದ್ಯನೊಂದಿಗೆ ಫೋಟೋ ಹಂಚಿಕೊಂಡ ಊರ್ವಶಿ ರೌಟೇಲಾ: ರಿಷಭ್​​ ಪಂತ್​ ಉತ್ತಮ ಎಂದ ಅಭಿಮಾನಿ - ಊರ್ವಶಿ ರೌಟೇಲಾ ಇನ್​ಸ್ಟಾ ಪೋಸ್ಟ್

ಊರ್ವಶಿ ರೌಟೇಲಾ ಸ್ನೇಹಿತ ಸೋಲಾಲ್ ಸಯದ ಅವರ ಫೋಟೋ ಹಂಚಿಕೊಂಡಿದ್ದು, ಹೊಸ ಪ್ರೀತಿ ಹುಡುಕಿಕೊಂಡರೇ ನಟಿ ಎಂದು ಕೆಲ ನೆಟ್ಟಿಗರು ಗುಸುಗುಸು ಶುರು ಮಾಡಿದ್ದಾರೆ.

Urvashi Rautela pictures with Solal Sayada
ಊರ್ವಶಿ ರೌಟೇಲಾ ಡೇಟಿಂಗ್ ವದಂತಿ

By

Published : Feb 7, 2023, 2:56 PM IST

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ಮತ್ತೊಮ್ಮೆ ಸ್ನೇಹಿತ ಸೋಲಾಲ್ ಸಯದ (Solal Sayada) ಅವರೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಸೋಲಾಲ್ ಅವರೊಂದಿಗೆ ಸೆಲ್ಫಿ ಹಂಚಿಕೊಂಡಿದ್ದ ನಟಿ ಈಗ ಫ್ರಾನ್ಸ್‌ನ ಪ್ಯಾರಿಸ್‌ನಿಂದ ಮತ್ತಷ್ಟು ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಸೋಲಾಲ್ ಅವರೊಂದಿಗಿನ ಊರ್ವಶಿ ಅವರ ಈ ಫೋಟೋಗಳನ್ನು ನೋಡಿದ ನೆಟ್ಟಿಗರು, ಕ್ರಿಕೆಟಿಗ ರಿಷಭ್​ ಪಂತ್‌ ಅವರಿಂದ ಊರ್ವಶಿ ಹಿಂದೆ ಸರಿದಿದ್ದಾರೆಯೇ? ಎಂದು ಊಹಿಸುತ್ತಿದ್ದಾರೆ.

ಊರ್ವಶಿ ರೌಟೇಲಾ ಇನ್​ಸ್ಟಾ ಪೋಸ್ಟ್: ನಟಿ ಊರ್ವಶಿ ರೌಟೆಲಾ ಅವರು ಪ್ಯಾರಿಸ್‌ನ ರೆಸ್ಟೋರೆಂಟ್‌ನಲ್ಲಿ ಕ್ಲಿಕ್ಕಿಸಿರುವ ಚಿತ್ರಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಡೆನಿಮ್​ ಮತ್ತು ಬ್ಲ್ಯಾಕ್​ ಟಾಪ್​ ಧರಿಸಿ ನಟಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಸೋಲಾಲ್ ಅವರು ಕ್ಲಿಕ್ಕಿಸಿರುವ ಚಿತ್ರಗಳಲ್ಲಿ ನಟಿ ಊರ್ವಶಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಊರ್ವಶಿ ಹಂಚಿಕೊಂಡಿರುವ ಫೋಟೋಗಳಲ್ಲಿ ಸೋಲಾಲ್ ಅವರ ಚಿತ್ರವೂ ಇದೆ.

ಸೋಲಾಲ್ ಜೊತೆ ಊರ್ವಶಿ ಸೆಲ್ಫಿ:ಊರ್ವಶಿ ಅವರು ಹಂಚಿಕೊಂಡಿರುವ ಚಿತ್ರಗಳಲ್ಲಿ ಸೋಲಾಲ್ ಕಾಣಿಸಿಕೊಂಡಿರುವುದು ಇದೇ ಮೊದಲೇನು ಅಲ್ಲ. ಕಳೆದ ವಾರ, ರೌಟೆಲಾ ಚೆವಲ್ ಬ್ಲಾಂಕ್ ಪ್ಯಾರಿಸ್‌ನಿಂದ (Cheval Blanc Paris) ಸೋಲಾಲ್ ಅವರೊಂದಿಗೆ ಸೆಲ್ಫಿ ಶೇರ್ ಮಾಡಿಕೊಂಡಿದ್ದರು. ಈ ಸ್ಥಳವನ್ನು ಪ್ರೇಮಿಗಳು ಭೇಟಿಯಾಗಲು ಗೌಪ್ಯ ಸ್ವರ್ಗ ಎಂದು ಪರಿಗಣಿಸಲಾಗಿದೆ. ಚಿತ್ರವನ್ನು ಹಂಚಿಕೊಂಡ ಊರ್ವಶಿ ಸೋಲಾಲ್‌ ಅವರಿಗೆಗೆ ಟ್ಯಾಗ್ ಮಾಡಿ, 'ಪ್ರಾಮಾಣಿಕವಾಗಿ, ನನಗೆ ಯಾವುದೇ ವಿಷಾದವಿಲ್ಲ' ಎಂದು ಬರೆದುಕೊಂಡಿದ್ದರು.

ಸೋಲಾಲ್ ಸಯದ ಯಾರು?ಸೋಲಾಲ್ ಅವರೊಂದಿಗಿನ ಊರ್ವಶಿ ಅವರ ಇತ್ತೀಚಿನ ಪೋಸ್ಟ್‌ಗಳು, ಈ ವ್ಯಕ್ತಿ ಯಾರು? ಮತ್ತು ನಟಿಯು ಕ್ರಿಕೆಟಿಗ ರಿಷಬ್​​ ಪಂತ್ ಅವರನ್ನು ಒಂಟಿಯಾಗಿ ಬಿಡಲು ನಿರ್ಧರಿಸಿದ್ದಾರೆಯೇ? ಎಂಬ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಇನ್ನು ಊರ್ವಶಿಯ ಗೆಳೆಯ ಸೋಲಾಲ್ ಸಯದ (Solal Sayada) ಪ್ಯಾರಿಸ್‌ನಲ್ಲಿ ದಂತ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..

ನೆಟ್ಟಿಗರು ಹೀಗಂದ್ರು: ಊರ್ವಶಿ ಅವರು ಸೋಲಾಲ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಅವರ ಕಾಮೆಂಟ್​ ವಿಭಾಗದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ರಿಷಭ್​ ಪಂತ್​ ಅವರ ಕಥೆ ಏನಾಗಬಹುದು?, ನಿಮಗೆ ಏನಾಗಿದೆ ಮೇಡಂ?, ಇವರಿಗಿಂತ ರಿಷಭ್​​ ಉತ್ತಮ ಎಂದು ಅಭಿಮಾನಿಗಳು ಹೇಳಿದ್ದಾರೆ. ಮತ್ತೋರ್ವ ನೆಟ್ಟಿಗ "ಮದುವೆ ಯಾವಾಗ?" ಎಂದು ಕೇಳಿದ್ದಾರೆ.

ಇದನ್ನೂ ಓದಿ:ಪತಿ ವಿರುದ್ಧ ದೂರು ಕೊಟ್ಟ ನಟಿ ರಾಖಿ ಸಾವಂತ್: ಆದಿಲ್ ಖಾನ್ ಅರೆಸ್ಟ್!

ಕೆಲ ಸಮಯಗಳಿಂದ ಕ್ರಿಕೆಟಿಗ ರಿಷಭ್​​​ ಪಂತ್ ಅವರೊಂದಿಗೂ ನಟಿ ಊರ್ವಶಿ ರೌಟೆಲಾ ಹೆಸರು ಕೇಳಿ ಬರುತ್ತಿದೆ. ಹೊಸ ವರ್ಷಾಚರಣೆ ವೇಳೆ ಕ್ರಿಕೆಟಿಗ ಕಾರು ಅಪಘಾತಕ್ಕೊಳಗಾಗಿ ಸದ್ಯ ಗುಣಮುಖರಾಗುತ್ತಿದ್ದಾರೆ. ಅಪಘಾತದ ಸಂದರ್ಭ ರಿಷಬ್ ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಚಿತ್ರವನ್ನು ಸಹ ನಟಿ ಊರ್ವಶಿ ಹಂಚಿಕೊಂಡಿದ್ದರು. ಆ ವೇಳೆ, ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು.

ಇದನ್ನೂ ಓದಿ:ರಿಷಭ್​ ಪಂತ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ಸೆ ಫೋಟೋ ಹಂಚಿಕೊಂಡ ಊರ್ವಶಿ ರೌಟೇಲಾ

ABOUT THE AUTHOR

...view details