ಕರ್ನಾಟಕ

karnataka

ETV Bharat / entertainment

''ಪೊಲೀಸರು ಶೂಟಿಂಗ್ ಸೆಟ್​ಗೆ ಬಂದಿದ್ದರು, ನನ್ನನ್ನು ಅರೆಸ್ಟ್ ಮಾಡಿಲ್ಲ'': ಉರ್ಫಿ ಜಾವೇದ್ - ಉರ್ಫಿ ಜಾವೇದ್ ಶೂಟಿಂಗ್

ದುಬೈನಲ್ಲಿ ತಾನು ಅರೆಸ್ಟ್ ಆಗಿಲ್ಲವೆಂದು ನಟಿ ಉರ್ಫಿ ಜಾವೇದ್ ಸ್ಪಷ್ಟಪಡಿಸಿದ್ದಾರೆ.

Urfi Javed
ಉರ್ಫಿ ಜಾವೇದ್

By

Published : Dec 22, 2022, 5:02 PM IST

ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಮಾಡೆಲ್ ಉರ್ಫಿ ಜಾವೇದ್ ಅವರನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್​ ಆಗಿದೆ. ದುಬೈನಲ್ಲಿ ಸಾರ್ವಜನಿಕವಾಗಿ ಅಶ್ಲೀಲ ಉಡುಪಿನಲ್ಲಿ ಅವರು ಚಿತ್ರೀಕರಣ ಮಾಡುತ್ತಿದ್ದಾಗ ಯುಎಇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ಕೇಳಿದ ಉರ್ಫಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಈಗ ಈ ಎಲ್ಲಾ ವೈರಲ್​ ಸುದ್ದಿಗಳ ಬಗ್ಗೆ ಸ್ವತಃ ಉರ್ಫಿ ಅವರೇ ಸ್ಪಷ್ಟನೆ ನೀಡಿದ್ದಾರೆ.

ವೈರಲ್ ಆಗುತ್ತಿರುವ ಈ ಸುದ್ದಿಗಳ ಬಗ್ಗೆ ಮೌನ ಮುರಿದ ಉರ್ಫಿ ಜಾವೇದ್, ದುಬೈ ಪೊಲೀಸರು ತಮ್ಮ ಶೂಟಿಂಗ್ ಸೆಟ್‌ಗೆ ತಲುಪಿದ್ದರು ಎಂದು ಹೇಳಿದ್ದಾರೆ. ಪೊಲೀಸರು ತಮ್ಮ ಸೆಟ್‌ಗೆ ಬಂದದ್ದು ತನ್ನ ವೇಷಭೂಷಣದ ಕಾರಣದಿಂದಲ್ಲ, ಸ್ಥಳದ ಬಗ್ಗೆ ಕೆಲವು ದೂರು ಇದ್ದ ಕಾರಣ ಎಂದು ಉರ್ಫಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಕಮಿಷನ್ ನೀಡದ್ದಕ್ಕೆ ನಟಿ ಉರ್ಫಿ ಜಾವೇದ್​ಗೆ ಅತ್ಯಾಚಾರ, ಕೊಲೆ ಬೆದರಿಕೆ?: ರಿಯಲ್ ಎಸ್ಟೇಟ್ ಬ್ರೋಕರ್ ಸೆರೆ

ಲೊಕೇಶನ್ ಬಗ್ಗೆ ಕೆಲ ಅನುಮಾನವಿದ್ದ ಕಾರಣ ದುಬೈ ಪೊಲೀಸರು ಸೆಟ್‌ಗೆ ಬಂದರು. ಶೂಟಿಂಗ್‌ಗೆ ಹೆಚ್ಚು ಸಮಯ ಸಿಗಲಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಶೂಟಿಂಗ್ ನಡೆಯುತ್ತಿರುವುದರಿಂದ ಚಿತ್ರತಂಡ ಈ ಬಾರಿ ಶೂಟಿಂಗ್​ ವಿಸ್ತರಣೆ ಮಾಡಲಿಲ್ಲ ಎಂದು ಉರ್ಫಿ ಹೇಳಿದ್ದಾರೆ.

ABOUT THE AUTHOR

...view details