ಕರ್ನಾಟಕ

karnataka

ETV Bharat / entertainment

ನಟ ಶೀಜಾನ್​ ಖಾನ್ ನ್ಯಾಯಾಲಯಕ್ಕೆ ಹಾಜರು: ಆಘಾತಕಾರಿ ಸಂಗತಿ ಬಿಚ್ಚಿಟ್ಟ ತುನಿಶಾ ಶರ್ಮಾ ತಾಯಿ

ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ - ಮುಂದುವರಿದ ತನಿಖೆ - ನ್ಯಾಯಾಲಯಕ್ಕೆ ಹಾಜರಾದ ನಟ ಶೀಜಾನ್​ ಖಾನ್ - ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ ವನಿತಾ ಶರ್ಮಾ.

By

Published : Dec 30, 2022, 1:27 PM IST

Updated : Dec 30, 2022, 1:39 PM IST

Tunisha Sharma Mother vaneeta sharma statements
ನಟಿ ತುನಿಶಾ ಶರ್ಮಾ ತಾಯಿ ವನಿತಾ ಶರ್ಮಾ ಹೇಳಿಕೆ

ಮುಂಬೈ (ಮಹಾರಾಷ್ಟ್ರ): ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕ್ರಮ ಚುರುಕುಗೊಂಡಿದೆ. ಈ ಪ್ರಕರಣದ ಆರೋಪಿ ಹಾಗೂ ತುನಿಶಾ ಅವರ ಮಾಜಿ ಪ್ರಿಯಕರ, ಕಿರುತೆರೆ ಸಹನಟ ಶೀಜಾನ್ ಖಾನ್ ಪೊಲೀಸ್​ ವಶದಲ್ಲಿದ್ದಾರೆ. ಶೀಜಾನ್ ಖಾನ್​​ ಅವರ ಪೊಲೀಸ್ ಕಸ್ಟಡಿ ಡಿಸೆಂಬರ್ 30ಕ್ಕೆ ಅಂದರೆ ಇಂದು ಕೊನೆಗೊಳ್ಳುವ ಹಿನ್ನೆಲೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ತುನಿಶಾ ಶರ್ಮಾ ಆತ್ಮಹತ್ಯೆ:ಅತಿ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದ ತುನಿಶಾ ಶರ್ಮಾ ಡಿಸೆಂಬರ್​ 24ರಂದು ಆತ್ಮಹತ್ಯೆಗೆ ಶರಣಾದರು. ಅಲಿಬಾಬಾ - ದಸ್ತಾನ್ - ಎ - ಕಾಬೂಲ್‌ ಎಂಬ ಟಿವಿ ಶೋ ಶೂಟಿಂಗ್​​ ಸೆಟ್‌ನಲ್ಲಿ ತುನಿಶಾ ಶವವಾಗಿ ಪತ್ತೆಯಾಗಿದ್ದರು. ಸಹನಟರಾದ ಶೀಜಾನ್​ ಖಾನ್​ನೊಂದಿಗೆ ಸ್ನೇಹ ಮತ್ತು ಪ್ರೀತಿ ಹೊಂದಿದ್ದ ತುನಿಶಾ ಆತ್ಮಹತ್ಯೆಗೆ 15 ದಿನಗಳ ಮುನ್ನವಷ್ಟೇ ಬೇರ್ಪಟ್ಟಿದ್ದರು.

ನ್ಯಾಯಾಲಯಕ್ಕೆ ಶೀಜಾನ್ ಖಾನ್ ಹಾಜರು: ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇರೆಗೆ ನಟ ಶೀಜಾನ್​ ಖಾನ್ ಅವರನ್ನು ಪೊಲೀಸ್​ ವಶಕ್ಕೆ ಪಡೆಯಲಾಗಿತ್ತು. ಈ ಮೊದಲು ನಾಲ್ಕು ದಿನಗಳ ಕಾಲ ನ್ಯಾಯಾಲಯವು ಆರೋಪಿಯನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಿತ್ತು. ಡಿಸೆಂಬರ್​​ 28ಕ್ಕೆ ಪೊಲೀಸ್ ಕಸ್ಟಡಿ ಕೊನೆಗೊಂಡಿದ್ದರಿಂದ ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ವೇಳೆ, ಮತ್ತೆ ಎರಡು ದಿನಗಳ ಕಾಲ ಪೊಲೀಸ್​ ಕಸ್ಟಡಿಯ ಅವಧಿಯನ್ನು ಇಲ್ಲಿನ ವಸಾಯ್ ನ್ಯಾಯಾಲಯ ವಿಸ್ತರಿಸಿ ಆದೇಶಿಸಿತ್ತು. ಇಂದು ಆರೋಪಿಯನ್ನು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವನಿತಾ ಶರ್ಮಾ ಹೇಳಿದ್ದೇನು?ದಿವಂಗತ ನಟಿತುನಿಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಮತ್ತು ಸಂಬಂಧಿ ಪವನ್ ಶರ್ಮಾ ಅವರು ಇಂದು ಶೀಜಾನ್ ಖಾನ್​ ನ್ಯಾಯಾಲಯಕ್ಕೆ ಹಾಜರಾಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

  • ತುನಿಶಾ ಶೀಜಾನ್‌ಗೆ 25 ಸಾವಿರ ರೂಪಾಯಿ ಉಡುಗೊರೆ ನೀಡುತ್ತಿದ್ದಳು.
  • ನನ್ನ ಮಗಳು ತುನಿಶಾಗೆ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹೇರಲಾಗಿತ್ತು.
  • ಶೀಜಾನ್ ನನ್ನ ಮಗಳಿಗೆ ಉರ್ದು ಕಲಿಸುತ್ತಿದ್ದ.
  • ಶೀಜಾನ್ ಡ್ರಗ್ಸ್ ಸೇವನೆ ಮಾಡುತ್ತಿದ್ದ.
  • ನನ್ನ ಮಗಳು ಶೀಜಾನ್​ನಿಂದ ಬೇರ್ಪಟ್ಟ ನಂತರ ಒತ್ತಡದಲ್ಲಿದ್ದಳು.
  • ಒತ್ತಡದಿಂದಾಗಿ ನನ್ನ ಮಗಳು ನನ್ನಿಂದ ದೂರವಾಗುತ್ತಿದ್ದಳು.
  • ಶೀಜಾನ್ ತನ್ನನ್ನು ಬಳಸಿಕೊಂಡಿದ್ದಾನೆ ಎಂದು ನನ್ನ ಮಗಳು ತುನಿಶಾ ಹೇಳಿಕೊಂಡಿದ್ದಾಳೆ.
  • ಇದು ಕೊಲೆ ಆಗಿರಬಹುದು ಎಂದು ಶಂಕಿಸಲಾಗಿದೆ.
  • ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿ.
  • ಈ ಕುರಿತು ಗಂಭೀರವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಶೀಜಾನ್‌ನ ಫೋನ್‌ನಿಂದ 300 ಪುಟಗಳ ಚಾಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
  • ಈ ವೇಳೆ ಶೀಜಾನ್ ಮಾಜಿ ಪ್ರೇಯಸಿಯ ಹೆಸರೂ ಮುನ್ನೆಲೆಗೆ ಬರುತ್ತಿದೆ ಎಂದು ತಾಯಿ ತಿಳಿಸಿದ್ದಾರೆ.

ಇದನ್ನೂ ಓದಿ:ತುನಿಶಾ ತಾಯಿ ಭೇಟಿಯಾದ ಕೇಂದ್ರ ಸಚಿವ ರಾಮದಾಸ್​ ಅಠವಳೆ: ಕಠಿಣ ಶಿಕ್ಷೆಗೆ ಆಗ್ರಹ

ಮಗಳನ್ನು ಶೂಟಿಂಗ್​ ಸೆಟ್​​ನ ಕೋಣೆಯಿಂದ ಹೊರಗೆ ಕರೆದೊಯ್ದರು. ಆದರೆ ಆಂಬ್ಯುಲೆನ್ಸ್‌ಗೆ ಕರೆ ಮಾಡಲಿಲ್ಲ. ಇದು ಕೊಲೆಯೂ ಆಗಿರಬಹುದು. ಅಲ್ಲದೇ ಹಿಜಾಬ್ ಧರಿಸುವಂತೆ ಶೀಜಾನ್ ಒತ್ತಾಯಿಸಿದ್ದಾನೆ ಎಂದು ವನಿತಾ ಶರ್ಮಾ ಆರೋಪಿಸಿದ್ದಾರೆ. ಅಲ್ಲದೇ ಸೆಟ್​ನಲ್ಲಿಯೇ ಶೀಜಾನ್​​ ಡ್ರಗ್ಸ್ ಸೇವಿಸುತ್ತಿದ್ದರು ಎಂದು ತುನಿಶಾ ನನಗೆ ಮಾಹಿತಿ ನೀಡಿದ್ದಾಳೆ. ತುನಿಶಾಳ ವರ್ತನೆಯಲ್ಲಿ ಕೆಲ ಬದಲಾವಣೆಗಳಾಗಿದ್ದವು. ಶೀಜಾನ್ ನನ್ನ ಮಗಳಲ್ಲಿ ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಒತ್ತಾಯಿಸಿದ್ದರು ಎಂದು ವನಿತಾ ಅವರು ಹೇಳಿದ್ದಾರೆ. ತುನಿಶಾ ಅಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಸಹ ಮಾಡಿದ್ದಳು. ಆದರೆ ಅದರ ನಂತರ ಏನಾಯಿತು, ನಮಗೆ ತಿಳಿದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ರಾಮದಾಸ್ ಅಠವಳೆ ಪ್ರತಿಕ್ರಿಯೆ:ಗುರುವಾರ ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ನಟಿ ತುನಿಶಾ ಶರ್ಮಾ ಅವರ ತಾಯಿಯನ್ನು ಭೇಟಿಯಾಗಿ ಮಾತನಾಡಿದ್ದರು. ಬಳಿಕ ಪ್ರತಿಕ್ರಿಯಿಸಿದ ಅವರು, ಆರೋಪಿ ಶೀಜಾನ್ ಖಾನ್​​ಗೆ ಕಠಿಣ ಶಿಕ್ಷೆಯಾಗಬೇಕು.ಇದು ಖಂಡಿತವಾಗಿಯೂ ಆಗುತ್ತದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ. ಆರೋಪಿ ಆಕೆಗೆ ದ್ರೋಹ ಎಸಗಿದ್ದಾನೆ ಎಂದು ಆರೋಪಿಸಿದರು.

Last Updated : Dec 30, 2022, 1:39 PM IST

ABOUT THE AUTHOR

...view details