ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟಿ. ಸದ್ಯ 'ಭೋಲಾ ಶಂಕರ್' ಮತ್ತು 'ಜೈಲರ್' ಸಿನಿಮಾ ವಿಚಾರವಾಗಿ ಅವರು ಸುದ್ದಿಯಲ್ಲಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯ ಈ ಬಹುನಿರೀಕ್ಷಿತ ಸಿನಿಮಾಗಳು ಒಂದು ದಿನದ ಗ್ಯಾಪ್ನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಹಿನ್ನೆಲೆ ವಿಶೇಷ ಸಂದರ್ಶನವೊಂದರಲ್ಲಿ ಭಾಗವಹಿಸಿದ ತಮನ್ನಾ ಅವರು ತಮ್ಮ ವೃತ್ತಿ ಜೀವನದ ಜೊತೆಗೆ ಕೆಲವು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮತ್ತು ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಇವರಂತಹ ಸ್ಟಾರ್ ನಟರ ಜೊತೆ ನಟಿಸುವುದು ನನ್ನ ಕನಸಾಗಿತ್ತು. ಅದೀಗ ನನಸಾಗಿದೆ ಎಂದು ಹೇಳಿದ್ದಾರೆ. ಒಂದೇ ದಿನದ ಗ್ಯಾಪ್ನಲ್ಲಿ ಇಬ್ಬರು ಹಿರಿಯ ನಟರ ಚಿತ್ರಗಳನ್ನು ತೆಲುಗು ಮತ್ತು ತಮಿಳು ಪ್ರೇಕ್ಷಕರು ಸ್ವಾಗತಿಸಲಿರುವುದು ನಿಜಕ್ಕೂ ಸಂತಸದ ಅನುಭವ ಎಂದಿದ್ದಾರೆ. ಸಂದರ್ಶನದಲ್ಲಿ ಸಿನಿಮಾ ವಿಚಾರವಾಗಿ ಮಾತ್ರವಲ್ಲದೇ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.
ಚಿರಂಜೀವಿ ಜೊತೆ ತಮನ್ನಾ ಡ್ಯಾನ್ಸ್: "ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಆದರೆ, ಅವರ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ 'ಭೋಲಾ ಶಂಕರ್' ಮೂಲಕ ಆ ಕನಸು ನನಸಾಗಿದೆ. ಚಿರಂಜೀವಿ ಜೊತೆ ಹುಕ್ ಸ್ಟೆಕ್ ಹಾಕಿದ್ದೇನೆ. ಇನ್ನುಳಿದ ಸ್ಟೆಪ್ಸ್ ಕೂಡ ತುಂಬಾ ಚೆನ್ನಾಗಿದೆ. ನಾನು ಹೆಚ್ಚು ಪ್ರ್ಯಾಕ್ಟೀಸ್ ಮಾಡದೇ ಈ ಸಿನಿಮಾದ ಹಾಡಿಗೆ ಕುಣಿದಿದ್ದೇನೆ" ಎಂದಿದ್ದಾರೆ.
ಇದನ್ನೂ ಓದಿ:Bhola Shankar Trailer: ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಭೋಲಾ ಶಂಕರ್' ಟ್ರೇಲರ್ ರಿಲೀಸ್