ಕರ್ನಾಟಕ

karnataka

ETV Bharat / entertainment

1 ಲಕ್ಷ ಮೌಲ್ಯದ ಸೀರೆಯುಟ್ಟು ಅಂದ ಪ್ರದರ್ಶಿಸಿದ ಚೆಲುವೆ ತಮನ್ನಾ ಭಾಟಿಯಾ - ತಮನ್ನಾ ಭಾಟಿಯಾ ಲೇಟೆಸ್ಟ್ ನ್ಯೂಸ್

1,18,999 ರೂಪಾಯಿ ಮೌಲ್ಯದ ಸೀರೆಯುಟ್ಟು ಬಹುಭಾಷಾ ನಟಿ ತಮನ್ನಾ ಭಾಟಿಯಾ ಅಂದ ಪ್ರದರ್ಶಿಸಿದ್ದಾರೆ.

Tamannaah Bhatia
ನಟಿ ನಟಿ ತಮನ್ನಾ ಭಾಟಿಯಾ

By

Published : Mar 4, 2023, 12:31 PM IST

ನಟಿ ತಮನ್ನಾ ಭಾಟಿಯಾ ತಮ್ಮ ಅತ್ಯುತ್ತಮ ಅಭಿನಯದ ಮೂಲಕ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಟನೆ ಮಾತ್ರವಲ್ಲ, ಸೌಂದರ್ಯದ ವಿಚಾರವಾಗಿಯೂ ಸಖತ್​ ಸುದ್ದಿಯಲ್ಲಿರುತ್ತಾರೆ ಈ ಬಹುಭಾಷಾ ನಟಿ. ಇವರು ಹಂಚಿಕೊಳ್ಳುವ ಪ್ರತೀ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ.

ತನ್ನ ಸ್ಟೈಲ್​ ಸೆನ್ಸ್​ನಿಂದ ಸಖತ್​ ಸದ್ದು ಮಾಡುವ ಈ ಹಾಲ್ಗೆನ್ನೆ ಚೆಲುವೆ, ಆಗಾಗ್ಗೆ ತರೇವಾರಿ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಖುಷಿಗೆ ಕಾರಣರಾಗುತ್ತಾರೆ. ತನ್ನ ಆಯ್ಕೆ ಮತ್ತು ನೋಟಕ್ಕೆ ಹೆಸರುವಾಸಿ ಆಗಿರುವ ಇವರು ಅಭಿಮಾನಿಗಳನ್ನು ಮನೋರಂಜಿಸುವಲ್ಲಿ ವಿಫಲರಾಗಿಲ್ಲ. ಇವರ ಫೋಟೋಗಳಿಗಾಗಿ ಅಭಿಮಾನಿಗಳು ಸಹ ಕಾಯುತ್ತಿರುತ್ತಾರೆ. ಇಂದು ತಮನ್ನಾ ಭಾಟಿಯಾ ಕಾರ್ಯಕ್ರಮವೊಂದಕ್ಕಾಗಿ ಆಂಧ್ರಪ್ರದೇಶದ ವಿಜಯನಗರಕ್ಕೆ ಭೇಟಿ ನೀಡಿದ್ದರು. ಕಲಂಕಾರಿ ಸೀರೆಯುಟ್ಟು ಬಹು ಸುಂದರವಾಗಿ ಕಾಣಿಸಿಕೊಂಡರು.

ನಟಿ ನಟಿ ತಮನ್ನಾ ಭಾಟಿಯಾ

1,18,999 ರೂ. ಮೌಲ್ಯದ ಸೀರೆ: ನಟಿ ತಮನ್ನಾ ಭಾಟಿಯಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೈಯಿಂದ ನೇಯ್ದ ಜರಿ ಬುಟ್ಟಿ ಸೀರೆಯನ್ನು ಧರಿಸಿರುವುದನ್ನು ಈ ಚಿತ್ರಗಳಲ್ಲಿ ಕಾಣಬಹುದು. ಡಿಸೈನರ್​​ ಅರ್ಚನಾ ಜಾಜು ವಿನ್ಯಾಸಗೊಳಿಸಿರುವ ಈ ಸೀರೆಯು ಪ್ರಾಣಿ, ಅರಣ್ಯದ ವಿನ್ಯಾಸವನ್ನು ಹೊಂದಿದೆ. ಆಭರಣ ಬ್ರ್ಯಾಂಡ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಟಿ ತಮನ್ನಾ ಭಾಟಿಯಾ ಈ ಸುಂದರ ಸೀರೆಯನ್ನು ಆರಿಸಿಕೊಂಡರು. ಈ ಸುಂದರ ಸೀರೆ ಬೆಲೆ 1,18,999 ರೂಪಾಯಿ.

ನಟಿ ತಮನ್ನಾ ಭಾಟಿಯಾ ಸೀರೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಈ ಚಿತ್ರಗಳು ಸಖತ್​ ವೈರಲ್​ ಆಗಿ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿವೆ.

ಸೀರೆಯುಟ್ಟು ಅಂದ ಪ್ರದರ್ಶನ:ಬಾಲಿವುಡ್​​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಅವರ ಸ್ಟೈಲಿಸ್ಟ್ ಆಗಿಯೂ ಕೆಲಸ ಮಾಡುವ ಶಲೀನಾ ನಥಾನಿ, ತಮನ್ನಾ ಭಾಟಿಯಾ ಅವರ ಸ್ಟೈಲಿಸ್ಟ್ ಆಗಿ ಕೆಲಸ ಮಾಡಿದ್ದು, ನಟಿಯ ನೋಟ ಸಖತ್​ ಸ್ಟೈಲಿಶ್ ಮತ್ತು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದೆ. ಕಿವಿಯೋಲೆಗಳು ಮತ್ತು ಬಳೆಗಳಿಗೆ ಹೊಂದಿಕೆಯಾಗುವ ನೆಕ್‌ಪೀಸ್‌ನೊಂದಿಗೆ ನಟಿ ಭಾಟಿಯಾ ತಮ್ಮ ಚೆಲುವನ್ನು ಚೆಲ್ಲಿದ್ದಾರೆ. ಹೆಚ್ಚು ಮೇಕ್​ಅಪ್​ ಮಾಡಿಕೊಳ್ಳದ ತಮನ್ನಾ, ತನ್ನ ಅಂದ ಪರಿಪೂರ್ಣಗೊಳಿಸಲು ಹಣೆಗೆ ಕೆಂಪು ಬಿಂದಿಯನ್ನೂ ಇಟ್ಟಿದ್ದಾರೆ.

ಇದನ್ನೂ ಓದಿ:ವಿರಾಟ್​ ಕೊರಳಲ್ಲಿ ರುದ್ರಾಕ್ಷಿ ಸರ, ಭಸ್ಮ ಆರತಿಯಲ್ಲಿ ವಿರುಷ್ಕಾ ಭಾಗಿ.. ಮಹಾಕಾಳೇಶ್ವರನ ದರ್ಶನ ಪಡೆದ ದಂಪತಿ

ಜೈಲರ್ ಚಿತ್ರದಲ್ಲಿ ತಮನ್ನಾ ಭಾಟಿಯಾ: ಕೆಲಸದ ವಿಚಾರ ನೋಡುವುದಾದರೆ, ನಟಿ ತಮನ್ನಾ ಭಾಟಿಯಾ ಕೊನೆಯದಾಗಿ ನೆಟ್‌ಫ್ಲಿಕ್ಸ್ ಪ್ರಸಾರಗೊಂಡ ಪ್ಲಾನ್ ಎ ಪ್ಲಾನ್ ಬಿನಲ್ಲಿ ನಟ ರಿತೇಶ್ ದೇಶಮುಖ್ ಅವರೊಂದಿಗೆ ಕಾಣಿಸಿಕೊಂಡರು. ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಓಟಿಟಿಯಲ್ಲಿ ಬಿಡುಗಡೆ ಆಗಲಿರುವ ಚಿತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಮದುವೆ ಬೆನ್ನಲ್ಲೇ ಕಿಯಾರಾ ಹೊಸ ಲುಕ್​.. ಸೂರ್ಯನಿಗೆ ಸೆಡ್ಡು ಹೊಡೆದ ಮಿಸಸ್​ ಮಲ್ಹೋತ್ರಾ

ABOUT THE AUTHOR

...view details