ಕರ್ನಾಟಕ

karnataka

ETV Bharat / entertainment

ಸ್ವರಾ ಫಹಾದ್​ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ

ನಟಿ ಸ್ವರಾ ಭಾಸ್ಕರ್​ ಮತ್ತು ರಾಜಕಾರಣಿ ಫಹಾದ್​ ಅಹ್ಮದ್ ಮದುವೆ ಕಾರ್ಯಕ್ರಮ ನಾಳೆಯಿಂದ ಶುರುವಾಗಲಿದೆ.

marriage
ಸ್ವರಾ ಫಹಾದ್​

By

Published : Mar 10, 2023, 1:39 PM IST

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಮತ್ತು ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ನಾಯಕ ಫಹಾದ್​ ಅಹ್ಮದ್​ ಜನವರಿ 6 ರಂದು ವಿಶೇಷ ಕಾಯ್ದೆಯಡಿ ವಿವಾಹವಾಗಿದ್ದಾರೆ. ನ್ಯಾಯಾಲಯದಲ್ಲಿ ಮದುವೆ ಆಗಿರುವ ದಂಪತಿ ಇದೀಗ ಅದ್ದೂರಿ ಮದುವೆಗೆ ಸಜ್ಜಾಗಿದ್ದಾರೆ. ಸ್ವರಾ ಮತ್ತು ಫಹಾದ್​ ಸಾಂಪ್ರದಾಯಿಕ ವಿವಾಹಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

ಹೆಚ್ಚಿನ ಬಿಟೌನ್​ ಸೆಲೆಬ್ರಿಟಿಗಳು ಡೆಸ್ಟಿನೇಷನ್​ ಮ್ಯಾರೇಜ್​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಸ್ವರಾ ತನ್ನ ಮದುವೆಯನ್ನು ತಾಯಿಯ ಮನೆಯಲ್ಲಿ ಏರ್ಪಡಿಸಿದ್ದಾರೆ. ವಿವಾಹಕ್ಕೆ ದೀಪಗಳಿಂದ ಅಲಂಕರಿಸಲ್ಪಟ್ಟಿರುವ ಮನೆಯ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ನಟಿ ಹಂಚಿಕೊಂಡಿದ್ದಾರೆ. ಜೊತೆಗೆ, "ಇದು ಅದ್ದೂರಿ ಮದುವೆಯ ಫೀಲ್​ ನೀಡುತ್ತಿದೆ" ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ.

ತಮಾಷೆಯ ರೀಲ್​ ಶೇರ್​ ಮಾಡಿದ ಸ್ವರಾ ಸ್ನೇಹಿತರು

ಸ್ವರಾ ಮತ್ತು ಫಹಾದ್​ ವಿವಾಹ ಕಾರ್ಯಕ್ರಮವು ಮಾರ್ಚ್ 11, ಶನಿವಾರದಿಂದ ಪ್ರಾರಂಭವಾಗಲಿದೆ. ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ಸ್ವರಾ ಅವರ ಸ್ನೇಹಿತರು ಇನ್​ಸ್ಟಾಗ್ರಾಮ್​ನಲ್ಲಿ ತಮಾಷೆಯ ರೀಲ್​ ಅನ್ನು ಶೇರ್​ ಮಾಡಿದ್ದಾರೆ. ಮತ್ತು ಅದನ್ನು ಸ್ವರಾ ಅವರು ತಮ್ಮ ಖಾತೆಯಲ್ಲಿ ಮರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸ್ವರಾ ಸ್ನೇಹಿತರು ಡ್ಯಾನ್ಸ್​ ಮಾಡುತ್ತಿರುವುದು ಕಾಣಬಹುದು. ಈ ರೀಲ್​ ಅನ್ನು ದುಗ್ಗಲ್​ ಶಿಲ್ಪಿ ಎಂಬವರು ಅಪ್​ಲೋಡ್​ ಮಾಡಿದ್ದಾರೆ.

ಇದನ್ನೂ ಓದಿ:RRR​ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರಾ ರಾಜಮೌಳಿ?

ಸ್ವರಾ ಫಹಾದ್​ ಶಾದಿ: ಫಹಾದ್ ಅಹ್ಮದ್ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಯುವಜನ ಸಭಾದ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅಭಿನಯದ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದ ಸದ್ದು ಮಾಡುತ್ತಿರುತ್ತಾರೆ. ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಹಿಂದೆ ಪ್ರತಿಭಟನೆಯೊಂದರಲ್ಲಿ ಭೇಟಿ ಆಗಿದ್ದರು. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಆಯಿತು. ಬಳಿಕ ಪ್ರೀತಿ ಚಿಗುರೊಡೆದು ಈಗಾಗಲೇ ನ್ಯಾಯಾಲಯದಲ್ಲಿ ಮದುವೆ ಆಗಿದ್ದರು. ಇದೀಗ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ.

ಫಹಾದ್ ಅಹ್ಮದ್​ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟ ಬಗ್ಗೆ ನಟಿ ಸ್ವರಾ ಸ್ವತಃ ಟ್ವೀಟ್​ ಮಾಡಿದ್ದರು. ಜೊತೆಗೆ ತಾವಿಬ್ಬರೂ ಭೇಟಿಯಾದ ಕ್ಷಣದಿಂದ ಹಿಡಿದುಕೊಂಡು ಮದುವೆಯವರೆಗಿನ ಕ್ಷಣಗಳ ವಿಡಿಯೋ ಶೇರ್​ ಮಾಡಿದ್ದರು. ಅಲ್ಲದೇ, ''ಕೆಲವೊಮ್ಮೆ ನಾವು ಏನನ್ನಾದರೂ ಹುಡುಕುತ್ತಾ ಅಲೆದಾಡುತ್ತೇವೆ. ಆದರೆ, ಅದು ಯಾವಾಗಲೂ ನಮ್ಮ ಸುತ್ತಲೂ ಇರುತ್ತದೆ'' ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದರು.

ಸ್ವರಾ ಫಹಾದ್​ ಮದುವೆಗೆ ಅಲಂಕೃತಗೊಂಡ ಮನೆ

ಮುಂದುವರೆದು, ''ನಾವಿಬ್ಬರೂ ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ, ಇದಕ್ಕೂ ಮುನ್ನ ಸ್ನೇಹವನ್ನು ನಾವು ಕಂಡುಕೊಂಡೆವು. ಇದರ ನಂತರ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡೆವು. ಫಹಾದ್ ಅಹ್ಮದ್​ ನನ್ನ ಹೃದಯದ ಕೋಣೆಯಲ್ಲಿ ನಿನಗೆ ಆತ್ಮೀಯ ಸ್ವಾಗತ. ನಾನು ಸ್ವಲ್ಪ ವಿಭಿನ್ನವಾಗಿದ್ದೇನೆ. ಆದರೆ, ಈಗ ನಾನು ನಿಮ್ಮವಳು'' ಎಂದು ನಟಿ ಹೇಳಿದ್ದರು. ಈ ಟ್ವೀಟ್​ಗೆ ಅಭಿಮಾನಿಗಳು ಪ್ರತಿಕ್ರಿಯಿಸಿ ನವಜೋಡಿಗೆ ಅಭಿನಂದನೆ ತಿಳಿಸಿದ್ದರು.

ಇದನ್ನೂ ಓದಿ:ಖಳನಟ ವಜ್ರಮುನಿಯ ‘‘ಯಲಾ‌ ಕುನ್ನಿ’’ ಡೈಲಾಗ್ ಈಗ ಕೋಮಲ್ ಅಭಿನಯದ ಹೊಸ ಚಿತ್ರದ ಟೈಟಲ್

ABOUT THE AUTHOR

...view details