ಜೂನ್ 6 ರಂದು ತಾನು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ಅಭಿಮಾನಿಗಳಿಗೆ ಕೊಟ್ಟಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ವರಾ ಅವರ ಫೋಟೋ ವೈರಲ್ ಆಗುತ್ತಿದೆ.
ಇಂದು ಇನ್ಸ್ಟಾಗ್ರಾಮ್ನಲ್ಲಿ ಬೇಬಿ ಬಂಪ್ ಫೋಟೋ ಶೇರ್ ಮಾಡಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್, "Feeling like the globe" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸ್ವರಾ ನೇರಳೆ ಮತ್ತು ನೀಲಿ ಬಣ್ಣದ ಡ್ರೆಸ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಬೇಬಿ ಬಂಪ್ ಫೋಟೋದಲ್ಲಿ ನಟಿ ಮುದ್ದಾದ ನಗು ಬೀರಿದ್ದಾರೆ. ಸ್ವರಾ ಬುಕ್ ಸ್ಟ್ಯಾಂಡ್ ಪಕ್ಕದಲ್ಲಿ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಜೂನ್ ಮೊದಲ ವಾರದಲ್ಲಿ ನಟಿ ಸ್ವರಾ ಭಾಸ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರೆಗ್ನೆನ್ಸಿ ನ್ಯೂಸ್ ಅನೌನ್ಸ್ ಮಾಡಿದ್ದರು. ಅಂದೇ ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದ ಸ್ವರಾ, "ಕೆಲವೊಮ್ಮೆ ನಿಮ್ಮ ಎಲ್ಲ ಪ್ರಾರ್ಥನೆಗಳು ಒಟ್ಟಿಗೆ ಉತ್ತರಿಸಲ್ಪಡುತ್ತವೆ. ನಾವು ಸಂಪೂರ್ಣ ಹೊಸ ಜಗತ್ತಿಗೆ ಕಾಲಿಡಲು ಆಶೀರ್ವಾದಿಸಲ್ಪಟ್ಟಿದ್ದೇವೆ, ಕೃತಜ್ಞರಾಗಿದ್ದೇವೆ, ಉತ್ಸುಕಯಾಗಿದ್ದೇವೆ'' ಎಂದು ಬರೆದುಕೊಂಡಿದ್ದರು.
ಇದೇ ಸಾಲಿನ ಫೆಬ್ರವರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಮದುವೆ ಆದರು. ಅಂದಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದವು. ಸ್ವರಾ ಅವರು ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ಜೂನ್ನಲ್ಲಿ ಹಂಚಿಕೊಂಡ ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಅಕ್ಟೋಬರ್‌ನಲ್ಲಿ ಮಗುವಿನ ಜನನವಾಗಲಿದೆ.