ಕರ್ನಾಟಕ

karnataka

ETV Bharat / entertainment

ನಾನು ಭಾರತಕ್ಕೆ ಬರುವುದು ಕೆಲ ಭಾರತೀಯರಿಗೆ ಇಷ್ಟವಿರಲಿಲ್ಲ; ಕೊಲೆ ಬೆದರಿಕೆ ಬಂದಿತ್ತು! ಸನ್ನಿ ಲಿಯೋನ್​ - ಸನ್ನಿ ಲಿಯೋನ್ ಲೇಟೆಸ್ಟ್ ನ್ಯೂಸ್

ನಟಿ ಸನ್ನಿ ಲಿಯೋನ್ ಸಂದರ್ಶನವೊಂದರಲ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಹಳೆಯ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

Sunny Leone
ಸನ್ನಿ ಲಿಯೋನ್

By

Published : Dec 24, 2022, 1:54 PM IST

Updated : Dec 24, 2022, 2:04 PM IST

ಬಾಲಿವುಡ್‌ನ 'ಬೇಬಿ ಡಾಲ್' ಸನ್ನಿ ಲಿಯೋನ್ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಗಳಿಸಿದ್ದಾರೆ. ಇದೀಗ ಸನ್ನಿ ತಮ್ಮ ತಮಿಳು ಚಿತ್ರ 'ಓ ಮೈ ಘೋಸ್ಟ್' ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ, ಸನ್ನಿ ತಮ್ಮ ಜೀವನಕ್ಕೆ ಸಂಬಂಧಿಸಿದ ಹಳೆಯ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿ ಟ್ರೋಲ್​ಗೆ ಒಳಪಡಬೇಕಾಗಿದ್ದಲ್ಲದೇ ಕೊಲೆ ಬೆದರಿಕೆ ಕೂಡ ಬಂದಿತ್ತು ಎಂದು ಸನ್ನಿ ಹೇಳಿದ್ದಾರೆ.

ವರದಿಗಳ ಪ್ರಕಾರ, ಸನ್ನಿ ಲಿಯೋನ್ ತನ್ನ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಬಾಲಿವುಡ್‌ಗೆ ಹೋಗಲು ಮನಸ್ಸು ಮಾಡಿದ್ದಾಗ ಮತ್ತು ಬಿಗ್​​ಬಾಸ್‌ನಿಂದ ಆಫರ್ ಬಂದ ವೇಳೆ ತನಗೆ ಬೆದರಿಕೆ ಮೇಲ್​​ಗಳು (threatening mails) ಬರಲು ಪ್ರಾರಂಭಿಸಿದವು. ಭಾರತದಿಂದ ತನಗೆ ದ್ವೇಷದ ಮೇಲ್​​ ಬಂದಿದ್ದು, ಈ ಕಾರಣದಿಂದ ತಾನು ಕೆಲ ಯೋಜನೆಯನ್ನು ನಿರಾಕರಿಸಿದ್ದೇನೆ ಎಂದು ಸನ್ನಿ ಬಹಿರಂಗಪಡಿಸಿದ್ದಾರೆ. ಬಳಿಕ ಸನ್ನಿ ಭಾರತಕ್ಕೆ ಬಂದು ಬಿಗ್ ಬಾಸ್‌ನ ಭಾಗವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಇದು ನನ್ನ ಚಿಕ್ಕ ವಯಸ್ಸಿನಲ್ಲಿ (19) ಪ್ರಾರಂಭವಾಯಿತು. ಜನರು ನನ್ನನ್ನು ಇಷ್ಟಪಡಲಿಲ್ಲ ಮತ್ತು ನಾನು ಭಾರತಕ್ಕೆ ಬರುವುದು ಕೆಲ ಭಾರತೀಯರಿಗೆ ಇಷ್ಟವಿರಲಿಲ್ಲ. ಅವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಕಾನ್ಪುರ ರಾಕ್‌ನೈಟ್ ಶೋನಲ್ಲಿ ಹಾರ್ಡಿ ಸಂಧು ಗಾನಸುಧೆ.. ವಿಡಿಯೋ!

2011ರಲ್ಲಿ ಬಿಗ್ ಬಾಸ್ 5ನೇ ಸೀಸನ್​ನಲ್ಲಿ ಸನ್ನಿ ಕಾಣಿಸಿಕೊಂಡಿದ್ದರು. ಇದಾದ ನಂತರ ಅವರು 'ಜಿಸ್ಮ್-2' (2012) ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಅಬ್ಬರಿಸಿದರು. ಶಾರುಖ್ ಖಾನ್ ಜೊತೆ ಸನ್ನಿ ಐಟಂ ಸಾಂಗ್ ಕೂಡ ಮಾಡಿದ್ದಾರೆ.

Last Updated : Dec 24, 2022, 2:04 PM IST

ABOUT THE AUTHOR

...view details