ಮುಂಬೈ: ತಮ್ಮ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಅಂತಾರಾಷ್ಟ್ರೀಯ ಸೌಂದರ್ಯ ಉತ್ಪನ್ನವೊಂದಕ್ಕೆ ರಾಯಭಾರಿಯಾದ ನಟಿ ಸುಹಾನಾ ಖಾನ್ ಸ್ಟಾರ್ಡಮ್ ಬಗ್ಗೆ ಅನೇಕರು ಟೀಕಿಸಿದ್ದರು. ತಂದೆ ಶಾರುಖ್ ಖಾನ್ ಹೆಸರಲ್ಲಿ ಇಷ್ಟು ದೊಡ್ಡ ಆಫರ್ ಪಡೆದರು ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಆದರೆ, ಇದಕ್ಕೆ ಯಾವುದಕ್ಕೂ ಸುಹಾನಾ ಖಾನ್ ಪ್ರತಿಕ್ರಿಯಿಸಿರಲಿಲ್ಲ. ಈ ನಡುವೆ ಬಾಲಿವುಡ್ ನಟ-ನಟಿಯರ ಮಕ್ಕಳೇ ಬಹುತೇಕ ನಟನೆ ಮಾಡುತ್ತಿರುವ ನೆಟ್ಫ್ಲಿಕ್ಸ್ನ ಆರ್ಚಿಸ್ ಸಿನಿಮಾದಲ್ಲಿ 23 ವರ್ಷದ ಸುಹಾನಾ ಕೂಡ ಮೊದಲ ಬಾರಿಗೆ ಬಾಲಿವುಡ್ ಪ್ರವೇಶಕ್ಕೆ ಮುಂದಾಗಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಕೋರಿಯೋಗ್ರಾಫರ್ ಬೊಸ್ಕೊ, ನಟಿ ಸುಹಾನಾ ತಂದೆಯ ಗುಣಗಳನ್ನು ಚೆನ್ನಾಗಿ ಕಲಿತು, ಅಳವಡಿಸಿಕೊಂಡಿದ್ದಾರೆ ಎಂದು ಆಕೆಯ ನಟನೆ, ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಿ ಆರ್ಚಿಸ್ ಸಿನಿಮಾದಲ್ಲಿ ಬೊಸ್ಕೊ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೆರಿಕದ ಜನಪ್ರಿಯ ಕಾಮಿಕ್ ಕಥೆ ಆಧಾರದ ಈ ಚಿತ್ರವನ್ನು ಜೋಯಾ ಆಕ್ತಾರ್ ನಿರ್ದೇಶಿಸುತ್ತಿದ್ದಾರೆ.
23 ವರ್ಷದ ನಟಿ ಸೆಟ್ಗೆ ತಮ್ಮ ಸಾಮಗ್ರಿ - ಸರಂಜಾಮುಗಳನ್ನು ತರುವುದಿಲ್ಲ. ದೊಡ್ಡ ಸೂಪರ್ ಸ್ಟಾರ್ ಮಗಳಾಗಿದ್ದರು. ಯಾವುದೇ ಹಮ್ಮು ಬಿಮ್ಮು ಇಲ್ಲದೇ, ಕೆಲಸದ ಪರವಾಗಿ ಸಕರಾತ್ಮಕವಾಗಿರುತ್ತಾರೆ. ನನಗೆ ಆಕೆ ವಿಶೇಷ. ಆಕೆಯ ಶ್ರಮ, ಹಠ ಮತ್ತು ಕೆಲಸ ಸೇರಿದಂತೆ ಯಾವುದೇ ಕಡೆ ಆಕೆ ಸಕಾರಾತ್ಮಕವಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಆಕೆ ತನ್ನ ವ್ಯಕ್ತಿತ್ವದೊಂದಿಗೆ ಬರುತ್ತಾಳೆ. ಆಕೆ ಸುತ್ತ ಮುತ್ತ ಕೆಲಸ ಮಾಡುವವರನ್ನು ಗಮನಿಸಿ, ಕಲಿಯುತ್ತಾಳೆ. ಇದು ಕಲಾವಿದರಿಗೆ ಬೇಕಾದ ದೊಡ್ಡ ಅಂಶವಾಗಿದೆ. ಇದನ್ನು ಆಕೆಯ ತಂದೆಯಿಂದ ಅವಳು ಕಲಿತಿರಬಹುದು. ಇದು ಅದ್ಬುತ ಎಂದು ಐಫಾ ಆವಾರ್ಡ್ ಅಂಡ್ ವಿಕೇಂಡ್ನ ಸಂದರ್ಶನದಲ್ಲಿ 48 ವರ್ಷದ ಕೊರಿಯೋಗ್ರಾಫರ್ ಮಾತನಾಡಿದ್ದಾರೆ.