ಕರ್ನಾಟಕ

karnataka

ETV Bharat / entertainment

ವಿದ್ಯಾರ್ಥಿಗಳೇ ನಿರ್ದೇಶಿಸಿದ ಕಿರುಚಿತ್ರ ಮೆಚ್ಚಿದ ನಟಿ ಸೋನು ಗೌಡ

ಎರಡು ದಿನಗಳ ಓಪನ್ ಡೇಸ್ ಕಾರ್ಯಕ್ರಮಕ್ಕೆ ನಟಿ ಸೋನು ಗೌಡ ವಿಶೇಷ ಅಥಿಯಾಗಿ ಆಗಮಿಸಿದ್ದರು.

Open Days Event
ಓಪನ್ ಡೇಸ್ ಈವೆಂಟ್

By

Published : Aug 24, 2022, 8:09 PM IST

ಬೆಂಗಳೂರಿನ ಸಿಆರ್​ಇಒ ವ್ಯಾಲಿ ಸ್ಕೂಲ್ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ನಿರ್ವಹಿಸುವ LISAA ಸ್ಕೂಲ್ ಆಫ್ ಡಿಸೈನ್, ಎರಡು ದಿನಗಳ ಓಪನ್ ಡೇಸ್ ಕಾರ್ಯಕ್ರಮ ಆಯೋಜಿಸಿದೆ. ಈವೆಂಟ್ ಫ್ಯಾಷನ್, ಚಲನಚಿತ್ರ ಮತ್ತು ವಿನ್ಯಾಸದ ಕೆಲಿಡೋಸ್ಕೋಪ್ ವಿಷಯಗಳನ್ನು ಒಳಗೊಂಡಿದೆ.

ಮೊದಲ ದಿನ (ಇಂದು) "ಮೈ ಲೈಫ್" ಎಂಬ ವಿಶಿಷ್ಟ ಥೀಮ್​ನೊಂದಿಗೆ ಫ್ಯಾಶನ್ ಶೋ ನಡೆಸಲಾಯಿತು. ವಿದ್ಯಾರ್ಥಿಗಳು ಒಟ್ಟು 80 ಉಡುಪುಗಳೊಂದಿಗೆ ಫ್ಯಾಶನ್ ಶೋನಲ್ಲಿ ಭಾಗಿಯಾದರು. ಭಾರತದ ವಿವಿಧ ಕಸೂತಿ ಮತ್ತು ಬಟ್ಟೆಗಳನ್ನು ಪ್ರದರ್ಶಿಸುವ ಫ್ಯಾಬ್ರಿಕ್ ಮತ್ತು ಜವಳಿಗಳ ಸಂವಾದಾತ್ಮಕ ಪ್ರದರ್ಶನವಿತ್ತು.

ಓಪನ್ ಡೇಸ್ ಈವೆಂಟ್​ನಲ್ಲಿ ನಟಿ ಸೋನು ಗೌಡ

ಕಾರ್ಯಕ್ರಮಕ್ಕೆ ನಟಿ ಸೋನುಗೌಡ ವಿಶೇಷ ಅಥಿಯಾಗಿ ಆಗಮಿಸಿ ವಿದ್ಯಾರ್ಥಿಗಳ ರ್ಯಾಂಪ್‌ ವಾಕ್ ಹಾಗು ವಿದ್ಯಾರ್ಥಿಗಳು ನಿರ್ದೇಶಿಸಿದ ಕಿರುಚಿತ್ರಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕಿರುಚಿತ್ರ ನಿರ್ದೇಶನದ ಬಗ್ಗೆ ನೇರ ಮಾತುಕತೆ ನಡೆಸಿದರು. ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು.

LISAA ಸ್ಕೂಲ್ ಆಫ್ ಡಿಸೈನ್ ಬೆಂಗಳೂರಿನ ನಿರ್ದೇಶಕ ಕೇಸ್ವಾನಿ ಮಾತನಾಡಿ, "ನಮ್ಮ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ವೇದಿಕೆಯನ್ನು ತೆರೆಯಲು ನಾವು ಉತ್ಸುಕರಾಗಿದ್ದೇವೆ. ನಾವು ಪ್ರತಿ ವರ್ಷ ಓಪನ್ ಡೇಸ್ ಈವೆಂಟ್ ಮಾಡುತ್ತೇವೆ. ಆದರೆ ಕಳೆದ 3 ವರ್ಷಗಳಿಂದ ನಾವು ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ಈ ಕಾರ್ಯಕ್ರಮದೊಂದಿಗೆ ನಮ್ಮ ಪದವೀಧರ ಬ್ಯಾಚ್​ಗೆ ತಮ್ಮ ನವೀನ ಕೆಲಸಗಳನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಅವಕಾಶ ಸಿಕ್ಕಿತು. ಇತ್ತೀಚೆಗೆ ನಡೆದ ಛಾಯಾಚಿತ್ರ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸೆರೆಹಿಡಿದ ಕೆಲವು ಅತ್ಯುತ್ತಮ ಭಾವಚಿತ್ರಗಳು ಮತ್ತು ಭೂದೃಶ್ಯಗಳನ್ನು ಪ್ರದರ್ಶಿಸಲಾಯಿತು" ಎಂದು ತಿಳಿಸಿದರು.

ಇದನ್ನೂ ಓದಿ:ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಂದ ಡೊಳ್ಳು ಸಿನಿಮಾದ ಹಾಡು ಬಿಡುಗಡೆ

ABOUT THE AUTHOR

...view details