ಕರ್ನಾಟಕ

karnataka

ETV Bharat / entertainment

Actress Sindhu.. ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ತಮಿಳು ನಟಿ ಸಿಂಧು ಚಿಕಿತ್ಸೆ ಫಲಿಸದೇ ಸಾವು.. - Sindhu films

Actress Sindhu passes away: ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ತಮಿಳು ನಟಿ ಸಿಂಧು ಚಿಕಿತ್ಸೆ ಫಲಿಸದೇ ವಲಸರವಕ್‌ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ.

Actress Sindhu, Known for 'Angadi Theru' Role, Passes Away at 44 After Battle with Cancer
Actress Sindhu, Known for 'Angadi Theru' Role, Passes Away at 44 After Battle with Cancer

By

Published : Aug 7, 2023, 4:57 PM IST

ಚೆನ್ನೈ (ತಮಿಳುನಾಡು) : ವಸಂತಬಾಲನ್ ಅವರ ಐಕಾನಿಕ್ ಚಿತ್ರ 'ಅಂಗಡಿ ತೇರು' ಚಿತ್ರದಲ್ಲಿ ನಟಿಸಿದ್ದ ಖ್ಯಾತ ತಮಿಳು ನಟಿ ಸಿಂಧು ಅವರು ಚೆನ್ನೈನ ವಲಸರವಕ್ಕಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು. ಸ್ತನ ಕ್ಯಾನ್ಸರ್ ವಿರುದ್ಧ ಸುದೀರ್ಘ ಹೋರಾಡಿದ ಬಳಿಕ ಅವರು ಇಂದು ಬೆಳಗ್ಗೆ 2:15 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. 2020 ರಲ್ಲಿ ನಟಿಗೆ ಸ್ತನ ಕ್ಯಾನ್ಸರ್​ ಕಾಣಿಸಿಕೊಂಡಿಕೊಂಡಿತ್ತು. ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.

ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸಿಂಧು, 'ಅಂಗಡಿ ತೇರು' ಚಿತ್ರದ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ಬಳಿಕ ನಾಡೋಡಿಗಳು, ನಾನ್ ಮಹಾನ್ ಅಲ, ತೇನವಟ್ಟು ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ಅಂಗಡಿ ತೇರು' ಚಿತ್ರ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಈ ಚಿತ್ರದ ಬಳಿಕ ಬಣ್ಣದ ಲೋಕದಲ್ಲಿ ಉತ್ತುಂಗ ಶಿಖರಕ್ಕೆ ಏರಿದ್ದರು. ಆದರೆ, ತಮಗೆ ಸ್ತನ ಕ್ಯಾನ್ಸರ್​ ಇರುವುದು ಗೊತ್ತಾಗುತ್ತಿದ್ದಂತೆ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು.

ತಮಿಳು ನಟಿ ಸಿಂಧು

ಇದನ್ನೂ ಓದಿ:ಇಲ್ಲೇ ಸ್ವರ್ಗ ಸೃಷ್ಟಿಸಿದ್ದ ನೀನು, ಇಷ್ಟು ಬೇಗ ಅಲ್ಲಿಗೆ ಹೋಗುವ ಆತುರವೇನಿತ್ತು?.. ಸ್ಪಂದನಾ ಬಗ್ಗೆ ರೇಖಾರಾಣಿ ಭಾವುಕ

ಅವಕಾಶಗಳು ಬರುವುದು ಕೂಡ ಕಡಿಮೆಯಾಗಿದ್ದವು. ಹಾಗಾಗಿ ನಟಿ ಸಿಂಧು ಆರ್ಥಿಕ ಸಮಸ್ಯೆಯಿಂದ ಜರ್ಜರಿತಗೊಂಡಿದ್ದರು. ಕುಟುಂಬ ನಿರ್ವಹಣೆಗಾಗಿ ಸಾಕಷ್ಟು ಕಷ್ಟ ಪಡುತ್ತಿದ್ದರು. ತಮಗೆ ಆರ್ಥಿಕ ಸಹಾಯ ಮಾಡುವಂತೆ ವಿಡಿಯೋ ಮೂಲಕ ಮನವಿ ಸಹ ಮಾಡಿಕೊಂಡಿದ್ದರು. ಸಾಯುವ ಕೆಲವು ದಿನಗಳ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕುವ ಮೂಲಕ ತಮ್ಮ ಸಂಕಟವನ್ನು ಅವರು ತೋಡಿಕೊಂಡಿದ್ದರು. ''ಪ್ರತಿದಿನ ನಾನು ಸತ್ತು ಬದುಕುತ್ತಿದ್ದೇನೆ. ನನ್ನನ್ನು ಕೊಲ್ಲು ಇಲ್ಲವೇ ನೆಮ್ಮದಿಯಿಂದ ಬದುಕಲು ಬಿಡು ಎಂದು ದೇವರನ್ನು ಕೇಳುತ್ತೇನೆ. ಆದರೆ, ಕ್ಯಾನ್ಸರ್​ಗೆ ಯಾವುದೇ ಚಿಕಿತ್ಸೆ ಇಲ್ಲ. ನಾನು ಬಯಾಪ್ಸಿ ಮಾಡಿದ್ದೇನೆ. ಕ್ಯಾನ್ಸರ್ ಗಡ್ಡೆಗಳು ಹರಡಿವೆ. ಒಂದು ಬದಿಯ ಸ್ತನವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ ಎಂದು ತಮ್ಮ ನೋವಿನ ಬಗ್ಗೆ ಬರೆದುಕೊಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ನಟ-ನಟಿಯರು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಬಾಲ್ಯದಲ್ಲಿಯೇ ವಿವಾಹವಾಗಿದ್ದ ಸಿಂಧು, ತಮ್ಮ ಖಾಸಗಿ ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿದ್ದರು. ಬಡತನವು ಅವರನ್ನು ನಟಿಸುವ ಅನಿವಾರ್ಯತೆಗೆ ತಂದು ನಿಲ್ಲಿಸಿತ್ತು. ಸ್ವಂತ ಸಂಬಂಧಿಕರು ಮತ್ತು ಸ್ನೇಹಿತರಿಂದ ಆರ್ಥಿಕ ಶೋಷಣೆ ಮತ್ತು ತೊಂದರೆಗಳನ್ನು ಎದುರಿಸಿದ್ದರು. ಇದರ ಹೊರತಾಗಿಯೂ 2015 ರಲ್ಲಿ ಚೆನ್ನೈ ಪ್ರವಾಹ ಮತ್ತು ಕೊರೊನಾ ವೇಳೆ ತಮ್ಮ ಮಾನವೀಯ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದರು. ಸಿಂಧು ಅವರ ಅಂತ್ಯಕ್ರಿಯೆ ಇಂದು ಸಂಜೆ (ಆಗಸ್ಟ್ 7) ವಿರುಗಂಬಾಕ್ಕಂ ಸ್ಮಶಾನದಲ್ಲಿ ನಡೆಯಲಿದೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಸ್ನೇಹಿತರು, ಸಂಬಂಧಿಕರು ಮತ್ತು ಅಭಿಮಾನಿಗಳು ನಟಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ; ಹೃದಯಾಘಾತದಿಂದ ಸಾವನ್ನಪ್ಪಿದ ನಟ-ನಟಿಯರಿವರು

ABOUT THE AUTHOR

...view details