ಚಿತ್ತಾರ ಸಹಯೋಗದೊಂದಿಗೆ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ 'ದ ಸೋಕ್ (ಮಾರ್ಕೆಟ್)' ಅನ್ನು ಆಯೋಜಿಸಿದೆ. ಸೆಪ್ಟೆಂಬರ್ 25ರವರೆಗೆ ನಡೆಯಲಿರುವ ಈ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಟಿ ಶುಭಾ ಪೂಂಜಾ ಹಾಗೂ ನಟ ನಿರಂಜನ್ ಶೆಟ್ಟಿ ಇಂದು ಉದ್ಘಾಟಿಸಿದರು.
ಈ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ನಟಿ ಶುಭಾ ಪೂಂಜಾ, ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗಿನ ಕಲಾವಿದರ ಕೈಯಲ್ಲಿ ಅರಳಿದ ಕಲಾಕೃತಿ, ಆಭರಣ, ಉಡುಪುಗಳು ಇಲ್ಲಿವೆ. ನವರಾತ್ರಿಯ ವಿಶೇಷವಾಗಿ ಈ ಪ್ರದರ್ಶನ 10 ದಿನಗಳ ಕಾಲ ನಡೆಯಲಿದೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಮನೆ ಮಂದಿಯೆಲ್ಲರಿಗೂ ಇಷ್ಟವಾಗುವ ವಸ್ತುಗಳು ಇಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಿದೆ. ನನಗೆ ಇಲ್ಲಿನ ಎಲ್ಲ ವಸ್ತುಗಳು ಇಷ್ಟವಾಗಿದೆ. ನೋಡುವುದಕ್ಕೆ ಕಣ್ಣಿಗೆ ಹಬ್ಬದ ಹಾಗೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .
ಇಂದಿನಿಂದ 10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ. ಅಲಂಕಾರಿಕ ವಸ್ತು, ವೈವಿಧ್ಯಮಯ ಉಡುಪು, ಆಭರಣಗಳು ಇಲ್ಲಿ ಲಭ್ಯವಿದೆ.