ಕರ್ನಾಟಕ

karnataka

ETV Bharat / entertainment

ಸೌತ್​ ಸಿನಿಮಾ ನಟಿ ಮನೆಯಲ್ಲಿ ಕಳ್ಳತನ: ಮನೆಗೆಲಸದಾಕೆಯನ್ನು ಕ್ಷಮಿಸಿದ ಜನಪ್ರಿಯ ತಾರೆ! - ನಟಿ ಮನೆಯಲ್ಲಿ ಕಳ್ಳತನ

Actress Shobana: ನಟಿ ಶೋಭನಾ ಮನೆಯಲ್ಲಿ ಕಳ್ಳತನ ನಡೆದಿದ್ದು, ಹಣ ಕದ್ದಿರುವ ವಿಚಾರವನ್ನು ಮನೆಗೆಲಸದವರು ಒಪ್ಪಿಕೊಂಡಿದ್ದಾರೆ.

Theft in Actress Shobana house
ನಟಿ ಶೋಭನಾ ಮನೆಯಲ್ಲಿ ಕಳ್ಳತನ

By

Published : Jul 28, 2023, 4:12 PM IST

ಚೆನ್ನೈ (ತಮಿಳುನಾಡು): ಬ್ಲಾಕ್‌ ಬಸ್ಟರ್ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ದಕ್ಷಿಣ ಚಿತ್ರರಂಗದ ನಟಿ ಶೋಭನಾ (Shobana). ಇಂತಹ ನಟಿ ನಿವಾಸದಲ್ಲಿ ಕಳ್ಳತನ ನಡೆದಿದೆ. 41,000 ರೂ. ಕದ್ದಿದ್ದು ಹೊರಗಿನ ಕಳ್ಳರಲ್ಲ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ. ಹೀಗೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಮನೆಗೆಲಸದವರಾದ ವಿಜಯಾ ಅವರನ್ನು ನಟಿ ಕ್ಷಮಿಸಿದ್ದಾರೆ.

ಮನೆಯಲ್ಲಿ ನಗದು ಕಳ್ಳತನ ಆಗಿರುವ ಬಗ್ಗೆ ನಟಿ ಶೋಭನಾ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರನ್ನೂ ಸಲ್ಲಿಸಿದ್ದರು. ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ಪದ್ಮಶ್ರೀ ಪುರಸ್ಕೃತೆಯೂ ಆಗಿರುವ ನಟಿ ಶೋಭನಾ ಅವರ ಈ ಪ್ರಕರಣದ ತನಿಖೆ ಚುರುಕಾಗಿತ್ತು. ಮನೆಕೆಲಸದವರಾದ ವಿಜಯಾ ಅವರು ತನಿಖೆ ವೇಳೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಅವರನ್ನು ನಟಿ ಕ್ಷಮಿಸಿದ್ದಾರೆ. ತಪ್ಪೊಪ್ಪಿಕೊಂಡ ಮನೆಕೆಲಸದವರಿಗೆ ಎರಡನೇ ಅವಕಾಶ ನೀಡಲು ನಟಿ ನಿರ್ಧರಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಶೋಭನಾ ಅವರ ತಾಯಿ ಅನಂದಂ ಅವರ ಬಳಿಯಿದ್ದ ನಗದು ಕ್ರಮೇಣ ಕಡಿಮೆ ಆಗಲು ಆರಂಭಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಗೆಲಸದವರ ಮೇಲೆ ಅನುಮಾನಗೊಂಡ ನಟಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಚೆನ್ನೈನ ತೇನಂಪೇಟ್​ನಲ್ಲಿರುವ ಶ್ರೀಮನ್ ಶ್ರೀನಿವಾಸ ರಸ್ತೆಯ ನಿವಾಸದಲ್ಲಿ ತನಿಖೆ ನಡೆಸಿದ್ದಾರೆ.

ದೂರಿನ ಆಧಾರದ ಮೇಲೆ ತೆನಂಪೇಟ್​ ಪೊಲೀಸರು ಕೂಲಂಕಷವಾಗಿ ವಿಚಾರಣೆ ನಡೆಸಿದ್ದು, ವಿಜಯಾ ಅವರು ಮಾರ್ಚ್ ನಿಂದ ಜೂನ್ ನಡುವೆ ಹಣವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಮೊತ್ತವನ್ನು ಮನೆಯ ಕಾರು ಚಾಲಕ ಮುರುಗನ್‌ ಅವರಿಗೆ ನೀಡಿದ್ದು, ಅದನ್ನು ವಿಜಯಾ ಅವರ ಮಗಳಿಗೆ ಗೂಗಲ್ ಪೇ ಮೂಲಕ ಕಾರು ಚಾಲಕ ವರ್ಗಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಬಡತನವೇ ತನ್ನ ಈ ಕೃತ್ಯಕ್ಕೆ ಕಾರಣ ಎಂದು ವಿಜಯಾ ತಿಳಿಸಿದ್ದಾರೆ.

ಇದನ್ನೂ ಓದಿ:ಮದುವೆ ಶಾಸ್ತ್ರಕ್ಕೆ ಹೆಸರು ಬದಲಾಯಿಸಿಕೊಂಡಿದ್ದ ಶಾರುಖ್​ - ಗೌರಿ: ಕಿಂಗ್​​ ಖಾನ್​ ಹೆಸರಲ್ಲಿದೆ ವಿಶೇಷತೆ

ನಟಿ ಶೋಭನಾ ಅವರು ವಿಜಯಾ ಅವರ ಕೃತ್ಯಕ್ಕೆ ಕ್ಷಮೆ ನೀಡಿದ್ದಾರೆ. ಪೊಲೀಸ್​ ಠಾಣೆಯಲ್ಲಿ ಸಲ್ಲಿಸಿದ್ದ ದೂರನ್ನು ಹಿಂತೆಗೆದುಕೊಂಡಿದ್ದಾರೆ. ಮನೆಗೆಲಸದವರಿಗೆ ಕೆಲಸ ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಮನೆಗೆಲಸದವರ ಮುಂದಿನ ಸಂಬಳದಲ್ಲಿ ಕದ್ದ ಮೊತ್ತವನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ. ಈ ನಿರ್ಧಾರದ ಮೂಲಕ ನಟಿ ಶೋಭನಾ ಅವರ ಮನೆಯಲ್ಲಿ ಮತ್ತೆ ಸಾಮರಸ್ಯದ ವಾತಾವರಣ ಮೂಡಿದೆ. ನಟಿ ಶೋಭನಾ ತಮ್ಮ ತಾಯಿ ಆನಂದಮ್ ಅವರೊಂದಿಗೆ ನೆಲೆಸಿದ್ದಾರೆ ಮತ್ತು ಭರತನಾಟ್ಯ ತರಬೇತಿ ತರಗತಿಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ:Jailer: ಆಡಿಯೋ ಲಾಂಚ್​ಗೆ ಕ್ಷಣಗಣನೆ - ಪೋಸ್ಟರ್​ ಮೂಲಕ ಕುತೂಹಲ ಹೆಚ್ಚಿಸಿದ 'ಜೈಲರ್'

ABOUT THE AUTHOR

...view details