ಚಂದನವನದ ಬೆಡಗಿ ಶಾನ್ವಿ ಶ್ರೀವಾಸ್ತವ್ ತಮ್ಮ ಸೌಂದರ್ಯ ಮತ್ತು ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಯಾಂಡಲ್ವುಡ್ ಜೊತೆಗೆ ಟಾಲಿವುಡ್ನಲ್ಲಿ ಮಿಂಚುತ್ತಿರುವ ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಹೊಸ ಫೋಟೋವೊಂದನ್ನು ಶಾನ್ವಿ ಹಂಚಿಕೊಂಡಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಒಂದು ವಿಶೇಷ ಫೋಟೋಶೂಟ್ನಲ್ಲಿ ನಟಿ ಉಟ್ಟುಕೊಂಡಿರೋ ಸೀರೆ ಅವರಿಗೆ ತುಂಬಾ ಸ್ಪೆಷಲ್ ಆಗಿದೆಯಂತೆ. 15 ವರ್ಷದ ಹಿಂದಿನ ಈ ಸೀರೆ ಮೇಲೆ ಅವರಿಗೊಂದು ವಿಶೇಷ ಅಟ್ಯಾಚ್ಮೆಂಟ್ ಕೂಡ ಇದೆಯಂತೆ.
ಹೌದು. ನಟಿ ಶಾನ್ವಿ ಉಟ್ಟಿರುವ ಈ ಸೀರೆ ಬೇರೆ ಯಾರದ್ದೋ ಅಲ್ಲ, ಅವರ ತಾಯಿಯದ್ದೇ. ಅವರ ಅಮ್ಮನ 15 ವರ್ಷದ ಹಿಂದಿನ ಈ ಸಾರಿಯನ್ನು ಶಾನು ಒಂದೊಳ್ಳೆ ಫೋಟೋಶೂಟ್ಗಾಗಿ ಉಪಯೋಗಿಸಿಕೊಂಡಿದ್ದಾರೆ. ಚೋರ್ ಬಜಾರ್ನಲ್ಲಿ ಈ ಫೋಟೋಗಳನ್ನು ತೆಗೆಯಲಾಗಿದ್ದು, ಅಂಗಡಿಗಳ ಮುಂದೆ ನಿಂತು ನಟಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಶಾನ್ವಿ, ಸೀರೆ ಬಗೆಗಿನ ಅಟ್ಯಾಚ್ಮೆಂಟ್ ಅನ್ನು ಕ್ಯಾಪ್ಶನ್ನಲ್ಲಿ ಬರೆದುಕೊಂಡಿದ್ದಾರೆ.
"ಅಮ್ಮನ 15 ವರ್ಷದ ಹಿಂದಿನ ಈ ಸೀರೆಯನ್ನು ನಾನು ಫೋಟೋಶೂಟ್ನಲ್ಲಿ ಉಟ್ಟುಕೊಂಡಿದ್ದೇನೆ. ಇಡೀ ಫೋಟೋಶೂಟ್ ಅನ್ನು ಸ್ಪೆಷಲ್ ಆಗಿಯೇ ಮಾಡಲಾಗಿದೆ. ಇದು ನನಗೆ ತುಂಬಾನೇ ಖುಷಿ ತಂದಿದೆ" ಎಂದು ಹೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಹೃದಯದ ಎಮೋಜಿ ಮತ್ತು ಬಗೆ ಬಗೆಯ ಬರಹಗಳೊಂದಿಗೆ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ. ಜೊತೆಗೆ ಶಾನ್ವಿ ಹೊಸ ಫೋಟೋಗಳಿಗೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. ಇವರಿಗೆ ಇನ್ಸ್ಟಾಗ್ರಾಮ್ನಲ್ಲಿ 1.4 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ.