ಬೆಂಗಳೂರು: ಬಾಲಿವುಡ್ ನಟಿ ಸಾರಾ ಆಲಿ ಖಾನ್ ಫಿಟ್ನೆಸ್ ಎಂದರೆ ಬಲು ಇಷ್ಟ ಎಂಬುದು ಗೊತ್ತಿರುವ ಸಂಗತಿ. ಸಿನಿಮಾ ಪ್ರವೇಶಕ್ಕೂ ಮುನ್ನ ಇದೇ ಫಿಟ್ನೆಸ್ ಸಹಾಯದಿಂದ ತೂಕ ನಷ್ಟಕ್ಕೆ ಮುಂದಾಗಿದ್ದ ಸಾರಾ, ಇದೀಗ ಮತ್ತಷ್ಟು ಇದರ ಮೋಡಿಗೆ ಒಳಗಾಗಿದ್ದಾರೆ. ಇದರ ಫಲಿತಾಂಶವಾಗಿ ಅದ್ಬುತ ಬದಲಾವಣೆ ಗಮನಿಸಬಹುದಾಗಿದೆ. ತಮ್ಮ ಹೊಸ ವರ್ಕ್ಔಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಾರಾ ಅವರನ್ನು ನೋಡಿದ ಅಭಿಮಾನಿಗಳು ವಾಹ್ ಎನ್ನದೇ ಇರಲಾರರು. ಸೋಮವಾರದ ಪ್ರೇರಣಾದಾಯಕ ವಿಡಿಯೋ ಆಗಿ ತಮ್ಮ ಜಿಮ್ನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ಹೊಸ ವಿಡಿಯೋದಲ್ಲಿ ಜಿಮ್ನಲ್ಲಿ ಬೆವರು ಸುರಿಸುತ್ತಿರುವ ನಟಿ, ಹೊಸ ವಾರದ ಸಂಭ್ರಮ, ಮತ್ತಷ್ಟು ಇಂಚು ಕರಗಿಸುವ ಗುರಿ, ಮತ್ತಷ್ಟು ಪಂಚ್, ಕೆಲವು ಸ್ನಿಕ್ ಪಿಕ್ ಎಂದು ಸಣ್ಣ ವಿಡಿಯೋ ಹಂಚಿಕೊಂಡಿದ್ದಾರೆ. ಇದೇ ವೇಳೆ, ನನ್ನ ಮೊದಲ ಪ್ರೀತಿ ವರ್ಕ್ ಔಟ್ಗೆ ಇದೆ. ಇದು ನನ್ನ ದೇಹವನ್ನು ಮತ್ತಷ್ಟು ಹುರಿಗೊಳಿಸಲು ಸಹಾಯ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಜಿಮ್ನಲ್ಲೂ ಮೇಕಪ್ನಲ್ಲಿ ಕಂಗೊಳಿಸಿದ ನಟಿ: ಇನ್ನು ನಟಿ ಸಾರಾ ಅವರು ತಮ್ಮ ಈ ಫಿಟ್ನೆಸ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಅವರ ಫಿಟ್ನೆಸ್ ಪ್ರೀತಿ, ಸಮರ್ಪಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರಿ ಕಮೆಂಟ್ಗಳ ಸುರಿಮಳೆ ಮಾಡಿದ್ದಾರೆ. ಅನೇಕ ಮಂದಿ ಈಗಾಗಲೇ ಸಾರಾ ಅವರ ಜಿಮ್ ಲುಕ್ ನೋಡಲು ಕಾತರಾರಾಗಿದ್ದರು. ಈ ಕುರಿತು ಕೆಲವರು ಟ್ವೀಟ್ ಮಾಡಿದ್ದು, ಜಿಮ್ನಲ್ಲೂ ಸಂಪೂರ್ಣ ಮೇಕಪ್ನಲ್ಲಿದ್ದೀರಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತೊಬ್ಬರು ಆಕೆ ನೇರವಾಗಿ ಸಿನಿಮಾ ಶೂಟ್ನಿಂದ ಜಿಮ್ಗೆ ಬಂದಿರಬೇಕು ಎಂದಿದ್ದಾರೆ.