ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಅಮರನಾಥ್ ಯಾತ್ರೆ ಕೈಗೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಪಟೌಡಿ ವಂಶದ ಕುಡಿ ಆಗಿರುವ ಈ ಬಹುಬೇಡಿಕೆಯ ನಟಿ ದೇವಸ್ಥಾನಗಳಿಗೆ ಭೇಟಿ ಕೊಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅದರಂತೆ ಇದೀಗ ಅಮರನಾಥ್ ಯಾತ್ರೆ ಪೂರ್ಣಗೊಳಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟಿ ಸಾರಾ ಅಲಿ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಮರನಾಥ್ ಯಾತ್ರೆಯ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಈ ಬಾಲಿವುಡ್ ಬೆಡಗಿ ದೇವಸ್ಥಾನಗಳಿಗೆ ಭೇಟಿ ಕೊಡೋದು ಹೊಸ ವಿಚಾರವೇನಲ್ಲ. ಇಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟ ಫೋಟೋ, ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಾರಾ ಅಲಿ ಖಾನ್ ಅವರ ಮೊಗದಲ್ಲಿ ಮಹಾದೇವನನ್ನು ನೋಡಿದ ಸಂತೋಷ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಿಡಿಯೋ ಶೇರ್ ಮಾಡುವ ಮೂಲಕ ಸಾರಾ ಅಲಿ ಖಾನ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಜುಲೈ 20 ರಂದು ಸಾರಾ ತಮ್ಮ ಅಮರನಾಥ್ ಯಾತ್ರೆಯ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಚಿತ್ರಗಳಲ್ಲಿ, ಸಾರಾ ಕಣಿವೆ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ನಂತರ ಭಕ್ತಾದಿಗಳು ಸೆರೆ ಹಿಡಿದಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡಿತ್ತು. ಇಂದು ಸ್ವತಃ ನಟಿಯೇ ಸುಂದರ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ನಟಿ ಕೊನೆಯದಾಗಿ ಕಾಣಿಸಿಕೊಂಡಿರುವ ಸಿನಿಮಾ 'ಜರಾ ಹಟ್ಕೆ ಜರಾ ಬಚ್ಕೆ' (Zara Hatke Zara Bachke). ಜೂನ್ 2 ರಂದು ಈ ಚಿತ್ರ ಥಿಯೇಟರ್ಗಳಲ್ಲಿ ತೆರೆಕಂಡಿತು. ಸುಮಾರು 40 ಕೋಟಿ ಬಜೆಟ್ನ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಂದು ತಿಂಗಳು ಪ್ರದರ್ಶನ ಕಂಡು 80ಕ್ಕೂ ಹೆಚ್ಚು ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ನಟ ವಿಕ್ಕಿ ಕೌಶಲ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು, ಈ ರೊಮ್ಯಾಂಟಿಕ್, ಕಾಮಿಡಿ, ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿ ಆಗಿದೆ.
ಇದನ್ನೂ ಓದಿ:ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ.. ರಾಷ್ಟ್ರಾದ್ಯಂತ ಭರ್ಜರಿ ಪ್ರಚಾರ - ಪ್ರೇಮದಲೆಯಲ್ಲಿ ಮಿಂದೆದ್ದ ರಣ್ವೀರ್, ಆಲಿಯಾ
ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ರಿಲೀಸ್ಗೂ ಮುನ್ನ ಕೂಡ ಟೆಂಪಲ್ ರನ್ ನಡೆಸಿದ್ದ ಸಾರಾ ಸಿನಿಮಾ ಯಶಸ್ಸು ಕಂಡ ನಂತರವೂ ದೇವಸ್ಥಾನಗಳಿಗೆ ಭೇಟಿ ಕೊಟ್ಟರು. ಖಜ್ರಾನ ಗಣೇಶ ದೇವಸ್ಥಾನ, ಉಜ್ಜಯಿನಿಯ ಕಾಲ ಭೈರವ ಮತ್ತು ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಗಳಿಗೆ ಭೇಟಿ ನೀಡಿದ್ದ ಸಾರಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಅಮರನಾಥ್ ಯಾತ್ರೆ ವಿಡಿಯೋ ಹಂಚಿಕೊಂಡಿದ್ದು, ಸೋಚಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಸರಣಿ ಪ್ರವಾಸ ಪೂರ್ಣಗೊಳಿಸಿ, ಸಿನಿಮಾ ಸೆಟ್ಗೆ ವಾಪಸಾಗಲಿದ್ದಾರೆ. ಏ ವತನ್ ಮೇರೆ ವತನ್, ಮೆಟ್ರೋ ಇನ್ ದಿನೋ ಮತ್ತು ಮರ್ಡರ್ ಮುಬಾರಕ್ ನಟಿ ಸಾರಾ ಅಲಿ ಖಾನ್ ಅವರ ಮುಂಬರುವ ಸಿನಿಮಾಗಳು..
ಇದನ್ನೂ ಓದಿ:Rashmika Mandanna: ವಾಶ್ರೂಮ್ನಲ್ಲಿ ನ್ಯಾಶನಲ್ ಕ್ರಶ್ ಕ್ರಿಯೇಟಿವಿಟಿ!