ಗಂಡ-ಹೆಂಡತಿ ಚಿತ್ರದ ನಾಯಕಿ ಸಂಜನಾ ಗಲ್ರಾನಿ ತಾಯಿಯಾಗಿದ್ದಾರೆ. ಇಂದು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬೇಬಿ ಬಂಪ್ ಫೋಟೋಶೂಟ್ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಅದ್ಧೂರಿ ಸೀಮಂತ ಕಾರ್ಯಕ್ರಮವನ್ನು ಅವರು ಮಾಡಿಕೊಂಡಿದ್ದರು.
ಹಾಗೆಯೇ ರೆಡ್ ಬಣ್ಣದ ಟ್ರೆಂಡಿ ಕಾಸ್ಟೂಮ್ನಲ್ಲಿ ಮತ್ತೆ ಫೋಟೋ ಶೂಟ್ ಮಾಡಿಸಿದ್ದರು. ಈಗ ಸಂಜನಾ ಗಲ್ರಾನಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಸಂಜನಾ ಗಲ್ರಾನಿ ಅಧಿಕೃತವಾಗಿ ಮೊದಲ ಮಗುವಿನ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕಿದೆ.