ಗಂಡ ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ನಟಿ ಸಂಜನಾ ಗಲ್ರಾನಿ. ಕನ್ನಡ ಹಾಗು ತೆಲುಗು ಸಿನಿಮಾಗಳಲ್ಲಿ ನಟಿಸುವ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಕೊಂಡಿದ್ದರು.
ಇಂತಹ ಸಮಯದಲ್ಲಿ ಸಂಜನಾ ಗಲ್ರಾನಿ, ಡ್ರಗ್ಸ್ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡ ಹಿನ್ನೆಲೆ ಸಂಜನಾ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇದೇ ಸಮಯದಲ್ಲಿ ಬಹುದಿನದ ಗೆಳೆಯ, ಅಜೀಜ್ ಪಾಷಾ ಜೊತೆ ಸಂಜನಾ ಗಲ್ರಾನಿ ಮದುವೆ ಮಾಡಿಕೊಂಡಿದ್ದರು. ಈಗ ಸಂಜನಾ ಗಲ್ರಾನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ನಟಿಗೆ ಅದ್ಧೂರಿಯಾಗಿ ಸೀಮಂತ ನಡೆದಿದೆ.
ನಟಿ ಸಂಜನಾ ಕೆಲವು ದಿನಗಳ ಹಿಂದೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದರು. ಈಗ ಸಂಜನಾ ಗಲ್ರಾನಿ ಅದ್ದೂರಿ ಸೀಮಂತ ಕಾರ್ಯಕ್ರಮವನ್ನ ಮಾಡಿಕೊಂಡಿದ್ದಾರೆ. ಇಂದಿರಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಂಜನಾ ಗಲ್ರಾನಿ ಗ್ರ್ಯಾಂಡ್ ಆಗಿ ತಮ್ಮ ಸೀಮಂತವನ್ನ ಮಾಡಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಜನಾ ಪತಿ ಅಜೀಜ್ ಪಾಷ ಮತ್ತು ಆತನ ಕುಟುಂಬ, ಸಂಜನಾ ಗಲ್ರಾನಿ ಕುಟುಂಬ ಹಾಗೂ ಆತ್ಮೀಯ ಗೆಳೆಯರ ಸಮ್ಮುಖದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಕಾರ್ಯ ನೆರವೇರಿತು.