ಕರ್ನಾಟಕ

karnataka

ETV Bharat / entertainment

ಆಮ್​ ಆದ್ಮಿ ಪಕ್ಷಕ್ಕೆ ನಟಿ ಸಂಭಾವನಾ ಸೇಠ್ ಸೇರ್ಪಡೆ

ನಟಿ ಸಂಭಾವನಾ ಸೇಠ್​ ನಿನ್ನೆ ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನಟಿ ಸಂಭಾವನಾ ಸೇಠ್​ ಬಗ್ಗೆ ಇಲ್ಲಿದೆ ಕೊಂಚ ಮಾಹಿತಿ.

Actress Sambhavna Seth joined AAP
ಆಮ್​ ಆದ್ಮಿ ಪಕ್ಷಕ್ಕೆ ನಟಿ ಸಂಭಾವನಾ ಸೇಠ್ ಸೇರ್ಪಡೆ

By

Published : Jan 21, 2023, 1:46 PM IST

ನವದೆಹಲಿ: ಕಿರುತೆರೆ, ಬಾಲಿವುಡ್​ ಮತ್ತು ಭೋಜ್​ಪುರಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವ ನಟಿ ಸಂಭಾವನಾ ಸೇಠ್​ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಂಭಾವನಾ ಸೇಠ್ ಶುಕ್ರವಾರ ( ಜನವರಿ 20 ) ದಂದು ಆಮ್​ ಆದ್ಮಿ ಪಕ್ಷ (ಎಎಪಿ) ಕ್ಕೆ ಸೇರ್ಪಡೆ ಆಗಿದ್ದಾರೆ. ಆಮ್​ ಆದ್ಮಿ ಪಕ್ಷದ ಹಿರಿಯ ಮುಖಂಡ ಸಂಜಯ್ ಸಿಂಗ್​ ಅವರು ಸಂಭಾವನಾ ಸೇಠ್​ ಅವರನ್ನು ನಿನ್ನೆ ಪಕ್ಷಕ್ಕೆ ಬರಮಾಡಿಕೊಂಡರು. ಸಂಭಾವನಾ ಅವರನ್ನು ಸ್ವಾಗತಿಸಿ, ಪಕ್ಷದ ಸದಸ್ಯತ್ವ ಕೊಡಿಸಿದರು.

ಭೋಜ್​ಪುರಿ ಎಟಂ ಸಾಂಗ್ ಡ್ಯಾನ್ಸರ್​:42 ಹರೆಯದ ನಟಿ ಸಂಭಾವನಾ ಸೇಠ್ ಅವರು ಭೋಜ್‌ಪುರಿ ಸಿನಿಮಾ ಇಂಡಸ್ಟ್ರಿಯ ಫೇಮಸ್​ ಐಟಂ ಡ್ಯಾನ್ಸರ್​. 1997 ರಿಂದ ಅಭಿನಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 2002ನೇ ಸಾಲಿನಲ್ಲಿ ಬಿಡುಗಡೆ ಆದ ಪಾಗಲ್​​ಪನ್​ ಸಿನಿಮಾ ಮೂಲಕ ಅವರು ಬಾಲಿವುಡ್​ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಂಭಾವನಾ ಸೇಠ್​ ಅವರು ಈವರೆಗೆ 50ಕ್ಕೂ ಹೆಚ್ಚು ಚಲನ ಚಿತ್ರ ಮತ್ತು ಭೋಜ್​ಪುರಿ ಹಾಡುಗಳಲ್ಲಿ ಕೆಲಸ ಮಾಡಿದ್ದಾರೆ. ಭೋಜ್​ಪುರಿ ಎಟಂ ಸಾಂಗ್ ಕ್ವೀನ್​ ಎಂದೇ ಹೆಸರುವಾಸಿಯಾಗಿದ್ದಾರೆ.

ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಭಾಗಿ: ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ ಬಾಸ್​ ರಿಯಾಲಿಟಿ ಶೋ ಭಾರತದ ಫೇಮಸ್​ ಶೋಗಳಲ್ಲಿ ಒಂದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸೋದುಂಟು. ಈ ಶೋ ಬಳಿಕ ಅವರ ಭವಿಷ್ಯ (ವಿಶೇಷವಾಗಿ ಮನೋರಂಜನಾ ಕ್ಷೇತ್ರ) ಉತ್ತುಂಗಕ್ಕೇರಿರುವ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈ ಅತ್ಯಂತ ಜನಪ್ರಿಯ ರಿಯಾಲಿಟಿ ಶೋನ ಸೀಸನ್​ 8ರಲ್ಲಿ ನಟಿ ಸಂಭಾವನಾ ಸೇಠ್​ ಸ್ಪರ್ಧಿಯಾಗಿ ಎಂಟ್ರಿ ಪಡೆದಿದ್ದರು.

ಇದನ್ನೂ ಓದಿ:ಸೂರರೈ ಪೊಟ್ರು ನಟಿ ಜೊತೆ ಅನುಚಿತ ವರ್ತನೆ.. ಕಾನೂನು ಕಾಲೇಜ್​ನಿಂದ ವಿದ್ಯಾರ್ಥಿ ಅಮಾನತು

ಬಿಗ್​ ಬಾಸ್ ಶೋನಲ್ಲಿ ಅವರ ಆಟ ಹೆಚ್ಚಿನ ಸಂಖ್ಯೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಪ್ರಸ್ತುತ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಸಕ್ರಿಯರಾಗಿದ್ದಾರೆ. ಈ ವೇದಿಕೆಯಲ್ಲಿ ಸಂಭಾವನಾ ತಮ್ಮ ಜೀವನಕ್ಕೆ ಸಂಬಂಧಿಸಿದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಕೆಲವು ತಮಾಷೆಯ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಸನಿಹವಾಗುತ್ತಾರೆ ನಟಿ ಸಂಭಾವನಾ ಸೇಠ್.

ಸಂಭಾವನಾ ಸೇಠ್ ವೈಯಕ್ತಿಕ ಜೀವನ: ನಟಿ ಸಂಭಾವನಾ ಸೇಠ್ ವೈಯಕ್ತಿಕ ಜೀವನ ನೋಡೋದಾದರೆ, ಅವರು 2016ರಲ್ಲಿ ಗೆಳೆಯ ಅವಿನಾಶ್​ ಅವರೊಂದಿಗೆ ಹಸೆಮಣೆ ಏರಿದರು. ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಪತಿ ಅವಿನಾಶ್​ ಕೂಡ ಕಾಣಿಸಿಕೊಂಡಿದ್ದಾರೆ. ತಮ್ಮ ಪ್ರತೀ ನಡೆಯಲ್ಲೂ ಪತಿ ಅವಿನಾಶ್​ ಸಾಥ್ ನೀಡುತ್ತಾರೆ ಎನ್ನುತ್ತಾರೆ ಸಂಭಾವನಾ ಸೇಠ್. ಇನ್ನೂ ತಾಯಿಯಾಗಲು ಅಪೇಕ್ಷಿಸುತ್ತಿರುವ ಸಂಭಾವನಾ ಅವರು ಕೆಲ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಎಪಿ ಬಗ್ಗೆ ಸಂಭಾವನಾ ಸೇಠ್ ಹೇಳಿಕೆ:ನಟಿ ಸಂಭಾವನಾ ಸೇಠ್ ಶುಕ್ರವಾರ ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಸಂಜಯ್ ಸಿಂಗ್​ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಪೋಸ್ಟ್​ನಲ್ಲಿ ಆಮ್​ ಆದ್ಮಿ ಪಕ್ಷ ಕುರಿತು ಬರೆದುಕೊಂಡಿರುವ ಸಂಭಾವನಾ, ನನ್ನ ತಂದೆ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಕನಸು ಹೊಂದಿದ್ದರು. ಅದಕ್ಕೆ ನಾನು ಸೂಕ್ತ ಮಾರ್ಗದ ಹುಡುಕಾಟದಲ್ಲಿದ್ದೆ. ಆ ಮಾರ್ಗ ಎಎಪಿ ರೂಪದಲ್ಲಿ ನನ್ನ ಮುಂದೆ ಬಂದಿದೆ. ಎಎಪಿ ನನಗೆ ಭಾರತೀಯರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದೆ ಎಂದು ಪಕ್ಷಕ್ಕೆ ಮತ್ತು ಪಕ್ಷದ ಮುಖಂಡರಿಗೆ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ:ರಿಲೀಸ್​ಗೂ ಮುನ್ನ ಪಠಾಣ್​ ದಾಖಲೆ: ಒಂದೇ ದಿನದಲ್ಲಿ 15 ಕೋಟಿ ರೂ. ವ್ಯವಹಾರ!

ABOUT THE AUTHOR

...view details