ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಅಭಿನಯದ ಯಶೋದಾ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಪ್ರೇಕ್ಷಕರು ಹಿಂದೆಂದೂ ನೋಡಿರದ, ಹೊಸ ಅವತಾರದಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ.
ಹೌದು, ಪ್ಯಾನ್ ಇಂಡಿಯಾ ಚಿತ್ರವಾದ 'ಯಶೋದಾ'ದಲ್ಲಿ ಸಮಂತಾ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ವೈದ್ಯರು ಯಾವುದನ್ನು ಬೇಡ ಎಂದು ಸಲಹೆ ನೀಡಿರುತ್ತಾರೋ ಅವನ್ನೇ ಮಾಡುತ್ತಿರುವುದನ್ನು ಟೀಸರ್ನಲ್ಲಿ ನೋಡಬಹುದಾಗಿದೆ. ಸೀಟಿನ ಅಂಚಿಗೆ ಕೂರಿಸುವಂತ ರೋಮಾಂಚಕ ಆ್ಯಕ್ಷನ್ ದೃಶ್ಯಗಳಿರುವ ಈ ಟೀಸರ್ನಲ್ಲಿ ಅನಿವಾರ್ಯ ಮತ್ತು ಅತ್ಯಂತ ಅಪಾಯಕಾರಿ ಸಂದರ್ಭಗಳನ್ನು ಸಮಂತಾ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನೋಡಬಹುದು. ಸಮಂತಾ ಈ ಹಿಂದಿನ ಚಿತ್ರಗಳಲ್ಲಿ ನಿರ್ವಹಿಸದಿರುವ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ ಎನ್ನುತ್ತದೆ ಚಿತ್ರಂಡ. ಅದು ಏನು ಮತ್ತು ಯಾಕೆ ಎಂದು ಟೀಸರ್ ಸುಳಿವು ನೀಡಿದೆ.
ಇನ್ನೂ ಚಿತ್ರದಲ್ಲಿ ಉನ್ನಿಮುಕುಂದನ್ ವೈದ್ಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಪ್ರತಿ ದೃಶ್ಯ ಸಹ ಶ್ರೀಮಂತವಾಗಿ ಮೂಡಿಬಂದಿದೆ ಎನ್ನುತ್ತಾರೆ ಚಿತ್ರತಂಡದವರು.