ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿ ಸಮಂತಾ ರುತ್ ಪ್ರಭು ಸಿನಿಮಾಗಳಿಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ಆದ್ರೆ ಸೌತ್ ಸುಂದರಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವ ನಟಿ ಸದ್ಯ ಆರೋಗ್ಯ ಚೇತರಿಕೆಗೆ ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆ ತಾವು ಒಪ್ಪಿಕೊಂಡಿರುವ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸಿದ್ದಾರೆ. ಶನಿವಾರ ಸಮಂತಾ ಅವರು ತಮಿಳುನಾಡಿನ ವೆಲ್ಲೂರಿನ ಶ್ರೀಪುರಂ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ ಕ್ಷಣಗಳನ್ನು ಹಂಚಿಕೊಂಡಿದ್ದರು. ಇಂದು ತಮ್ಮ "ಹ್ಯಾಪಿ ಪ್ಲೇಸ್" ಎಂದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇಶಾ ಯೋಗ ಸೆಂಟರ್ಗೆ ಭೇಟಿ: ನಟಿ ಸಮಂತಾ ರುತ್ ಪ್ರಭು ಇಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಆಧ್ಯಾತ್ಮಿಕ ಪ್ರಯಾಣದ ಫೋಟೋ ಶೇರ್ ಮಾಡಿದ್ದಾರೆ. ತಮಿಳುನಾಡು ರಾಜ್ಯದ ಕೊಯಮತ್ತೂರಿನಲ್ಲಿರುವ ವೆಲ್ಲಿಯಂಗಿರಿಯ ತಪ್ಪಲಿನಲ್ಲಿರುವ ಇಶಾ ಯೋಗ ಸೆಂಟರ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಶನಿವಾರದಂದು ವೆಲ್ಲೂರಿನ ಶ್ರೀಪುರಂ ಗೋಲ್ಡನ್ ಟೆಂಪಲ್ ಫೋಟೋ ಶೇರ್ ಮಾಡಿದ್ದರು.
ಸಮಂತಾ ಹ್ಯಾಪಿ ಪ್ಲೇಸ್: ಶಾಕುಂತಲಾ ಸಿನಿಮಾ ನಟಿ ಸಮಂತಾ ರುತ್ ಪ್ರಭು ಇಶಾ ಫೌಂಡೇಶನ್ನ ಫೋಟೋ ಹಂಚಿಕೊಳ್ಳುತ್ತ, "ಹ್ಯಾಪಿ ಪ್ಲೇಸ್" ಎಂದು ಬರೆದು ವೈಟ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಆಧ್ಯಾತ್ಮಿಕ ಸಂಸ್ಥೆ ಇಶಾ ಯೋಗ ಸೆಂಟರ್ ಅನ್ನು ಟ್ಯಾಗ್ ಮಾಡಿದ್ದಾರೆ. ಸಮಂತಾ ಅವರು ಇಶಾ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರ ಅಭಿಮಾನಿ ಆಗಿದ್ದಾರೆ. ನಟಿ ಆಗಾಗ್ಗೆ ಇಶಾ ಫೌಂಡೇಶನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸದ್ಗುರುಗಳ ಫಿಲಾಸಫಿಕಲ್ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಸಿನಿಮಾಗಳಿಂದ ಬ್ರೇಕ್:36ರ ಹರೆಯದ ನಟಿ ಕಳೆದರೆಡು ವಾರದಿಂದ ಬ್ರೇಕ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅರೋಗ್ಯದೆಡೆಗೆ ಗಮನ ಕೊಡುವ ಸಲುವಾಗಿ ನಟಿ ಒಂದು ವರ್ಷ ಸಿನಿಮಾಗಳಿಂದ ಬ್ರೇಕ್ ಪಡೆಯುವುದಾಗಿ ವರದಿಗಳು ಸೂಚಿಸಿದ್ದವು. ಇತ್ತ ನಟಿ ಮತ್ತು ಅವರ ಹೇರ್ ಸ್ಟೈಲಿಸ್ಟ್ ರೋಹಿತ್ ಭಟ್ಕರ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಸಹ ಪರೋಕ್ಷವಾಗಿ ಅದನ್ನೇ ಹೇಳಿದ್ದವು.