ಕರ್ನಾಟಕ

karnataka

ETV Bharat / entertainment

ಆಸ್ಪತ್ರೆಗೆ ದಾಖಲಾದ ನಟಿ ಸಮಂತಾ; ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳ ಹಾರೈಕೆ - ಈಟಿವಿ ಭಾರತ ಕನ್ನಡ

ನಟಿ ಸಮಂತಾ ರುತ್​ ಪ್ರಭು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾ ಖಾತೆಯಲ್ಲಿ ಡ್ರಿಪ್ಸ್​ ಹಾಕಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.

Samantha Ruth Prabhu
ಸಮಂತಾ ರುತ್​ ಪ್ರಭು

By ETV Bharat Karnataka Team

Published : Oct 12, 2023, 4:48 PM IST

ಸೌತ್​ ಸೂಪರ್​ಸ್ಟಾರ್​ ನಟಿ ಸಮಂತಾ ರುತ್​ ಪ್ರಭು ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸುವ ಸಲುವಾಗಿ, ಸಿನಿಮಾಗಳಿಂದ ಕೊಂಚ ಬ್ರೇಕ್​ ಪಡೆದಿದ್ದಾರೆ. ಚೇತರಿಕೆಯ ನಂತರ ಹೊಸ ಪ್ರಾಜೆಕ್ಟ್​ಗಳತ್ತ ಗಮನ ಹರಿಸಲಿದ್ದಾರೆ. ಸದ್ಯ ಮಯೋಸಿಟಿಸ್​ನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ದೇಶ, ವಿದೇಶ ಸುತ್ತಿ ತಮ್ಮ ರಜಾದಿನಗಳನ್ನು ಎಂಜಾಯ್​ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ಹೈದರಾಬಾದ್​ಗೆ ಮರಳಿರುವುದಾಗಿ ವರದಿಯಾಗಿದೆ.

ನಟಿ ಸಮಂತಾ ರುತ್​ ಪ್ರಭು ಇನ್​ಸ್ಟಾ ಸ್ಟೋರಿ

ಇದೀಗ ಸಮಂತಾ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಫೋಟೋ ವೈರಲ್​ ಆಗಿದೆ. ಅಧಿಕೃತ ಇನ್​ಸ್ಟಾ ಖಾತೆಯಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಯ ಮೇಲೆ ಮಲಗಿ ಡ್ರಿಪ್ಸ್​ ಹಾಕಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. "ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯೋಜನಗಳನ್ನು ಹೊಂದಿದೆ. ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯ ಸುಧಾರಿಸುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಸ್ನಾಯುಗಳ ಕಾರ್ಯವನ್ನು ಉತ್ತಮವಾಗಿಸುತ್ತದೆ. ವೈರಸ್​ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಹೃದಯ ರಕ್ತನಾಳದ ವ್ಯವಸ್ಥೆ ಮತ್ತು ಮೂಳೆಗಳು ಬಲವಾಗಿರುತ್ತದೆ" ಎಂದು ಬರೆದಿದ್ದಾರೆ.

ಸದ್ಯ ಸಮಂತಾ ಅವರ ಪೋಸ್ಟ್​ ವೈರಲ್​ ಆಗಿದೆ. ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ಇದನ್ನೂ ಓದಿ:ಸ್ಟೈಲಿಶ್​ ಲುಕ್​ನಲ್ಲಿ ಸಮಂತಾ ರುತ್​ ಪ್ರಭು: ಹೊಸ ಫೋಟೋಗಳಿಲ್ಲಿವೆ ನೋಡಿ

ಸಮಂತಾ ಮುಂದಿನ ಸಿನಿಮಾಗಳು: ಇತ್ತೀಚೆಗೆ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಜೊತೆ 'ಖುಷಿ' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಸೆಪ್ಟೆಂಬರ್​ 1ರಂದು ಬಿಡುಗಡೆಯಾದ ಚಿತ್ರ ಸೂಪರ್​ ಹಿಟ್​ ಆಗಿತ್ತು. ಸದ್ಯ ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಿಸಲು ಲಭ್ಯವಿದೆ. ಇನ್ನೂ ರಾಜ್​ ಮತ್ತು ಡಿಜೆ ನಿರ್ದೇಶನದ 'ಸಿಟಾಡೆಲ್​'ನ ಭಾರತೀಯ ಆವೃತ್ತಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇದನ್ನು ಜನಪ್ರಿಯ ಓಟಿಟಿ ಫ್ಲಾಟ್​ಫಾರ್ಮ್​ ಅಮೆಜಾನ್​ ಪ್ರೈಮ್​ ನಿರ್ಮಿಸಿದೆ. ಈ ಸಿನಿಮಾದ ಕೆಲಸಗಳನ್ನು ಈಗಾಗಲೇ ಸಮಂತಾ ಮುಕ್ತಾಯಗೊಳಿಸಿದ್ದಾರೆ.

ಸಲ್ಮಾನ್​ ಖಾನ್​ ಜೊತೆ ಸ್ಕ್ರೀನ್​ ಶೇರ್​?: ಇತ್ತೀಚೆಗಿನ ಮಾಹಿತಿ ಪ್ರಕಾರ, ನಟಿ ಸಮಂತಾ ರುತ್​ ಪ್ರಭು ಅವರು ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್​ ಜೋಹರ್​​ ಅವರ ಮುಂದಿನ ಸಿನಿಮಾ ಇದಾಗಿರಲಿದೆ. ಸೋಷಿಯಲ್​ ಮೀಡಿಯಾಗಳಲ್ಲಿ ಈ ಸುದ್ದಿ ಸದ್ದು ಮಾಡುತ್ತಿದ್ದು, ಅಧಿಕೃತ ಘೋಷಣೆಗೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.

ಈ ಸಿನಿಮಾ ಸಂಬಂಧ ಚರ್ಚೆಗಾಗಿ ನಟಿ ಸಮಂತಾ ಇತ್ತೀಚೆಗೆ ಮುಂಬೈಗೆ ಬಂದಿದ್ದರು. ಚಿತ್ರಕ್ಕಾಗಿ ಸಮಂತಾ ಅವರೊಂದಿಗೆ ಚರ್ಚೆ ನಡೆದಿದೆ ಎಂದು ವರದಿಗಳು ಹೇಳಿವೆ. ಮತ್ತೊಂದೆಡೆ ಪೊನ್ನಿಯಿನ್​ ಸೆಲ್ವನ್​ ನಟಿ ತ್ರಿಶಾ ಕೃಷ್ಣನ್​​ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸುದ್ದಿ ನಿಜವಾದರೆ, ಸಲ್ಮಾನ್​ ಮತ್ತು ಸಮಂತಾರನ್ನು ಬೆಳ್ಳಿ ಪರದೆ ಮೇಲೆ ಜೊತೆಯಾಗಿ ವೀಕ್ಷಿಸುವ ಸೌಭಾಗ್ಯ ಅವರ ಅಭಿಮಾನಿಗಳಿಗೆ ಸಿಗಲಿದೆ.

ಇದನ್ನೂ ಓದಿ:ಕರಣ್​ ಜೋಹರ್​ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್​ - ಸಮಂತಾ?!

ABOUT THE AUTHOR

...view details