ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ ಸಮಂತಾ ರುತ್ ಪ್ರಭು ಕೆಲ ಸಮಯದ ಹಿಂದೆ ಹೇಳಿಕೊಂಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ ತನ್ನ ಅನಾರೋಗ್ಯದ ಬಗ್ಗೆ ಮಾತನಾಡಿದ್ದ ಅವರು, ಕೆಲ ತಿಂಗಳುಗಳಿಂದ "ಮಯೋಸಿಟಿಸ್" ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ವೈದ್ಯರು ನಾನು ಆದಷ್ಟು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಬಹುಬೇಡಿಕೆ ನಟಿ ಮನವಿ ಮಾಡಿಕೊಂಡಿದ್ದರು. ನಟಿಯ ಅನಾರೋಗ್ಯ ವಿಚಾರ ದೊಡ್ಡ ಸುದ್ದಿಯಾಗಿತ್ತು. ಕೆಲ ದಿನಗಳಿಂದ ಕಡಿಮೆ ಸುದ್ದಿಯಲ್ಲಿರುವ ಅವರು ತಮ್ಮ ಅಭಿಮಾನಿಗಳೊಂದಿಗೆ ಸಕ್ರಿಯವಾಗಿ ಸಂವಹನ ನಡೆಸಲು ಟ್ವಿಟರ್‌ಗೆ ಮರಳಿದ್ದಾರೆ.
ಸೋಮವಾರದಂದು ನಟಿ ಸಮಂತಾ ಈ ಮೈಕ್ರೋ - ಬ್ಲಾಗಿಂಗ್ ಸೈಟ್‌ನಲ್ಲಿ ಅಭಿಮಾನಿಗಳ ಹಲವಾರು ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದರು. ಟ್ರೋಲ್‌ಗಳಿಗೂ ಉತ್ತರಿಸಿದ್ದಾರೆ. ''ಮಹಿಳೆಯರು ಬೀಳಲು ಮಾತ್ರ ಮೇಲೇರುತ್ತಾರೆ'' ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದು, ಸಮಂತಾ ತಕ್ಕ ಉತ್ತರವನ್ನು ನೀಡಿದ್ದಾರೆ.
"ಕ್ರೋಮ್‌ಪೇಟ್‌ನಲ್ಲಿರುವ ವೆಟ್ರಿ ಥಿಯೇಟರ್‌ನಿಂದ ಹಾದು ಹೋಗುವಾಗ, ನನ್ನ ಸಹೋದರಿ ಮತ್ತು ನಾನು ಮಹಿಳಾ ನಾಯಕಿಯ ಎಲ್ಲ ಚಲನಚಿತ್ರಗಳ ಪೋಸ್ಟರ್‌ಗಳನ್ನು ಕಂಡೆವು. ತಮಿಳು ಚಿತ್ರರಂಗ ಎಷ್ಟು ದೂರ ಬಂದಿದೆ! 10 ವರ್ಷಗಳ ಹಿಂದೆ ಇದು ಊಹಿಸಲೂ ಅಸಾಧ್ಯವಾಗಿತ್ತು" ಎಂದು ನೆಟಿಜನ್ ಟ್ವೀಟ್ ಮಾಡಿದ್ದಾರೆ.
ನಟಿ ನಯನತಾರಾ ಅಭಿನಯದ ಕನೆಕ್ಟ್ ಚಿತ್ರ, ಐಶ್ವರ್ಯಾ ರಾಜೇಶ್ ಅಭಿನಯದ ಡ್ರೈವರ್ ಜಮುನಾ ಮತ್ತು ತ್ರಿಶಾ ಅಭಿನಯದ ರಾಂಗಿ ಸೇರಿದಂತೆ ಮಹಿಳಾ ನಟಿಯರಿರುವ ಬೃಹತ್ ಪೋಸ್ಟರ್‌ಗಳನ್ನು ವೆಟ್ರಿ ಸಿನಿಮಾ ಹಾಲ್‌ನ ಎದುರು ಅಂಟಿಸಿರುವ ಚಿತ್ರವನ್ನು ಟ್ವೀಟ್ ಮೂಲಕ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದಕ್ಕೆ ಸಮಂತಾ ಹೃದಯ - ಕೈಗಳ ಇಮೋಜಿಗಳೊಂದಿಗೆ ಪ್ರತಿಕ್ರಿಯಿಸಿದರು ಮತ್ತು "ಮಹಿಳೆಯರು ರೈಸಿಂಗ್" ಎಂದು ಬರೆದಿದ್ದಾರೆ.
ಇದನ್ನೂ ಓದಿ:ನಟಿ ಸಮಂತಾ ಅಭಿನಯದ ಶಾಕುಂತಲಂ ಫೆಬ್ರವರಿಯಲ್ಲಿ ಬಿಡುಗಡೆ
ಮತ್ತೊಬ್ಬ ಬಳಕೆದಾರರು ಈ ಟ್ವೀಟ್‌ಗೆ "ಜಸ್ಟ್ ಟು ಫಾಲ್" ಎಂದು ಪ್ರತಿಕ್ರಿಯಿಸಿದಾಗ, ಸಮಂತಾ ಅವರು "ಹಿಂತಿರುಗಿ ಬರುವುದು ಎಲ್ಲವನ್ನೂ ಇನ್ನಷ್ಟೂ ಸಿಹಿಯಾಗಿಸುತ್ತದೆ" ಎಂದು ಉತ್ತರಿಸಿದರು.
ಮತ್ತೊಬ್ಬ ನೆಟಿಜನ್ ತನ್ನ ಟ್ವಿಟರ್ ಫೀಡ್‌ನಲ್ಲಿ "ನಾನು ಯಾವಾಗಲೂ ನಿಮ್ಮ ನಿಷ್ಠಾವಂತ ಅಭಿಮಾನಿ, ನಿಮ್ಮ ರಕ್ಷಕ, ನಿಮ್ಮ ಆಪ್ತಮಿತ್ರನಾಗಿರುತ್ತೇನೆ. ನಾನು ನಿನ್ನನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ. ನಿಮ್ಮ ಮೇಲಿನ ನನ್ನ ಪ್ರೀತಿ ಎಂದಿಗೂ ಇರುತ್ತದೆ ಸಮಂತಾ ಮೇಡಮ್" ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಯಾವಾಗಲೂ ನನ್ನ ಬೆನ್ನೆಲುಬಾಗಿರುವುದಕ್ಕೆ ಧನ್ಯವಾದಗಳು, ನನಗೆ ಇನ್ನೂ ಶಕ್ತಿ ಇರುವುದು ನಿಮ್ಮೆಲ್ಲರ ಪ್ರಾರ್ಥನೆಗಳಿಂದಾಗಿ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ವೀರ ಕಂಬಳ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆ
ಕೆಲಸದ ವಿಚಾರ ನೋಡುವುದಾದರೆ, ಸಮಂತಾ ಶಾಕುಂತಲಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಫೆಬ್ರವರಿ 17ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕಾಳಿದಾಸರ ಸಂಸ್ಕೃತ ನಾಟಕ ಅಭಿಜ್ಞಾನ ಶಾಕುಂತಲಂ ಆಧರಿಸಿ, ಪ್ರಶಸ್ತಿ ವಿಜೇತ ನಿರ್ದೇಶಕ ಗುಣಶೇಖರ್ (ರುದ್ರಮಾದೇವಿ) ಚಿತ್ರ ಬರೆದು ನಿರ್ದೇಶಿಸಿದ್ದಾರೆ. ' ಶಾಕುಂತಲಂ' ಶಾಕುಂತಲಾ ಮತ್ತು ದುಶ್ಯಂತ್ ಅವರ ಮಹಾಕಾವ್ಯದ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಸಮಂತಾ ಮತ್ತು ದೇವ್ ಮೋಹನ್ ನಟಿಸಿದ್ದಾರೆ. ಸಮಂತಾ ಮತ್ತು ದೇವ ಮೋಹನ್ ಜೊತೆಗೆ ಮೋಹನ್ ಬಾಬು, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾಗಲ್ಲ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಈ ಚಿತ್ರ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.
ಸಮಂತಾ ಅವರ 'ಯಶೋದಾ' ಸಿನಿಮಾ ಕಳೆದ ವರ್ಷ ನವೆಂಬರ್ 11 ರಂದು ಬಿಡುಗಡೆಯಾಗಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಚಿತ್ರದಲ್ಲಿ ಸಮಂತಾ ಗರ್ಭಿಣಿಯಾಗಿ ಫುಲ್ ಆ್ಯಕ್ಷನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರವು ಮಹಿಳೆಯ ಶಕ್ತಿ ಸುತ್ತ ಸುತ್ತುತ್ತದೆ. ಅವಳು ಹೇಗೆ ಹೋರಾಡುತ್ತಾಳೆ ಎಂಬುದನ್ನೂ ಚಿತ್ರದಲ್ಲಿ ಸುಂದರವಾಗಿ ತೋರಿಸಲಾಗಿದೆ.