ಕರ್ನಾಟಕ

karnataka

ETV Bharat / entertainment

'ಅಹಂ, ಭಯ ನಮ್ಮನ್ನು ಬೇರ್ಪಡಿಸುತ್ತವೆ': ಮಾಜಿ ಪತಿಯ ಮೆಚ್ಚುಗೆಗೆ ಸಮಂತಾ ಪರೋಕ್ಷ ಪ್ರತಿಕ್ರಿಯೆ - ವೆಂಕಟ್ ಪ್ರಭು ನಿರ್ದೇಶನ

ಮಾಜಿ ಪತಿ ನಾಗ ಚೈತನ್ಯ ಅವರ ಹೊಗಳಿಕೆಗೆ ನಟಿ ಸಮಂತಾ ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

Actress Samantha
ನಾಗ ಚೈತನ್ಯ ಮತ್ತು ಸಮಂತಾ

By

Published : May 7, 2023, 8:36 AM IST

ಟಾಲಿವುಡ್​ ಸೂಪರ್‌ಸ್ಟಾರ್​ ನಾಗ ಚೈತನ್ಯ ಮತ್ತು ಲೇಡಿ ಕ್ವೀನ್​ ಸಮಂತಾ ಪರಸ್ಪರ ವಿಚ್ಛೇದನ ಪಡೆದ ನಂತರ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಮೊದಲ ಬಾರಿಗೆ ಸಮಂತಾ ಬಗ್ಗೆ ಉತ್ತಮ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, ಕುತೂಹಲ ಮೂಡಿಸಿತ್ತು. "ಸಮಂತಾ ಹೃದಯವಂತಳು, ಜೀವನದಲ್ಲಿ ಸದಾ ಸುಖವಾಗಿರಲು ಬಯಸುತ್ತಾಳೆ" ಎಂದು ಅವರು ಹೇಳಿದ್ದರು. ಈ ಕಾಮೆಂಟ್​ಗಳಿಗೆ ಸ್ಯಾಮ್​ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಮಂತಾ ಇನ್​ಸ್ಟಾ ಸ್ಟೋರಿ

"ನಾವೆಲ್ಲರೂ ಒಂದೇ. ಕೆಲವೊಮ್ಮೆ ಅಹಂಕಾರ, ನಂಬಿಕೆ ಮತ್ತು ಭಯ ನಮ್ಮನ್ನು ಬೇರ್ಪಡಿಸುತ್ತವೆ." ಎಂದಿದ್ದಾರೆ. ಇದು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡ್​ ಆಗಿದೆ. ಈ ಪೋಸ್ಟ್​ಗೆ ಸ್ಯಾಮ್​ ಅಭಿಮಾನಿಗಳ ಜೊತೆ ಚೈತು ಫ್ಯಾನ್ಸ್​ ಕೂಡ ಕಾಮೆಂಟ್​ ಮಾಡುತ್ತಿದ್ದಾರೆ. "ನೀವು ಈ ಪೋಸ್ಟ್ ಅನ್ನು ನೋಡಿದರೆ, ಬಹುಶಃ ಸ್ಯಾಮ್ ತಮ್ಮ ಪ್ರತ್ಯೇಕತೆಯ ಕಾರಣವನ್ನು ಈ ಉಲ್ಲೇಖದ ಮೂಲಕ ಬಹಿರಂಗಪಡಿಸಿದ್ದಾರೆ" ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಸ್ಯಾಮ್​ ಕೊಂಡಾಡಿದ ಚೈತು: ನಾಗ ಚೈತನ್ಯ ಮತ್ತು ಕೃತಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವೆಂಕಟ್ ಪ್ರಭು ನಿರ್ದೇಶನದ 'ಕಸ್ಟಡಿ' ಚಿತ್ರವು ಮೇ 12 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದೆ. ಇದರ ಅಂಗವಾಗಿ ನಡೆದ ಸಂದರ್ಶನದಲ್ಲಿ ಸಮಂತಾ ಬಗ್ಗೆ ನಾಗ ಚೈತನ್ಯ ಇಂಟ್ರೆಸ್ಟಿಂಗ್ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ:13 ವರ್ಷಗಳ ನಂತರ ಐಟಿ ಉದ್ಯೋಗಿಯಾದ ಸಮಂತಾ: 'ಖುಷಿ' ಪೋಸ್ಟರ್​ ರಿಲೀಸ್​ ​

"ನಾವು ಎರಡು ವರ್ಷಗಳಿಂದ ಬೇರ್ಪಟ್ಟಿದ್ದೇವೆ, ಕಾನೂನುಬದ್ಧವಾಗಿ ವಿಚ್ಛೇದನ ಪಡೆದು ಒಂದು ವರ್ಷವಾಗಿದೆ. ಇದೀಗ ನಾವು ನಮ್ಮ ಜೀವನದಲ್ಲಿ ಮುನ್ನಡೆಯುತ್ತಿದ್ದೇವೆ. ನಾನು ಜೀವನದ ಪ್ರತಿಯೊಂದು ಹಂತವನ್ನೂ ಗೌರವಿಸುತ್ತೇನೆ. ಸಮಂತಾ ಒಳ್ಳೆಯ ವ್ಯಕ್ತಿ. ಅವಳು ಯಾವಾಗಲೂ ಸಂತೋಷವಾಗಿರಬೇಕು. ಸೋಷಿಯಲ್ ಮೀಡಿಯಾದಲ್ಲಿ ನಮ್ಮಿಬ್ಬರ ಬಗೆಗಿನ ವದಂತಿಗಳು ಹರಡಿವೆ. ಒಬ್ಬರಿಗೊಬ್ಬರು ಗೌರವ ಇಲ್ಲ ಎಂಬ ಸುಳ್ಳು ಜನರ ಬಳಿ ಹೋಗಿದೆ. ಇದು ನನಗೆ ತುಂಬಾ ನೋವುಂಟು ಮಾಡಿದೆ" ಎಂದು ನಾಗಚೈತನ್ಯ ಹೇಳಿದ್ದರು.

'ಏ ಮಾಯ ಚೇಸಾವೆ' ಸಿನಿಮಾದಲ್ಲಿ ಮೊದಲ ಬಾರಿಗೆ ನಾಗಚೈತನ್ಯ ಹಾಗೂ ಸಮಂತಾ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ 'ಆಟೋ ನಗರ’, ‘ಮನಂ’, ‘ಮಜಿಲಿ’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಬಹುದಿನಗಳಿಂದ ಆತ್ಮೀಯರಾಗಿದ್ದ ಈ ಜೋಡಿ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ 2021 ರಲ್ಲಿ ಬೇರ್ಪಡುವುದಾಗಿ ಘೋಷಿಸಿದ್ದ ಚೈತು, ಸ್ಯಾಮ್ ಕಳೆದ ವರ್ಷ ವಿಚ್ಛೇದನ ಪಡೆದರು. ವಿಚ್ಛೇದನಕ್ಕೂ ಮುನ್ನ ಸಮಂತಾ ನಾಯಕಿಯಾಗಿ ನಟಿಸಿದ್ದ ‘ಓ ಬೇಬಿ’ ಚಿತ್ರದಲ್ಲಿ ನಾಗಚೈತನ್ಯ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ:'ಜೀವನದಲ್ಲಿ ಯಾವುದರ ಬಗ್ಗೆಯೂ ವಿಷಾದವಿಲ್ಲ, ಎಲ್ಲವೂ ಪಾಠವಷ್ಟೇ': ನಟ ನಾಗ ಚೈತನ್ಯ ಹೀಗಂದಿದ್ಯಾಕೆ?

ABOUT THE AUTHOR

...view details