ಕರ್ನಾಟಕ

karnataka

ETV Bharat / entertainment

ಹೈದರಾಬಾದ್​ನಲ್ಲಿ ಡ್ಯುಪ್ಲೆಕ್ಸ್ ಮನೆ ಖರೀದಿಸಿದ ಸಮಂತಾ: ಬೆಲೆ ಕೇಳಿದ್ರೆ ದಂಗಾಗ್ತೀರಾ! - ಈಟಿವಿ ಭಾರತ ಕನ್ನಡ

ನಟಿ ಸಮಂತಾ ರುತ್​ ಪ್ರಭು ಇದೀಗ ಹೈದರಾಬಾದ್​ನಲ್ಲಿ ದೊಡ್ಡ ಡ್ಯುಪ್ಲೆಕ್ಸ್ ಮನೆ ಖರೀದಿಸಿದ್ದಾರೆ.

Samantha
ಸಮಂತಾ

By

Published : May 9, 2023, 2:07 PM IST

ಸೌತ್​ ಸೂಪರ್​ ಸ್ಟಾರ್​ ನಟಿ ಸಮಂತಾ ರುತ್​ ಪ್ರಭು ಸೋಶಿಯಲ್​ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅದು ವೈಯಕ್ತಿಕ ಅಥವಾ ಸಿನಿಮಾ ವಿಚಾರವಾಗಿಯೂ ಆಗಿರಬಹುದು. ಇತ್ತೀಚೆಗಷ್ಟೇ ಅವರು ಐಷಾರಾಮಿ ಮನೆಯನ್ನು​ ಖರೀದಿಸಿದ್ದಾರಂತೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಮುಂಬೈನಲ್ಲಿ ಕೆಲ ದಿನಗಳ ಹಿಂದೆ ಐಷಾರಾಮಿ ಅಪಾರ್ಟ್​ಮೆಂಟ್​ ಖರೀದಿಸಿದ ಬೆನ್ನಲ್ಲೇ ಇದೀಗ ಹೈದರಾಬಾದ್​ನಲ್ಲೂ ದೊಡ್ಡ ಡ್ಯುಪ್ಲೆಕ್ಸ್ ಮನೆ ಖರೀದಿಸಿದ್ದಾರೆ. ಸಮಂತಾ ಅವರ ಹೊಸ ಮನೆ ಆರೆಂಜ್​ ಕೌಂಟಿಯಲ್ಲಿದೆ. ಈ ಡ್ಯುಪ್ಲೆಕ್ಸ್ ಮನೆಯನ್ನು ಸುಮಾರು 7.8 ಕೋಟಿ ರೂಪಾಯಿಗೆ ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಮಂತಾ ಸರಣಿ ಚಿತ್ರಗಳಲ್ಲಿ ನಟಿಸುತ್ತಾ ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ಈ ನಡುವೆ ಮಯೋಸಿಟಿಸ್ ಕಾಯಿಲೆಗೆ ತುತ್ತಾಗಿದ್ದರು. ಸದ್ಯ ಚೇತರಿಸಿಕೊಂಡು ಸಿನಿಮಾ ಶೂಟಿಂಗ್​ಗಳಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ ನಾಗ ಚೈತನ್ಯ ಜೊತೆಗಿನ ವಿಚ್ಛೇದನ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಆ ಬಗ್ಗೆಯೂ ಟೀಕೆಗಳನ್ನು ಎದುರಿಸುತ್ತಾ, ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸೋಶಿಯಲ್​ ಮೀಡಿಯಾದಲ್ಲೂ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ.​

'ಸಿಟಾಡೆಲ್​'ನಲ್ಲಿ ಸ್ಯಾಮ್​ ಬ್ಯುಸಿ: ಸಿಟಾಡೆಲ್​ ಇಂಟರ್​ನ್ಯಾಷನಲ್​​ ವೆಬ್​ ಸೀರೀಸ್ ಆಗಿದೆ. ಇಂಗ್ಲಿಷ್​ ಆವೃತ್ತಿಯಲ್ಲಿ (ಹಾಲಿವುಡ್​) ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಭಾರತೀಯ ಆವೃತ್ತಿಯಲ್ಲಿ ಸಮಂತಾ ಅವರು ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿರುವ ಈ ಸರಣಿಯು ಈಗಾಗಲೇ ಏಪ್ರಿಲ್​ 28 ರಂದು ಅಮೆಜಾನ್​ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿದೆ.

ಇದನ್ನೂ ಓದಿ:ಬಂಗಾಳದಲ್ಲಿ ಬ್ಯಾನ್, ಯುಪಿಯಲ್ಲಿ ರತ್ನಗಂಬಳಿ: 4 ದಿನಕ್ಕೆ ₹45 ಕೋಟಿ ಬಾಚಿದ 'ದಿ ಕೇರಳ ಸ್ಟೋರಿ'

ಇದರಲ್ಲಿ ಸಾಕಷ್ಟು ಬೋಲ್ಡ್​ ಕಂಟೆಂಟ್​ ದೃಶ್ಯಗಳೂ ಇದ್ದು, ಈ ಇಂಟಿಮೇಟ್​ ದೃಶ್ಯಗಳಲ್ಲಿ ಅಭಿನಯಿಸಲು ಸಾಕಷ್ಟು ತೊಂದರೆ ಅನುಭವಿಸಿದ್ದೆ ಎಂದು ಪ್ರಿಯಾಂಕಾ ಚೋಪ್ರಾ ಈ ಹಿಂದೆ ಹೇಳಿದ್ದರು. ಹೀಗಾಗಿ ಭಾರತೀಯ ಆವೃತ್ತಿಯ ಸರಣಿಯಲ್ಲೂ ವರುಣ್​ ಧವನ್​ ಮತ್ತು ಸಮಂತಾ ನಡುವೆ ಇಂತಹ ಬೋಲ್ಡ್​ ದೃಶ್ಯಗಳು ಇರಲಿವೆಯಂತೆ. ಆದರೆ ಭಾರತೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಡೋಸ್​ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿಟಾಡೆಲ್​ ವೆಬ್​ ಸೀರೀಸ್​ ಅನ್ನು 'ದಿ ಫ್ಯಾಮಿಲಿ ಮ್ಯಾನ್'​ ಖ್ಯಾತಿಯ ರಾಜ್​ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ ಸಮಂತಾ 'ಖುಷಿ' ಸಿನಿಮಾ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ವಿಜಯ್​ ದೇವರಕೊಂಡಗೆ ನಾಯಕಿಯಾಗಿ ಸ್ಯಾಮ್​ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ಐಟಿ ಉದ್ಯೋಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಸಿನಿಮಾದ 'ನನ್ನ ರೋಜಾ ನೀನೇ' ಎಂಬ ಮೆಲೋಡಿ ಟ್ರ್ಯಾಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಲಯಾಳಂ ನಟ ಜಯರಾಮ್​, ಮರಾಠಿ ನಟ ಸಚಿನ್​ ಖಡೇಕರ್​ ಮುಂತಾದವರು ನಟಿಸುತ್ತಿದ್ದಾರೆ.

ಸೆಪ್ಟೆಂಬರ್​ 1 ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಬ್ಯಾನರ್​ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಮಜಿಲಿ ಹಿಟ್​ ನಿರ್ದೇಶಕ ಶಿವ ನರ್ವಣ ನಿರ್ದೇಶಿಸುತ್ತಿದ್ದಾರೆ. ನವೀನ್​ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುನ್ನ ಸಮಂತಾ 'ಶಾಕುಂತಲಂ' ಚಿತ್ರದಲ್ಲಿ ನಟಿಸಿದ್ದರು. ಇದು ನಿರೀಕ್ಷಿತ ಮಟ್ಟದಲ್ಲಿ ಹಿಟ್​ ಆಗಿಲ್ಲ.

ಇದನ್ನೂ ಓದಿ:ನಾಗ ಚೈತನ್ಯ ಜೊತೆ ಡೇಟಿಂಗ್​ ವದಂತಿ: ಶೋಭಿತಾ ಧೂಳಿಪಾಲ ಹೇಳಿದ್ದೇನು?

ABOUT THE AUTHOR

...view details