ಕರ್ನಾಟಕ

karnataka

ETV Bharat / entertainment

'ನನ್ನ ಹಿಂದಿನ ಸಂಬಂಧಗಳು​ ತೆರೆದ ಪುಸ್ತಕ​, ಇಂದಲ್ಲ ನಾಳೆ...': ರವೀನಾ ಟಂಡನ್​ - Raveena Tandon dating

ಕೆಜಿಎಫ್​ ನಟಿ ರವೀನಾ ಟಂಡನ್​ ತಮ್ಮ ಹಿಂದಿನ ಸಂಬಂಧಗಳ ಸತ್ಯಾಸತ್ಯತೆಯನ್ನು ತಮ್ಮ ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ.

actress Raveena Tandon
ನಟಿ ರವೀನಾ ಟಂಡನ್​

By ETV Bharat Karnataka Team

Published : Oct 1, 2023, 5:44 PM IST

90ರ ದಶಕದ ಬಾಲಿವುಡ್​ ಬಹುಬೇಡಿಕೆಯ ನಟಿ ರವೀನಾ ಟಂಡನ್​ ಇಂದಿಗೂ ಸಿನಿಮಾಗಳಲ್ಲಿ ಸಕ್ರಿಯರು. ಯುವತಿಯರೂ ನಾಚುವಂತಹ ಚೆಲುವನ್ನು ಕಾಪಾಡುವುದರ ಮೂಲಕವೂ ಸುದ್ದಿಯಲ್ಲಿದ್ದಾರೆ. ನಟಿಯ ಹಿಂದಿನ ರಿಲೇಶನ್​ಶಿಪ್​ಗಳು ಇಂದಿಗೂ ಚರ್ಚೆಯ ವಿಷಯವಾಗುತ್ತಿವೆ. ಇದೀಗ ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಅನಿಲ್ ಥಡಾನಿ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿರುವ ಈ ಚೆಲುವೆ, ತಮ್ಮ ಹಿಂದಿನ ಸಂಬಂಧಗಳನ್ನು ತಮ್ಮ ಮಕ್ಕಳಿಂದ ರಹಸ್ಯವಾಗಿಟ್ಟಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ವಿವಾಹಕ್ಕೂ ಮೊದಲೇ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದ ಹಿನ್ನೆಲೆಯಲ್ಲಿ ವೈಯಕ್ತಿಕ ಜೀವನವು ಈಗಾಗಲೇ ಸಾರ್ವಜನಿಕರ ಚರ್ಚೆಯ ವಿಷಯವಾಗಿಬಿಟ್ಟಿದೆ ಎಂಬುದನ್ನು ಕೆಜಿಎಫ್​ ತಾರೆ ಒಪ್ಪಿಕೊಂಡಿದ್ದಾರೆ.

ರವೀನಾ ಟಂಡನ್​​ ಮಾತನಾಡುತ್ತಾ, ನನ್ನ ಹೆಣ್ಣುಮಕ್ಕಳಿಗೆ ನನ್ನ ಹಿಂದಿನ ರಿಲೇಶನ್​ಶಿಪ್​ ಓಪನ್​ ಬುಕ್ ಆಗಿಬಿಟ್ಟಿದೆ. ಕೆಲವು ಮಾಧ್ಯಮಗಳಲ್ಲಿ ಬರುವ ಉತ್ಪ್ರೇಕ್ಷಿತ ಸುದ್ದಿಗಳು ಅಥವಾ ತಪ್ಪುದಾರಿಗೆಳೆಯುವ ವಿಷಯಗಳನ್ನು ಮಕ್ಕಳು ಮುಂದಿನ ದಿನಗಳಲ್ಲಿ ಎದುರಿಸುವುದಕ್ಕಿಂತ, ನನ್ನಿಂದಲೇ ಅವರಿಗೆ ಸತ್ಯದ ಅರಿವಾಗುವುದು ಉತ್ತಮ ಎಂದು ನಟಿ ನಂಬಿದ್ದಾರೆ. 90ರ ದಶಕದ ಮಾಧ್ಯಮ ವಾತಾವರಣದ ಬಗ್ಗೆ ರವೀನಾ ಇದೀಗ ಮಾತನಾಡಿದ್ದಾರೆ. ಸೆಲೆಬ್ರಿಟಿಗಳು ತಮ್ಮ ನಿರೂಪಣೆಗಳ, ನಡೆನುಡಿಗಳ ಮೇಲೆ ನಿಯಂತ್ರಣ ಹೊಂದಿದ್ದರು. ಏಕೆಂದರೆ ಅವರು ಪತ್ರಕರ್ತರ ವಿಷಯವಾಗಿದ್ದರು. ಸತ್ಯಕ್ಕಿಂತ ಹೆಚ್ಚಾಗಿ ಸೆನ್ಸೇಶನಲಿಸಮ್​ಗೆ ಹೆಚ್ಚು ಆದ್ಯತೆ ನೀಡುತ್ತಿದ್ದರು ಎಂದು ನಟಿ ತಿಳಿಸಿದರು.

"ಇದು ಅವರಿಗೆ (ಮಕ್ಕಳಿಗೆ) ತೆರೆದ ಪುಸ್ತಕವಿದ್ದಂತೆ. ಇಂದಲ್ಲ ನಾಳೆ ಅವರು ಓದುತ್ತಾರೆ. 90ರ ದಶಕದ ಪತ್ರಿಕಾ ಮಾಧ್ಯಮ ಹೇಗಿತ್ತು ಎಂಬುದು ನಿಮಗೆ ತಿಳಿದಿದೆ. ಕೆಲವು ಸಂಸ್ಥೆಗಳು ಯಾವುದೇ ರೀತಿಯ ಸೂಕ್ಷ್ಮತೆ, ನೈತಿಕತೆ, ಸಮಗ್ರತೆಯಂತಹ ಗುಣಗಳನ್ನು ಹೊಂದಿರಲಿಲ್ಲ" - ರವೀನಾ ಟಂಡನ್.

ಇದನ್ನೂ ಓದಿ:ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ - ಸ್ಯಾಂಡಲ್​ವುಡ್​ ಸ್ಟಾರ್ ಪೊಲೀಸ್​ ವಶಕ್ಕೆ

ಹಿಂದಿನ ದಿನಗಳಲ್ಲಿ ಪ್ರಕಟವಾದ ಕೆಲವು ಲೇಖನಗಳನ್ನು ನೆನಪಿಸಿಕೊಂಡ ಅವರು, ಮಕ್ಕಳಿಗೆ ಯಾವುದೇ ರೀತಿಯಲ್ಲಿ ತಪ್ಪು ಗ್ರಹಿಕೆಯಾಗಬಾರದೆಂಬ ನಿಟ್ಟಿನಲ್ಲಿ ತಮ್ಮ ಹಿಂದಿನ ಸಂಬಂಧಗಳನ್ನು ರಹಸ್ಯವಾಗಿಟ್ಟಿಲ್ಲ ಎಂಬ ವಿಚಾರವನ್ನು ಸಂದರ್ಶನದಲ್ಲಿ ಬಹಿರಂಗಪಡಿಸಿದರು.

ಇದನ್ನೂ ಓದಿ:ಕಾಂಗ್ರೆಸ್​ ಕಚೇರಿ ಎದುರು ನಟಿ ಅರ್ಚನಾ ಗೌತಮ್ ಮೇಲೆ ಹಲ್ಲೆ ಆರೋಪ - ವಿಡಿಯೋ ವೈರಲ್

ABOUT THE AUTHOR

...view details