ನರ್ಮದಾಪುರಂ: ಬಾಲಿವುಡ್ ನಟಿ ರವೀನಾ ಟಂಡನ್ ಕೆಲವು ದಿನಗಳಿಂದ ವಿವಾದದ ಸುಳಿಗೆ ಸಿಲುಕಿದ್ದಾರೆ. ಚಿತ್ರವೊಂದರ ಶೂಟಿಂಗ್‌ಗಾಗಿ ಇತ್ತೀಚೆಗೆ ಮಧ್ಯಪ್ರದೇಶಕ್ಕೆ ಬಂದಿದ್ದರು. ಬಿಡುವಿನ ವೇಳೆ ಅರಣ್ಯ ವಿಹಾರಕ್ಕೆ ತೆರಳಿದ್ದಾಗ ಕೆಲ ಪ್ರವಾಸಿಗರು ಹುಲಿ ಮೇಲೆ ಕಲ್ಲು ತೂರಾಟ ನಡೆಸಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಆದರೆ ಈ ಘಟನೆ ನಟಿ ರವೀನಾ ಟಂಡನ್ ರನ್ನು ಕೆರಳಿಸಿದೆ. ಕಲ್ಲುತೂರಾಟ ನಡೆಸಿದವರ ವಿರುದ್ಧ ರವೀನಾ ಟಂಡನ್ ಅವರು ಭೋಪಾಲ್ ವನ್ಯಜೀವಿ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ನಟಿ ಸ್ವತಃ ತಾವು ವನವಿಹಾರ ನಿಯಮ ಗಮನದಲ್ಲಿಟ್ಟುಕೊಂಡು ಅರಣ್ಯವನ್ನು ಸ್ವಚ್ಛಗೊಳಿಸುವ ವೇಳೆ ಫೋಟೋ, ವಿಡಿಯೋ ಕ್ಲಿಕ್ಕಿಸಿರುವುದನ್ನು ದೃಶ್ಯದಲ್ಲಿ ಕಾಣಬಹುದು. ಪ್ರವಾಸಿಗರು ಜಂಗಲ್ ಸಫಾರಿ ವೇಳೆ ಕಾಡುಪ್ರಾಣಿಗಳ ಹತ್ತಿರ ಹೋಗಬಾರದೆಂಬ ನಿಯಮವಿದೆ. ಆದರೆ ಕಾಡುಪ್ರಾಣಿಗಳ ಸಮೀಪ ಹೋಗಿರುವ ವಿಡಿಯೋವನ್ನು ನಟಿ ರವೀನಾ ಟಂಡನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ತನಿಖೆಗೆ ಆದೇಶಿಸಲಾಗಿದೆ.
ಹುಲಿ ಬಳಿ ನಟಿ ಜಿಪ್ಸಿ: ವಾರದ ಹಿಂದೆ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಚುರ್ನಾದಲ್ಲಿ ಜಂಗಲ್ ಸಫಾರಿಗೆ ಬಂದಿದ್ದ ಚಿತ್ರನಟಿ ರವೀನಾ ಟಂಡನ್ ಅವರ ಜಿಪ್ಸಿ ಹತ್ತಿರ ಹುಲಿ ಬಂದಿರುವ ವಿಡಿಯೋ ಬಹಿರಂಗವಾಗಿದೆ. ಈ ಬಗ್ಗೆ ತನಿಖೆಯೂ ಶುರುವಾಗಿದೆ. ನಿಯಮದ ಪ್ರಕಾರ, ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಂಗಲ್ ಸಫಾರಿ ವೇಳೆ, ಯಾವುದೇ ವಾಹನವನ್ನು ಕಾಡು ಪ್ರಾಣಿಗಳ ಹತ್ತಿರ ತೆಗೆದುಕೊಂಡು ಹೋಗುವಂತಿಲ್ಲ. ಆದ್ರೆ ರವೀನಾ ಟಂಡನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕೆಲವು ಪೊಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 'ನನ್ನ ಹೃದಯ ಎಲ್ಲಿಗೆ ಹಿಂತಿರುಗಿದೆ' (Back to where my heart belongs) ಎಂದು ಬರೆಯಲಾಗಿದೆ, ವಿಡಿಯೋದಲ್ಲಿ, ಹುಲಿ ರವೀನಾ ಅವರ ಜಿಪ್ಸಿಗೆ ಹತ್ತಿರ ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಜಿಪ್ಸಿಯನ್ನು ಹುಲಿಯ ಬಳಿ ಸುಮಾರು 20 ಮೀಟರ್ ವರೆಗೆ ತೆಗೆದುಕೊಂಡು ಹೋಗಲಾಗಿದೆ. ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಎಸ್‌ಡಿಒ ಧೀರಜ್ ಸಿಂಗ್ ಚೌಹಾಣ್ ಅವರು ತನಿಖೆ ನಡೆಸಲಿದ್ದಾರೆ.