ಕರ್ನಾಟಕ

karnataka

ETV Bharat / entertainment

ಡಾಲಿ ಅಭಿನಯದ 'ಗುರುದೇವ್​ ಹೊಯ್ಸಳ' ಬಿಡುಗಡೆ: ಶುಭ ಕೋರಿದ ರಶ್ಮಿಕಾ ಮಂದಣ್ಣ ​ - ಈಟಿವಿ ಭಾರತ ಕನ್ನಡ

ಡಾಲಿ ಧನಂಜಯ್​ ಅವರ 'ಗುರುದೇವ್​ ಹೊಯ್ಸಳ' ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ಶುಭ ಹಾರೈಸಿದ್ದಾರೆ.

movie
ಗುರುದೇವ್​ ಹೊಯ್ಸಳ

By

Published : Mar 30, 2023, 11:35 AM IST

ಡಾಲಿ ಧನಂಜಯ್​ ಅಭಿನಯದ ಬಹುನಿರೀಕ್ಷಿತ 25 ನೇ ಚಿತ್ರ 'ಗುರುದೇವ್​ ಹೊಯ್ಸಳ' ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾದಲ್ಲಿ ಡಾಲಿ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮಾಸ್​ ಜೊತೆಗೆ ಫ್ಯಾಮಿಲಿ ಎಂಟರ್​ಟೈನರ್​ ಚಿತ್ರವಿದು. ಸಿನಿಮಾ ಯಶಸ್ಸಿಗಾಗಿ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭ ಹಾರೈಸುತ್ತಿದ್ದು, ರಶ್ಮಿಕಾ ಮಂದಣ್ಣ ಕೂಡ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಾಕಿಕೊಂಡಿರುವ ಸ್ಯಾಂಡಲ್​ವುಡ್​ ಸಾನ್ವಿ ಗುರ್​ದೇವ್​ ಹೊಯ್ಸಳಗೆ ತಮ್ಮ ಶುಭ ಹಾರೈಕೆ ತಿಳಿಸಿದ್ದಾರೆ.

ಕನ್ನಡದ ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿದ್ದ ರಶ್ಮಿಕಾ ಮಂದಣ್ಣ ಸದ್ಯ ಬಹುಭಾಷಾ ತಾರೆಯಾಗಿದ್ದಾರೆ. ತಮ್ಮ ಹೇಳಿಕೆಗಳಿಂದಾಗಿ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾ ಕನ್ನಡ ಸಿನಿಮಾಗಳಿಂದ ದೂರ ಉಳಿದುಬಿಟ್ಟಿದ್ದಾರೆ. ಇದೀಗ ಡಾಲಿ ಧನಂಜಯ್​ ಅವರ ಗುರುದೇವ್​ ಹೊಯ್ಸಳಗೆ ರಶ್ಮಿಕಾ ಶುಭ ಹಾರೈಸಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಚಿತ್ರದ 19 ಸೆಕೆಂಡ್​ನ ವಿಡಿಯೋ ಶೇರ್​ ಮಾಡಿ, ಧನಂಜಯ್​ ಅವರನ್ನು ಟ್ಯಾಗ್​ ಮಾಡಿದ್ದಾರೆ.

'ಗುರುದೇವ್​ ಹೊಯ್ಸಳ' ಸಿನಿಮಾಗೆ ರಶ್ಮಿಕಾ ಮಂದಣ್ಣ ವಿಶ್​

ಅದೇ ಸ್ಟೋರಿಗೆ ನಿರ್ಮಾಪಕ ವಿಜಯ್ ಕಿರಗಂದೂರು, ನಾಯಕಿ ಅಮೃತಾ ಅಯ್ಯಂಗಾರ್​, ಕೆಜಿಆರ್​ ಸ್ಟುಡಿಯೋಸ್​, ನಿರ್ದೇಶಕ ವಿಜಯ್​, ಕಾರ್ತಿಕ್​ ಗೌಡ, ನಿರ್ಮಾಪಕ ಯೋಗಿರಾಜು, ಸಿನಿಮಾಟೋಗ್ರಾಫರ್​ ಕಾರ್ತಿಕ್​, ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಹಾಗೂ ಆನಂದ್​ ಆಡಿ​ಯೋ ಅನ್ನು ಸಹ ಟ್ಯಾಗ್​ ಮಾಡಿದ್ದಾರೆ. ಜೊತೆಗೆ ಇಂದು ಬಿಡುಗಡೆಯಾಗುತ್ತಿರುವ ತೆಲುಗು ಸಿನಿಮಾ ದಸರಾ ಚಿತ್ರತಂಡಕ್ಕೂ ರಶ್ಮಿಕಾ ಶುಭ ಹಾರೈಸಿದ್ದಾರೆ. ನಾನಿ, ಕೀರ್ತಿ ಸುರೇಶ್​, ದೀಕ್ಷಿತ್​ ಹಾಗೂ ದಸರಾ ತಂಡಕ್ಕೆ ದೊಡ್ಡ ಚಪ್ಪಾಳೆ. ನಿಮಗೆಲ್ಲರಿಗೂ ನನ್ನ ಕಡೆಯಿಂದ ಆಲ್​ ದಿ ಬೆಸ್ಟ್​ ಎಂದು ಬರೆದಿದ್ದಾರೆ.

ಇದನ್ನೂ ಓದಿ:ನಾಳೆ ತೆರೆ ಮೇಲೆ ಅಬ್ಬರಿಸಲಿರುವ 'ಗುರುದೇವ್​ ಹೊಯ್ಸಳ'; ರಾಣಿ ಜೊತೆ ಲೈವ್​ ಬಂದ ಧನಂಜಯ್​

ಗುರುದೇವ್​ ಹೊಯ್ಸಳ ಚಿತ್ರವನ್ನು ವಿಜಯ್ ಕಿರಗಂದೂರು ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಿಸಿದ್ದಾರೆ. ವಿಜಯ್​ ಅವರ ನಿರ್ದೇಶನವಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ. ಖಡಕ್​ ಡೈಲಾಗ್​ಗಳನ್ನು ಮಾಸ್ತಿ ಅವರು ಬರೆದಿದ್ದು, ಕಾರ್ತಿಕ್​ ಅವರ ಛಾಯಗ್ರಹಣ ಮತ್ತು ದೀಪು ಎಸ್​ ಕುಮಾರ್​ ಅವರ ಸಂಕಲನವಿದೆ.

ಧನಂಜಯ್ ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್, ರಘು ಶಿವಮೊಗ್ಗ, ಅನಿರುದ್ಧ್ ಭಟ್, ಮಯೂರಿ ನಟರಾಜ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಮೊದಲು 'ಹೊಯ್ಸಳ' ಎಂಬುದಾಗಿತ್ತು. ಬಳಿಕ ಬೇರೆ ಒಂದು ಚಿತ್ರ ಇದೇ ಹೆಸರಿನಲ್ಲಿ ನಿರ್ಮಾಣ ಆಗುತ್ತಿರುವ ಕಾರಣಕ್ಕೆ ಸಿನಿಮಾದ ಹೆಸರನ್ನು 'ಗುರುದೇವ್ ಹೊಯ್ಸಳ' ಎಂಬುದಾಗಿ ಮರುನಾಮಕರಣ ಮಾಡಲಾಗಿದೆ.

ಇದನ್ನೂ ಓದಿ:ರಕ್ಷಿತ್-ಶ್ರೀನಿಧಿ ಮಧ್ಯೆ 'ಹಾಗೇ ಸುಮ್ಮನೆ' ಕಮೆಂಟ್​; ಏನ್​ ನಡೀತಿದೆ ಶೆಟ್ರೇ? ಎಂದ ಫ್ಯಾನ್ಸ್​

ABOUT THE AUTHOR

...view details