ಹೈದರಾಬಾದ್:ಕನ್ನಡ ಚಿತ್ರರಂಗ ತನ್ನನ್ನು ಬ್ಯಾನ್ ಮಾಡಿದೆ ಎಂಬ ಸುದ್ದಿಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಗಾಳಿ ಸುದ್ದಿಯನ್ನು ಅಲ್ಲಗಳೆದಿರುವ ಅವರು, ತಮ್ಮ ಮೇಲೆ ಯಾವುದೇ ನಿಷೇಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂತಾರ ಸಿನಿಮಾ ನೋಡಿ ಕೆಲವರು ಹೊಟ್ಟೆಕಿಚ್ಚು ಪಟ್ಟಿದ್ದು ನಿಜ. ಆದರೆ, ನಾನು ಸಿನಿಮಾ ನೋಡಿದ ಬಳಿಕ ತಂಡಕ್ಕೆ ಸಂದೇಶ ಕಳುಹಿಸಿದ್ದೆ. ಈತರಹದ ಮಾತುಕತೆ ಆಗಲಿ ಅಥವಾ ನಟರ ನಡುವೆ ಏನಾಗುತ್ತಿದೆ ಎಂಬುದಾಗಲಿ ಹೊರಗಿನವರಿಗೆ ಗೊತ್ತಾಗುವುದಿಲ್ಲ. ನನ್ನ ಖಾಸಗಿ ವಿಷಯಗಳನ್ನು ಕ್ಯಾಮರಾದಲ್ಲಿ ಇಟ್ಟುಕೊಂಡು ಜಗತ್ತಿಗೆ ತೋರಿಸಲು ಸಾಧ್ಯವಿಲ್ಲ.