ಕರ್ನಾಟಕ

karnataka

ETV Bharat / entertainment

ರಶ್ಮಿಕಾ ಮಂದಣ್ಣ ಆದ್ಯತೆಯ ಪಟ್ಟಿಯಲ್ಲಿ ಈ ವಿಚಾರಕ್ಕೆ ಮೊದಲ ಪ್ರಾಶಸ್ತ್ಯ! - ರಶ್ಮಿಕಾ ಮಂದಣ್ಣ ಜಿಮ್​

ನಟಿ ರಶ್ಮಿಕಾ ಮಂದಣ್ಣ ಇನ್​ಸ್ಟಾ ಸ್ಟೋರಿಸ್​ನಲ್ಲಿ ತಮ್ಮ ಜಿಮ್​, ವರ್ಕ್ ಔಟ್​ ಫೋಟೋ ಹಂಚಿಕೊಂಡಿದ್ದಾರೆ. ಇದು ಈಗ ನೆಟ್ಟಿಗರನ್ನು ಸೆಳೆಯುವಂತೆ ಮಾಡಿದೆ.

Rashmika Mandanna
ರಶ್ಮಿಕಾ ಮಂದಣ್ಣ ಫಿಟ್ನೆಸ್

By

Published : Apr 18, 2023, 5:07 PM IST

ನಟಿ ರಶ್ಮಿಕಾ ಮಂದಣ್ಣ ಸದ್ಯ ಉತ್ತರ ಮತ್ತು ದಕ್ಷಿಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್, ಟಾಲಿವುಡ್​ ಸಿನಿಮಾ ಸೆಟ್‌ಗಳಲ್ಲಿ ನಿರತರಾಗಿದ್ದಾರೆ. ಸಿನಿಮಾಗಳ ಬ್ಯುಸಿ ಶೆಡ್ಯೂಲ್​ ನಡುವೆ ಪ್ರಶಸ್ತಿ ಪ್ರದಾನ ಸಮಾರಂಭ, ಜಾಹೀರಾತುಗಳು, ಫೋಟೋಶೂಟ್ ಮತ್ತು ಸಿನಿಮಾ ಈವೆಂಟ್​ಗಳಿಗೂ ಸಾಕ್ಷಿಯಾಗುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅವರ ಆದ್ಯತೆ ಪಟ್ಟಿಯಲ್ಲಿ ಫಿಟ್ನೆಸ್ ಅಗ್ರಸ್ಥಾನದಲ್ಲಿದೆ. ರಶ್ಮಿಕಾ ಆಗಾಗ್ಗೆ ತಮ್ಮ ಫಿಟ್‌ನೆಸ್ ತರಬೇತಿ ಅವಧಿಯ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಂದು ಕೂಡ ತಮ್ಮ ವರ್ಕ್​​ಔಟ್​ ಏರಿಯಾದ ಫೋಟೋವೊಂದನ್ನು ಅಭಿಮಾನಿಗಳಿಗಾಗಿ ಅವರು ಹಂಚಿಕೊಂಡಿದ್ದಾರೆ.

ಫಿಟ್ನೆಸ್ ವಿಷಯಕ್ಕೆ ಬಂದರೆ ಶ್ರೀವಲ್ಲಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು ಮಾಜಿ ಫುಟ್ಬಾಲ್ ಆಟಗಾರ ಮತ್ತು ಸ್ವಯಂ ಸುಧಾರಣೆ ತರಬೇತುದಾರ ಕರಣ್ ಸಾವ್ಹ್​ನೇ (Karan Sawhney) ಅವರಿಂದ ಮಾರ್ಗದರ್ಶನ ಪಡೆಯುತ್ತಾರೆ. ತರಬೇತಿ ಅವಧಿಗಳಿಂದ ಪುಷ್ಪ ತಾರೆಯೊಂದಿಗಿನ ವಿಡಿಯೋಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುವ ಕರಣ್, ಇದೀಗ ರಶ್ಮಿಕಾ ಅವರೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಟಿಗೆ ಟ್ಯಾಗ್​ ಮಾಡಿದ್ದಾರೆ. "ರಶ್ ಅವರ್ ವಿತ್ ರಶ್ಮಿಕಾ ಮಂದಣ್ಣ" ಎಂದು ಕ್ಯಾಪ್ಷನ್​​ ನೀಡಿದ್ದಾರೆ. ಈ ಪೋಸ್ಟ್​ ಅನ್ನು ರಶ್ಮಿಕಾ ಅವರು ತಮ್ಮ ಖಾತೆಯಲ್ಲಿ ರೀ ಪೋಸ್ಟ್ ಮಾಡಿಕೊಂಡಿದ್ದಾರೆ.

ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್ ಅನ್ನು ಮರು ಹಂಚಿಕೊಂಡು ಕರಣ್ ಅವರಲ್ಲಿ "ನೀವು ಏಕೆ ಕೋಪಗೊಂಡಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ. ರಶ್ಮಿಕಾ ಅವರ ಟೀಶರ್ಟ್​ನಲ್ಲಿ ರಶ್ 5 ಎಂದು ಬರೆದಿದೆ. ಕರಣ್ ನಟಿ ಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲಸದ ವಿಚಾರ ಗಮನಿಸುವುದಾದರೆ, ಕನ್ನಡ ಚಿತ್ರರಂಗದಿಂದ ವೃತ್ತಿ ಜೀವನ ಆರಂಭಿಸಿರುವ ರಶ್ಮಿಕಾ ಮಂದಣ್ಣ ಮುಂದೆ ನಟ ರಣ್​​ಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿಮಲ್​, ಮಿಷನ್ ಮಜ್ನು ಬಳಿಕ ನಟಿಸುತ್ತಿರುವ ಬಾಲಿವುಡ್​ ಚಿತ್ರವಿದು. ಪರಿಣಿತಿ ಚೋಪ್ರಾ ಬದಲಿಗೆ ರಶ್ಮಿಕಾ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ ಮತ್ತು ರಣ್​​​ಬೀರ್ ಅವರ ಪ್ರೇಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ಈ ಚಿತ್ರ ಆಗಸ್ಟ್‌ನಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಇದನ್ನೂ ಓದಿ:'ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು'?: ಚೇತನ್​​​ ವೀಸಾ ರದ್ಧತಿ ಬಗ್ಗೆ ನಟ ಕಿಶೋರ್ ಹೇಳಿದ್ದಿಷ್ಟು!

ಕೊನೆಯ ಹಂತದ ಶೂಟಿಂಗ್​ನಲ್ಲಿರುವ 'ಪುಷ್ಪಾ : ದಿ ರೂಲ್' ಬಹು ನಿರೀಕ್ಷಿತ ಚಿತ್ರ. ಸೌತ್​ ಸೂಪರ್​ ಸ್ಟಾರ್ ಅಲ್ಲು ಅರ್ಜುನ್​ ನಟನೆಯ ಈ ಚಿತ್ರ 2021ರ ಕೊನೆಯಲ್ಲಿ ಬಿಡುಗಡೆಯಾದ ಪುಷ್ಪ: ದಿ ರೈಸ್‌ನ ಮುಂದುವರಿದ ಭಾಗ. ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರವನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ನಡು ಬಳುಕಿಸಿದ ಊರ್ವಶಿ ರೌಟೇಲಾ: ಪಾಕ್​ ಕ್ರಿಕೆಟಿಗನ ಜತೆ ಡೇಟಿಂಗ್​ ವದಂತಿ..​ ಅಭಿಮಾನಿಗಳಿಂದ ಕಮೆಂಟ್​​

ವೆಂಕಿ ಕುಡುಮುಲ ನಿರ್ದೇಶನದ 'VNRTrio' ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಟಾಲಿವುಡ್​ ನಟ ನಿತಿನ್ ಜೊತೆ ಎರಡನೇ ಬಾರಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ರೈನ್ ಬೋ ಚಿತ್ರಕ್ಕೆ ರಶ್ಮಿಕಾ ನಾಯಕ ನಟಿ.

ABOUT THE AUTHOR

...view details