ಕರ್ನಾಟಕ

karnataka

ETV Bharat / entertainment

'ಸ್ನೇಹಿತರು ಫೋಟೋಗೆ ಫೋಸ್​ ಕೇಳಿದ್ರೆ ನಾನು​ ಹೀಗೆ..': ಶಕ್ತಿಮಾನ್​ ಲುಕ್​ನಲ್ಲಿ ರಶ್ಮಿಕಾ ಮಂದಣ್ಣ - ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕರ್ಷಕ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

rashmika manadanna
ರಶ್ಮಿಕಾ ಮಂದಣ್ಣ

By

Published : Feb 19, 2023, 1:20 PM IST

ನಟಿ​ ರಶ್ಮಿಕಾ ಮಂದಣ್ಣ ಒಂದಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿರಿಸಿದ ನಟಿ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಸದಾ ಸೋಷಿಯಲ್​ ಮೀಡಿಯಾದಲ್ಲಿ ಆಕ್ಟಿವ್​ ಆಗಿರುವ ರಶ್ಮಿಕಾ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಸಖತ್​​ ಲುಕ್​ನಲ್ಲಿ ಕಾಣಿಸಿಕೊಂಡಿರುವ ಕೊಡಗಿನ ಕುವರಿಯ ಬ್ಯೂಟಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಹೊಸ ಸಿನಿಮಾ ಪ್ರಾಜೆಕ್ಟ್ ರಶ್ಮಿಕಾ​ ಕೈ ಸೇರಿದ್ದು, ಈ ವರ್ಷವೇ ಮೂರ್ನಾಲ್ಕು ಸಿನಿಮಾಗಳು ತೆರೆ ಕಾಣಲಿವೆ. ಈ ನಡುವೆ ಸ್ವಲ್ಪ ಬಿಡುವು ತೆಗೆದುಕೊಂಡ ನಟಿ ರಜಾ ದಿನಗಳನ್ನು ಎಂಜಾಯ್​ ಮಾಡುತ್ತಿದ್ದಾರೆ. ಇದರ ಒಂದು ನೋಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಸಮುದ್ರದ ಬ್ಯಾಕ್​ ಗ್ರೌಂಡ್​ ಬರುವಂತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ವೈಟ್​ ಕ್ರಾಪ್​ ಟಾಪ್​ ಮತ್ತು ಫ್ಯಾಷನ್​ ಜೀನ್ಸ್​ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಬಾಲ್ಕನಿಯಲ್ಲಿ ನಿಂತು ತೆಗೆದ ಪಿಕ್ಚರ್​ ಇದಾಗಿದ್ದು, "ನನ್ನ ಸ್ನೇಹಿತರು ಫೋಟೋಗೆ ಫೋಸ್​ ಕೇಳಿದ್ರೆ, ನನ್ನ ಫೋಸ್​ ಇದು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:"ನನ್ನ ಉಸಿರಾಟದಲ್ಲೂ ತಪ್ಪು ಕಂಡು ಹಿಡಿಯುವ ಜನರು..": ಟ್ರೋಲಿಗರ ವಿರುದ್ಧ ರಶ್ಮಿಕಾ ಬೇಸರ

ಶಕ್ತಿಪ್ರದರ್ಶನ ಮಾಡುವಂತಿರುವ ಫೋಟೋದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾಗೆ ಲೈಕ್​, ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ತಮ್ಮ ನೆಚ್ಚಿನ ಹೀರೋಯಿನ್​ ಬ್ಯೂಟಿ ಲುಕ್​ಗೆ ಅಭಿಮಾನಿಗಳು ಬೋಲ್ಡ್​ ಆಗಿದ್ದಾರೆ. ಮೊದಲಿಗೆ ಮಾಡೆಲಿಂಗ್​ ಕ್ಷೇತ್ರಕ್ಕೆ ಕಾಲಿರಿಸಿ, ಬಳಿಕ ಸಿನಿಮಾ ರಂಗವನ್ನು ಪ್ರವೇಶಿಸಿದ ರಶ್ಮಿಕಾಗೆ ಅವಕಾಶಗಳ ಬಾಗಿಲು ತೆರೆಯಿತು. ಕೋಟಿ ಮೊತ್ತದಲ್ಲಿ ಸಂಪಾದನೆ ಮಾಡುತ್ತಿರುವ ನಟಿ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಬಹುಭಾಷೆಗಳಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಾಲಿವುಡ್​ ಬಹುಬೇಡಿಕೆ ನಟ ಸಿದ್ಧಾರ್ಥ್​​ ಮಲ್ಲೋತ್ರ ಜೊತೆ ಮಿಷನ್​ ಮಜ್ನು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಕೆಲ ಟೀಕೆಗಳ ನಡುವೆಯೂ ಸಿನಿಮಾ ಉತ್ತಮ ವೀಕ್ಷಣೆ ಪಡೆದಿತ್ತು. ಮಿಷನ್​ ಮಜ್ನು ಬಿಡುಗಡೆಯಾದ ದಿನದಿಂದ 18 ದೇಶಗಳಲ್ಲಿ ಟಾಪ್​ 10 ಚಲನಚಿತ್ರಗಳ ಪಟ್ಟಿಯಲ್ಲಿ ಟ್ರೆಂಡಿಂಗ್​ನಲ್ಲಿದೆ. ಅವರ ಮುಂದಿನ ಸಿನಿಮಾ ಅನಿಮಲ್​ ಆಗಿದ್ದು, ಪ್ರೇಕ್ಷಕರ ಬಹುನಿರೀಕ್ಷಿತ ಚಿತ್ರ ಇದಾಗಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾ ಇದಾಗಿದ್ದು, ರಣಬೀರ್​ ಕಪೂರ್​, ಅನಿಲ್​ ಕಪೂರ್​ ಮತ್ತು ಬಾಬಿ ಡಿಯೋಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಆಗಸ್ಟ್​ 11 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬಹುಭಾಷೆಯಲ್ಲಿ ನಟನೆ: 2016ರಲ್ಲಿ ಕಿರಿಕ್​ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಂದಣ್ಣ ಬಳಿಕ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದರು. ಬಳಿಕ ಟಲೋ ಚಿತ್ರದ ಮೂಲಕ ಟಾಲಿವುಡ್​ ಪ್ರವೇಶಿಸಿದ ಅವರು ಅನೇಕ ಹಿಟ್​ ಸಿನಿಮಾಗಳನ್ನು ಮಾಡಿದರು. ಗೀತಾ ಗೋವಿಂದಂ ಚಿತ್ರದಲ್ಲಿ ನಟ ವಿಜಯ್​ ದೇವರಕೊಂಡ ಜೊತೆ ಅಭಿನಯಿಸಿ ತೆಲುಗು ಸಿನಿಮಾ ಪ್ರೇಕ್ಷಕರ ಫೇವರೆಟ್​ ಹೀರೋಯಿನ್​ ಆದರು. ಬಳಿಕ ಅಲ್ಲು ಅರ್ಜುನ್​ ಜೊತೆ ನಟಿಸಿರುವ ಪುಷ್ಪ ಸಿನಿಮಾ ಸೂಪರ್​ ಹಿಟ್​ ಆಯಿತು. ಇದೀಗ ಬಾಲಿವುಡ್​ ಅಂಗಳಕ್ಕೂ ಕಾಲಿಟ್ಟಿರುವ ರಶ್ಮಿಕಾ ಸಿನಿಮಾ ಕೆಲಸಗಳಲ್ಲಿ ಫುಲ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:ವಿಜಯ್ ಇಷ್ಟ ಅನ್ನೋ​ ಕಾರಣದಿಂದ ನಾನು ಆ ಸಿನಿಮಾ ಒಪ್ಪಿಕೊಂಡೆ : ನಟಿ ರಶ್ಮಿಕಾ ಮಂದಣ್ಣ

ABOUT THE AUTHOR

...view details