ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ ಸ್ಯಾಂಡಲ್‌ವುಡ್ ಕ್ವೀನ್ ಆಗಿ ಮೆರೆದ ನಟಿ ರಮ್ಯಾ. ಸದ್ಯ ರಮ್ಯಾ ವಿರುದ್ಧ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ವಿವಾದದ ಪ್ರಕರಣದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಹಿನ್ನಡೆಯಾಗಿದೆ. ನಟಿ ರಮ್ಯಾ ತಮ್ಮ ಅನುಮತಿ ಇಲ್ಲದೆ ತಮ್ಮ ಬಣ್ಣದ ಗೆಜ್ಜೆ ಸಿನಿಮಾದ ಹಾಡಿನ ಸಾಲುಗಳನ್ನು ಪಡೆದುಕೊಡು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅದು ಕಾಪಿರೈಟ್ ಆಗುತ್ತದೆ ಎಂದು ಫಿಲಂ ಚೇಂಬರ್‌ಗೆ ದೂರು ನೀಡಿದ್ದರು. ಬಳಿಕ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ಈ ಪ್ರಕರಣ ಸಂಬಂಧ ಬುಧವಾರ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್, ಹಾಡಿನ ಸಾಲುಗಳನ್ನು ಸಿನಿಮಾ ಟೈಟಲ್ ಆಗಿ ಬಳಸಿದರೆ ಕಾಪಿರೈಟ್ ಆಗುವುದಿಲ್ಲ. ಜತೆಗೆ ಈ ಟೈಟಲ್ ಅನ್ನು ರಮ್ಯಾ ಬೇರೆಯವರಿಂದ ಪಡೆದುಕೊಂಡಿದ್ದಾರೆ. ಹೀಗಾಗಿ ಇದು ಕಾಪಿ ರೈಟ್ ಅಲ್ಲ. ಆದರಿಂದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೂಟಿಂಗ್ ಮಾಡಬಹುದು ಮತ್ತು ಚಿತ್ರದ ಬಿಡುಗಡೆ ಕೂಡ ಮಾಡಬಹುದು ಎಂದು ಕೋರ್ಟ್ ಆದೇಶ ನೀಡಿದೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಪೋಸ್ಟರ್ ಒಂದು ಮೊಟ್ಟೆಯ ಕಥೆ ಸಿನಿಮಾದ ಖ್ಯಾತಿಯ ರಾಜ್ ಬಿ. ಶೆಟ್ಟಿ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ, ನಿರ್ದೇಶಕ ರಾಜೇಂದ್ರ ಸಿಂಗ್, ಈ ಟೈಟಲ್ ತನ್ನ ಬಣ್ಣದ ಗೆಜ್ಜೆ ಸಿನಿಮಾದ ಹಾಡಿನ ಸಾಲುಗಳು.. ಅವುಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸುವಂತಿಲ್ಲ. ಜತೆಗೆ ಇದೇ ಟೈಟಲ್ ಇಟ್ಟುಕೊಂಡು ಅಂಬರೀಶ್ ಅವರ ಸಿನಿಮಾ ಮಾಡಲು ಮುಂದಾಗಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಪುತ್ರ ಅಭಿಷೇಕ್ ಅಂಬರೀಶ್ ಜತೆ ಸಿನಿಮಾಗೆ ತಯಾರಿ ಮಾಡಿಕೊಂಡಿದೆ. ಅಷ್ಟರಲ್ಲಿ ರಮ್ಯಾ ಟೈಟಲ್ ಅನ್ನು ಕಾಪಿರೈಟ್ ಮಾಡಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು. ಆದ್ರೀಗ ರಮ್ಯಾಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ವಿಚಾರದಲ್ಲಿ ಗೆಲುವು ಸಿಕ್ಕಂತೆ ಆಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಚಿತ್ರವನ್ನ ರಮ್ಯಾ ನಿರ್ಮಾಣ ಮಾಡಿದ್ದಾರೆ.
ಟೈಟಲ್ ವಿವಾದದಲ್ಲಿ ಮೋಹಕ ತಾರೆಗೆ ಸಿಕ್ತು ಜಯ ಪ್ರೇರಣಾ ಮತ್ತು ಅನಿಕೇತ್ ಎಂಬ ಮುಖ್ಯ ಪಾತ್ರಗಳಲ್ಲಿ ಸಿರಿ ರವಿಕುಮಾರ್ ಹಾಗು ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪ್ರತಿಭಾನ್ವಿತ ನಟರ ದಂಡೇ ಇದ್ದು, ಮುಖ್ಯವಾಗಿ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆಪಿ ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನಿತರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್ ಶ್ರೀಯಾನ್ - ಛಾಯಾಗ್ರಹಣ ಹಾಗು ಸಂಕಲನದ ಜವಾಬ್ದಾರಿಯನ್ನು ನಿರ್ವಹಹಿಸಲಿದ್ದಾರೆ. ಸದ್ಯ ಪೋಸ್ಟರ್ನಿಂದಲೇ ಕುತೂಹಲ ಹುಟ್ಟಿಸಿರೋ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಆದಷ್ಟು ಬೇಗ ಈ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.
ಓದಿ:ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ಶುಭಾಶಯ ಕೋರಿದ ರಕ್ಷಿತ್ ಶೆಟ್ಟಿ